November 20, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಎಂ ಆರ್ ಪ್ರಸನ್ನ ರವರ ಮಾತೃಶ್ರೀ ಜಯಮ್ಮ ರವರ ಸವಿ ನೆನಪಿಗಾಗಿ ಮಂಜುಶ್ರೀ ಸೀನಿಯರ್ ಚೇಂಬರ್ ವತಿಯಿಂದ ಬೆಳ್ತಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿಗೆ ಮರದ ಪೀಠೋ ಪಕರಣ ಹಸ್ತಾಂತರ

ಬೆಳ್ತಂಗಡಿ: ಮಂಜುಶ್ರೀ ಸೀನಿಯ‌ರ್ ಚೇಂಬರ್ ನ ಪರವಾಗಿ ಬೆಳ್ತಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಜೀವಶಾಸ್ತ್ರ ಪ್ರಯೋಗಲಯಕ್ಕೆ ಎಂ. ಆರ್. ಪ್ರಸನ್ನರವರು ಅವರ ಮಾತ್ರಶ್ರೀ ಟಿ. ಜಿ. ಜಯಮ್ಮರವರ ಸವಿನೆನಪಿಗಾಗಿ ನೀಡಿದ ಮರದ ಪೀಟೋಪಕರಣಗಳನ್ನು ನ.18ರಂದು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾನ್ ಅರ್ವಿನ್ ಡಿಸೋಜರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಾಲೇಜಿನ ಪ್ರಾಂಶುಪಾಲರಾದ ಸುಕುಮಾರ್ ಜೈನ್’, ಎಂ. ಆರ್. ಪ್ರಸನ್ನರವರ ಸೇವೆಯನ್ನು ಶ್ಲಾಘಿಸಿ ಅಭಿನಂದನೆಗಳನ್ನು ಸಲ್ಲಿಸಿದರು. ದಾನಿಗಳಾದ ಎಂ. ಆರ್. ಪ್ರಸನ್ನ ವಿದ್ಯಾರ್ಥಿಗಳೊಂದಿಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು. ಕಾರ್ಯದರ್ಶಿಗಳಾದ ಶರತ್ ಕುಮಾರ್’ ಧೈಯ ವಾಕ್ಯವನ್ನು ಉದ್ಯೋಶಿಸಿದರು.

ನಿಕಟ ಪೂರ್ವಾಧ್ಯಕ್ಷ ಮಂಜುನಾಥ್ ರೈ ಸ್ವಾಗತಿಸಿದರು. ವೇದಿಕೆಯಲ್ಲಿ ಕೋಶಾಧಿಕಾರಿ ಪದ್ಮ ಕುಮಾರ್, ಸ್ಥಾಪಕಾಧ್ಯಕ್ಷ ಪ್ರಮೋದ್ ಆರ್. ನಾಯಕ್ ಉಪಸ್ಥಿದ್ದರು. ಶಿಕ್ಷಕ ಮೋಹನ್ ಧನ್ಯವಾದ ಸಮರ್ಪಿಸಿದರು. ಪೂರ್ವಾಧ್ಯಕ್ಷ ಲ್ಯಾನ್ಸಿ. ಏ. ಪಿರೇರಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಜರಿದ್ದರು.

Related posts

ದ್ವಿಚಕ್ರ ವಾಹನ-ಕಾರು ಡಿಕ್ಕಿ: ದ್ವಿಚಕ್ರ ವಾಹನ ಸವಾರನಿಗೆ ಗಂಭೀರ ಗಾಯ

Suddi Udaya

ಎಸ್‌ಡಿಎಂ ಶಿಕ್ಷಣ ಮಹಾವಿದ್ಯಾಲಯದಲ್ಲಿ ವಿವೇಕ ಜಾಗೃತಿ ಉಪನ್ಯಾಸ ಕಾರ್ಯಕ್ರಮ

Suddi Udaya

ಮಚ್ಚಿನ: ರುದ್ರಭೂಮಿ ಸಮೀಪ ಆಕಸ್ಮಿಕ ಬೆಂಕಿ

Suddi Udaya

ಕಥೊಲಿಕ್‌ ಸಭಾ ಮಂಗಳೂರು ಪ್ರದೇಶ ಇದರ ಆಶ್ರಯದಲ್ಲಿ ಬೆಳ್ತಂಗಡಿ ವಲಯ ಕಾರ್ಯಕಾರಿ ಸಮಿತಿಯ ಸಹಮಿಲನ

Suddi Udaya

ಪಡಂಗಡಿ: ಮುನಿಶ್ರೀ 108 ದಿವ್ಯಸಾಗರ ಮಹಾರಾಜರ ಭವ್ಯ ಚಾತುರ್ಮಾಸ

Suddi Udaya

ವೇಣೂರು: ಬಜಿರೆ “ಸುರಭಿ” ಮನೆಯ ಬಿ. ರತ್ನವರ್ಮ ಇಂದ್ರ ನಿಧನ

Suddi Udaya
error: Content is protected !!