ಮುಂಡಾಜೆ: ನೇತ್ರಾವತಿ ಸಂಜೀವಿನಿ ಮಹಿಳಾ ಒಕ್ಕೂಟ ಇದರ ಮಾಸಿಕ ಸಭೆ ಯನ್ನು ನ.12ರಂದು ಒಕ್ಕೂಟದ ಅಧ್ಯಕ್ಷೆ ಜೇಸಿ ಆಂಟನಿ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಈ ಸಭೆಯಲ್ಲಿ ತಾಲೂಕು ವಲಯ ಮೇಲ್ವಿಚಾರಕ ಜಯಾನಂದ ಉಪಸ್ಥಿತರಿದ್ದರು. ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿಗಳು, ಹಾಜರಿದ್ದರು.
ಎಲ್‌ಸಿಆರ್‌ಪಿ ಶಾಲಿನಿ ಯವರು ಎಲ್ಲರನ್ನು ಸ್ವಾಗತಿಸಿದರು. ವರದಿ ಮಂಡನೆಯನ್ನು ಎಂಬಿಕೆ ಮೀನಾ ಮಂಡಿಸಿದರು.
ಸಿಬಿಆರ್‌ಎಂ ಸಭೆಯನ್ನು ನಡೆಸಲಾಯಿತು. ಬ್ಯಾಂಕ್ ಆಫ್ ಬರೋಡ ಬ್ಯಾಂಕ್ ಮ್ಯಾನೇಜರ್ ಜಗದ ಇವರು ಬ್ಯಾಂಕ್ ನಲ್ಲಿ ಸಿಗುವ ಸಾಲ ಸೌಲಭ್ಯ ಗಳ ಬಗ್ಗೆ ಸಂಜೀವಿನಿ ಮಹಿಳೆಯರಿಗೆ ಮಾಹಿತಿ ನೀಡಿದರು. ನಮ್ಮ ಸಂಘದ ಸದಸ್ಯರಾದ ಅರುಣಾ ಇವರ ಜೋಳದ ರೊಟ್ಟಿಯನ್ನು ಮಾರುಕಟ್ಟೆ ಇಡಲಾಯಿತು ಮತ್ತು ಜನನಿ ಸಂಜೀವಿನಿ ಸಂಘಕ್ಕೆ ಹೈನುಗಾರಿಕೆ ನಡೆಸಲು cif ಸಾಲದ ಚೆಕ್ ಅನ್ನು ಅಧ್ಯಕ್ಷರ ಸಮ್ಮುಖದಲ್ಲಿ ನೀಡಲಾಯಿತು.
ಎಲ್‌ಸಿಆರ್‌ಪಿ ಪುಷ್ಪಾವತಿ ಧನ್ಯವಾದಗಳೊಂದಿಗೆ ಸಭೆಯನ್ನು ಮುಕ್ತಾಯ ಗೊಳಿಸಲಾಯಿತು.















