November 15, 2026
ಆರೋಗ್ಯಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಶಿಶಿಲ ಮಹರ್ಪಿ ವಾಲ್ಮೀಕಿ ವಸತಿ ಶಾಲೆಯಲ್ಲಿ ‘ಸ್ವಸ್ಥ್ಯ-ಪೋಷಣ್ ಸೇವಾ ಸಂಗಮ’ ಕಾರ್ಯಕ್ರಮ

ಶಿಶಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಹರ್ಪಿ ವಾಲ್ಮೀಕಿ ವಸತಿ ಶಾಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಗ್ರಾಮ ಪಂಚಾಯತ್ ಶಿಶಿಲ ಇದರ ಸಹಯೋಗದೊಂದಿಗೆ ಸ್ವಸ್ಥ್ಯ- ಪೋಷಣ್ ಸೇವಾ ಸಂಗಮ್ ಕಾರ್ಯಕ್ರಮ ನಡೆಯಿತು.

ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಅಮ್ಮಿ ಪೌಷ್ಟಿಕ ಆಹಾರ, ಸಿಕಲ್ ಸೆಲ್ ಕಾಯಿಲೆಗಳು, ಮಹಿಳೆಯರ ಕಾಯಿಲೆಗಳ,ಕ್ಯಾನ್ಸರ್ ಕಾಯಿಲೆಗಳ ಬಗ್ಗೆ ಹಾಗೂ ಮುಂಜಾಗ್ರತೆ ಬಗ್ಗೆ ಮಾಹಿತಿ ನೀಡಿದರು.

ಸಂಚಾರಿ ಆರೋಗ್ಯ ಘಟಕದ ವೈದ್ಯಾಧಿಕಾರಿಗಳಿಂದ ಆರೋಗ್ಯ ತಪಾಸಣೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಪಂ.ಅಭಿವೃದ್ಧಿ ಅಧಿಕಾರಿ, ಸಂಚಾರಿ ಆರೋಗ್ಯ ಘಟಕದ ವೈದ್ಯಾಧಿಕಾರಗಳು, ಆರೋಗ್ಯ ಇಲಾಖೆಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ superviser, ಆರೋಗ್ಯ ಇಲಾಖೆ ಮತ್ತು ಸಂಚಾರಿ ಆರೋಗ್ಯ ಘಟಕದ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪರಿಶಿಷ್ಟ ವರ್ಗದ ಸಮುದಾಯದವರು, ವಸತಿ ಶಾಲೆ ಶಿಕ್ಷಕರು, ಅಡುಗೆ ಸಿಬ್ಬಂದಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

Related posts

ವಾಣಿಜ್ಯ ಕೈಗಾರಿಕೆ ಮತ್ತು ಸೇವಾ ಉದ್ಯಮದಾರರ ಸಂಘ ಮಡಂತ್ಯಾರು ಪುಂಜಾಲಕಟ್ಟೆ ಇವರ ನೇತೃತ್ವದಲ್ಲಿ ಹೆದ್ದಾರಿ ಕಾಮಗಾರಿ ಅವ್ಯವಸ್ಥೆ ಕುರಿತು ಸಮಾಲೋಚನಾ ಸಭೆ

Suddi Udaya

ಬೆಳಾಲು ಗ್ರಾ.ಪಂ ಮಾಜಿ ಸದಸ್ಯ ಅಂಗರಗಂಡ ಯೂಸುಫ್ ನಿಧನ

Suddi Udaya

ಜು. 12: ಉಜಿರೆಯಲ್ಲಿ ಮೆಗಾ ‘ರೈನಾಥಾನ್–2026’

Suddi Udaya

ಮಹಿಳೆ ಮಗುವಿಗೆ ಮಾನಸಿಕ ಹಿಂಸೆ- ವರದಕ್ಷಿಣೆ ಕಿರುಕುಳ ಆರೋಪ: ಬೆಳಾಲಿನ ಮಹಿಳೆ ನೀಡಿದ ದೂರಿನಂತೆ ಪತಿ, ಮನೆಯವರ ಮೇಲೆ ಕೇಸು

Suddi Udaya

ಅಕ್ರಮ ಗೋಸಾಗಾಟ : ತಡೆಯಲು ಬಂದವರ ಮೇಲೆ ಪಿಕಪ್ ಹರಿಸಿದ ದುಷ್ಕರ್ಮಿಗಳು

Suddi Udaya

ಪಡಂಗಡಿ ಪೊಯ್ಕೆಗುಡ್ಡೆ ಶ್ರೀ ಅಯ್ಯಪ್ಪ ಭಜನಾ ಮಂದಿರ ಶಾರದೋತ್ಸವ ಸಮಿತಿಯ ಗೌರವಾಧ್ಯಕ್ಷರಾಗಿ ವೀರೇಂದ್ರ ಶೆಟ್ಟಿ, ಅಧ್ಯಕ್ಷರಾಗಿ ಸುನಿಲ್ ಕುಲಾಲ್

Suddi Udaya
error: Content is protected !!