November 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನ.16: “ಜ್ಞಾನ ಚಂದನ ಹಾಗೂ ಜ್ಞಾನ ನಂದನ” ನೈತಿಕ ಮೌಲ್ಯಾಧಾರಿತ ಪುಸ್ತಕದ ಜಿಲ್ಲಾಮಟ್ಟದ ಸ್ಪರ್ಧೆಗೆ ಚಾಲನೆ

ಬೆಳ್ತಂಗಡಿ: ಡಾ|| ಡಿ. ವೀರೇಂದ್ರ ಹೆಗ್ಗಡೆಯವರ ದೂರದೃಷ್ಟಿ ಹಾಗೂ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ ಶಾಂತಿವನ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದೊಂದಿಗೆ. ಇಂದಿನ ವಿದ್ಯಾರ್ಥಿ ಸಮೂಹದಲ್ಲಿ ಜೀವನ ಮೌಲ್ಯಗಳು, ಸದ್ಗುಣಗಳು ಹಾಗೂ ಭಾರತೀಯ ಸಂಸ್ಕಾರವನ್ನು ಬೇರೂರಿಸುವ ಮಹದುದ್ದೇಶದೊಂದಿಗೆ ಪ್ರತೀ ವರ್ಷದಂತೆ 2026ನೇ ಶೈಕ್ಷಣಿಕ ಸಾಲಿನಲ್ಲಿ 1 ಲಕ್ಷ “ಜ್ಞಾನ ಚಂದನ ಹಾಗೂ ಜ್ಞಾನ ನಂದನ” ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಶಾಲೆಗಳಿಗೆ ವಿತರಿಸಲಾಗಿದೆ.

ಪುಸ್ತಕಗಳ ಅಧ್ಯಯನದ ಜೊತೆಗೆ ವಿದ್ಯಾರ್ಥಿಗಳ ಪ್ರತಿಭೆ ಮತ್ತು ಮೌಲ್ಯಗ್ರಹಣೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ನಾಲ್ಕೂ ಜಿಲ್ಲೆಗಳಲ್ಲಿ ತಾಲೂಕು ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ನ.16ರಂದು ಸುಳ್ಯ ತಾಲೂಕಿನಿಂದ ಅಧಿಕೃತವಾಗಿ ಚಾಲನೆ ಪಡೆಯಲಿದ್ದು, ಮುಂದುವರಿದು ನಾಲ್ಕು ಜಿಲ್ಲೆಗಳ ನಿಗದಿತ ಸ್ಥಳಗಳಲ್ಲಿ ನಡೆಯಲಿವೆ ಎಂದು ಯೋಜನೆಯ ನಿರ್ದೇಶಕರಾದ ಡಾ. ಐ. ಶಶಿಕಾಂತ್ ಜೈನ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Related posts

ಪ್ರಿಕೆಜಿ ವಿದ್ಯಾರ್ಥಿ ಸಮಕ್ಷ್ ನ ಹುಟ್ಟು ಹಬ್ಬದ ಆಚರಣೆಯ ಪ್ರಯುಕ್ತ ಕುಂಭಶ್ರೀ ಆಂ.ಮಾ. ಶಾಲಾ ಕಾಲೇಜಿಗೆ ಗಡಿಯಾರ ಕೊಡುಗೆ

Suddi Udaya

ಭಾರೀ ಮಳೆ ಹಿನ್ನಲೆ: ನಾಳೆ ದ.ಕ. ಜಿಲ್ಲಾದ್ಯಂತ ಶಾಲೆ ಮತ್ತು ಪಿಯು ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ ಧರ್ಮಸ್ಥಳ ಭೇಟಿ

Suddi Udaya

ಮದ್ದಡ್ಕ; ಮಹಿಳೆಗೆ ಕಾರು ಡಿಕ್ಕಿ ಗಂಭೀರ ಗಾಯ

Suddi Udaya

ಬೆಳ್ತಂಗಡಿ: ವಿವಿಧ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗಳ ಖುಲಾಸೆ

Suddi Udaya

ಔಷಧ ರಹಿತ ಚಿಕಿತ್ಸಾ ಸೇವೆಗೆ ಆರೋಗ್ಯ ಸೇವಾ ರತ್ನ ಪ್ರಶಸ್ತಿ: ಸುಕೇಶ್ ಕುಮಾರ್ ಜೈನ್‌ ರವರಿಗೆ ಗೌರವ

Suddi Udaya
error: Content is protected !!