September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ: ವಿವಿಧ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗಳ ಖುಲಾಸೆ

ಬೆಳ್ತಂಗಡಿ : ಬೆಳ್ತಂಗಡಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಮಂಗಳೂರಿನ ಪಾವೂರು ನಿವಾಸಿಯಾದ ಚಂದ್ರಹಾಸ ಅಮೀನ್ ಎಂಬವರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ 4,75,000/- ಮೊತ್ತದ ಚೆಕ್ ಬೌನ್ಸ್ ಪ್ರಕರಣ, ಹಾಗೂ ಅದೇ ನ್ಯಾಯಾಲಯದಲ್ಲಿ ಮುಂಡಾಜೆ ನಿವಾಸಿ ಗುಣಪಾಲ ಎಂ ಎಸ್ ಎಂಬವರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ 81,721/- ಮೊತ್ತದ ಚೆಕ್ ಬೌನ್ಸ್ ಪ್ರಕರಣ, ಅದೇ ರೀತಿ ಕಾಜೂರು ನಿವಾಸಿಯಾದ ಸಮೀರ್ ಎಂಬರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ 1,00,000/- ಮೊತ್ತದ ಚೆಕ್ ಬೌನ್ಸ್ ಪ್ರಕರಣ ಹಾಗೂ ಮೂಡಬಿದ್ರೆ ನಿವಾಸಿಯಾದ ಸುನಿಲ್ ಎಂಬವರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ 45,000/- ಮೊತ್ತದ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗಳನ್ನು ನಿರ್ದೋಷಿ ಎಂದು ನ್ಯಾಯಾಲಯವು ತೀರ್ಪು ನೀಡಿರುತ್ತದೆ.

ಅದೇ ರೀತಿ ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ಮುಂಡಾಜೆ ನಿವಾಸಿಯಾದ ಪ್ರಸಾದ್ ಶೆಟ್ಟಿ ಎಂಬವರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ 1,00,000/- ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಯನ್ನು ನಿರ್ದೋಷಿ ಎಂದು ತೀರ್ಮಾನಿಸಿ ನ್ಯಾಯಾಲಯವು ತೀರ್ಪು ನೀಡಿರುತ್ತದೆ.

ಹಾಗೂ ಮಂಗಳೂರಿನ ಸೆಷನ್ಸ್ ನ್ಯಾಯಾಲಯದಲ್ಲಿ ಮುಂಡಾಜೆಯ ನಿವಾಸಿಯಾದ ರವಿ ಎನ್ ಎಂಬವರ ವಿರುದ್ಧ ಸಲ್ಲಿಸಲಾಗಿದ್ದ ರೂಪಾಯಿ 5,65,000/- ಗಳ ಚೆಕ್ಕು ಬೌನ್ಸ್ ಪ್ರಕರಣದಲ್ಲಿ ಆರೋಪಿಯನ್ನು ನಿರ್ದೋಷಿ ಎಂದು ತೀರ್ಮಾನಿಸಿ ನ್ಯಾಯಾಲಯವು ತೀರ್ಪು ನೀಡಿರುತ್ತದೆ.

ಸದ್ರಿ ಈ ಮೇಲಿನ ಎಲ್ಲಾ ಚೆಕ್ ಬೌನ್ಸ್ ಪ್ರಕರಣದಲ್ಲಿ ಆರೋಪಿಗಳ ಪರವಾಗಿ ಲೆಕ್ಸ್ ವಿಷನ್ ಲಾ ಚೇಂಬರ್ಸ್ ( ಬೆಳ್ತಂಗಡಿ ಹಾಗೂ ಬೆಂಗಳೂರು) ನ್ಯಾಯವಾದಿಗಳಾದ ನವಾಜ್ ಶರೀಫ್ ಎ, ಮಮ್ತಾಜ್ ಬೇಗಂ, ಇರ್ಷಾದ್, ಮತ್ತು ಸಪ್ನಾಝ್ ಇವರನ್ನು ಒಳಗೊಂಡ ವಕೀಲರು ತಂಡ ವಾದಿಸಿದ್ದರು.

Related posts

ಪಡಂಗಡಿ: ಅಪಾಯಕಾರಿ ಮರದ ಕೊಂಬೆಗಳ ತೆರವು

Suddi Udaya

ನಾವೂರಿನಲ್ಲಿ ಮೀಲಾದ್ ರ‍್ಯಾಲಿ ಕಾರ್ಯಕ್ರಮಕ್ಕೆ ನವೋದಯ ಯುವಕ ಮಂಡಲ ವತಿಯಿಂದ ಸಿಹಿ ತಿಂಡಿ ವಿತರಣೆ: ಸೌಹಾರ್ದತೆಯ ಸಂದೇಶ ಸಾರಿದ ನೆಬಿದಿನ ರ‍್ಯಾಲಿ

Suddi Udaya

ಶಿಶಿಲ ಶೌರ್ಯ ವಿಪತ್ತು ತಂಡದ ಕೆಲಸ ಕಾರ್ಯಗಳನ್ನು ಮೆಚ್ಚಿ ಜೀವರಕ್ಷಕ ಪರಿಕರಗಳನ್ನು ಕೊಡುಗೆಯಾಗಿ ನೀಡಿದ ಎಸ್ ಎಂ ಶಿವಪ್ರಕಾಶ್

Suddi Udaya

ನಾವೂರು ಮತದಾನ ಕೇಂದ್ರಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ಭಾರತೀಯ ಜೈನ್ ಮಿಲನ್ ನ ಕೆನಡಾ ಘಟಕವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಂದ ವೆಬಿನಾರ್ ಮೂಲಕ ಉದ್ಘಾಟನೆ

Suddi Udaya

ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ವೃತ್ತಿಯೊಂದಿಗಿನ ಜೀವನದ ಸುಮತೋಲನ” ಕಾರ್ಯಾಗಾರ

Suddi Udaya
error: Content is protected !!