ವೇಣೂರು: ಇಲ್ಲಿಯ ಗಾರ್ಡನ್ ವ್ಯೂ ಕಾಂಪ್ಲೆಕ್ಸ್‌ನ ಮಾಲಕ ಮಾರ್ಕ್ ಎಗ್ಬರ್ಟ್ ಪಿರೇರಾ (68ವ) ರವರು ನ. 13ರಂದು ಮಂಗಳೂರಿನ ನಿವಾಸದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.
ಮೃತರು ಪತ್ನಿ, ಪುತ್ರಿ ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.
ವೇಣೂರಿನಲ್ಲಿ ಗಾರ್ಡನ್ ವ್ಯೂ ಕಾಂಪ್ಲೆಕ್ಸ್‌ನ್ನು ನಿರ್ಮಾಣ ಮಾಡಿ, ಇಲ್ಲಿ ಮನೆ ನಿರ್ಮಿಸಿ ವಾಸವಾಗಿದ್ದರು. ಅತ್ಯಂತ ಶಿಸ್ತಿನ ಜೀವನ ನಡೆಸುತ್ತಿದ್ದ ಇವರು, ತಮ್ಮ ಪ್ರವರ್ತಿತ ವಾಣಿಜ್ಯ ಸಂಕೀರ್ಣವನ್ನು ಅತ್ಯಂತ ಸ್ವಚ್ಚಂದವಾಗಿರಿಸಿದ್ದರು. ತೀರಾ ಸೌಮ್ಯ ಸ್ವಭಾವದವರಾಗಿದ್ದರು. ಕಾಂಪ್ಲೆಕ್ಸ್‌ನ ಅಂಗಡಿ ಮಾಲಿಕರು ತಮ್ಮ ಮಳಿಗೆಗಳನ್ನು ಮುಚ್ಚಿ ಸಂತಾಪ ವ್ಯಕ್ತಪಡಿಸಿದ್ದಾರೆ.














