November 20, 2026
ಗ್ರಾಮಾಂತರ ಸುದ್ದಿ

ಟ್ಯೂಷನ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವ್ರುದ್ಧಿ ಯೋಜನೆ ಬಿಸಿ ಟ್ರಸ್ಟ್ ರಿ. ಬೆಳ್ತಂಗಡಿ ತಾಲೂಕು ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದಡಿಯಲ್ಲಿ ಅರಸಿನಮಕ್ಕಿ ವಲಯದ ಹತ್ಯಡ್ಕ ಕಾರ್ಯಕ್ಷೆತ್ರದ ಅರಸೀನಮಕ್ಕಿ ಪ್ರೌಢ ಶಾಲೆಯಲ್ಲಿ 10 ನೇ ತರಗತಿಯ ಮಕ್ಕಳಿಗೆ ಟ್ಯೂಷನ್ ಕ್ಲಾಸ್ ಹಮ್ಮಿಕೊಂಡಿದ್ದು ಕಾರ್ಯಕ್ರಮದ ಉದ್ಘಾಟನೆ ಯನ್ನು ನೆರವೇರಿಸಿದ ಜನಜಾಗೃತಿ ತಾಲೂಕು ವೇದಿಕೆ ಸದಸ್ಯರಾದ ಮಂಜುಳಾ ಕಾರಂತ್ ರವರು ಶ್ರೀ ಕ್ಷೇತ್ರದ ಮೂಲಕ ಹಲವಾರು ಕಾರ್ಯಕ್ರಮ ನಡೆಯುತ್ತಿದ್ದು

ವಲಯದಲ್ಲಿ ಪ್ರೌಢ ಶಾಲೆ ಒಂದೇ ಇರುವುದರಿಂದ ನಮ್ಮ ಗ್ರಾಮೀಣ ಭಾಗದ ಮಕ್ಕಳಿಗೆ ಈ ಒಂದು ಉತ್ತಮ ಅವಕಾಶ ಸಿಕ್ಕಿರುವುದು ನಮ್ಮ ಭಾಗ್ಯ ಅವಕಾಶಗಳು ಸಿಕ್ಕಾಗ ಅದರ ಸದುಪಯೋಗವನ್ನು ಪಡೆಯಬೇಕು ಎಲ್ಲಾ ಮಕ್ಕಳು ವಿಶೇಷ ತರಗತಿಯಲ್ಲಿ ಉತ್ತಮ ರೀತಿಯಲ್ಲಿ ಪಾಲ್ಗೊಂಡು ಉತ್ತಮ ಅಂಕ ಗಳಿಸಿ ಈ ಊರಿಗೆ ಕೀರ್ತಿ ತರುವಂತೆ ತಿಳಿಸಿದರು.

ವಲಯ ಮೇಲ್ವಿಚಾರಕರಾದ ಪ್ರಿಯಾ ರವರು ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಈ ಕಾರ್ಯಕ್ರಮದ ಪ್ರಯೋಜನ ಪಡೆಯುವಂತೆ ತಿಳಿಸಿದರು.ಶಾಲಾ ಮುಖ್ಯ್ಯೋಪಾಧ್ಯಯರಾದ ಮಂಜುಳಾ ಮೇಡಂ ರವರು ನಮ್ಮ ಶಾಲೆಯನ್ನು ಗುರುತಿಸಿ ಮಕ್ಕಳಿಗೆ ಈ ಸೌಲಭ್ಯವನ್ನು ಒದಗಿಸಿ ಕೊಟ್ಟದಕ್ಕಾಗಿ ತುಂಬಾ ಸಂತೋಷವಾಯಿತು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಲಿಂಗಪ್ಪಗೌಡ ರವರು ವಹಿಸಿದ್ದರು. ಜ್ಞಾನ ವಿಕಾಸ ಸಮನ್ವಯಧಿಕಾರಿ ಮಧುರಾ ವಸಂತ್ ಪ್ರಾಸ್ತವಿಕ ಮಾತುಗಳನ್ನಾಡಿದರು. ಶಾಲಾ ಅಧ್ಯಾಪಕಿಯಾದ ರವರು ನಿರೂಪಿಸಿದ ಈ ಕಾರ್ಯಕ್ರಮದಲ್ಲಿ ಸೇವಾಪ್ರತಿನಿಧಿ ಯಮುನಾ ರವರು ಸ್ವಾಗತಿಸಿದರು

.

Related posts

ಕರಾಟೆ ಪಂದ್ಯಾಟ: ಬೆಳ್ತಂಗಡಿ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya

ರಾಷ್ಟ್ರೀಯ ಕರಾಟೆ ಪಂದ್ಯಾಟ: ಬೆಳ್ತಂಗಡಿಯ ಶೊರಿನ್ ರಿಯೊ ಕರಾಟೆ ಅಶೋಷಿಯೇಶನ್ ವಿದ್ಯಾರ್ಥಿಗಳಿಗೆ ಹಲವು ಪ್ರಶಸ್ತಿ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ: ಎಕ್ಸಲೆಂಟ್ ಮೂಡುಬಿದಿರೆಗೆ ರಾಜ್ಯ ಮಟ್ಟದಲ್ಲಿ ಎರಡನೇ ಮತ್ತು ನಾಲ್ಕನೇ ರ‍್ಯಾಂಕ್‌ಗಳು

Suddi Udaya

ಮುಳಿಯ ಶೋರೂಂಗೆ ಕಿಸ್ನಾ ಡೈಮಂಡ್ ಬ್ರ್ಯಾಂಡ್ ಸಂಸ್ಥಾಪಕ ಮತ್ತು ಆಡಳಿತ ನಿರ್ದೇಶಕರ ಭೇಟಿ

Suddi Udaya

ಇಂದಬೆಟ್ಟು ವಲಯದ ಗುರಿಪಳ್ಳ ಕಾರ್ಯಕ್ಷೇತ್ರದಲ್ಲಿ ‘ಬೆಳಕು’ ಜ್ಞಾನವಿಕಾಸ ಕೇಂದ್ರ ಉದ್ಘಾಟನೆ

Suddi Udaya

ಬೆಳ್ತಂಗಡಿ: ಹುಣ್ಸೆಕಟ್ಟೆ ನಿವಾಸಿ ಲ್ಯಾನ್ಸಿ ಫೆರ್ನಾಂಡಿಸ್ ಇಸ್ರೇಲ್ ನಲ್ಲಿ ನಿಧನ

Suddi Udaya
error: Content is protected !!