ಉಜಿರೆ: ಉಜಿರೆ – ಚಾರ್ಮಾಡಿ ರಸ್ತೆಯಲ್ಲಿನ ನಾಗೇಶ್ ಕೋಟ್ಯಾನ್ ಮಾಲೀಕತ್ವದ ಕೋಟಿ – ಚೆನ್ನಯ ತಾಜಾ ಮೀನಿನ ಅಂಗಡಿಗೆ ಇಂದು(ನ.20) ಸಂಜೆ 580 ಕೆಜಿ ತೂಕದ ಅಪರೂಪದ ಮಡಲ್ ಮೀನು ಬಂದಿದ್ದು ಮೀನು ಮಾಂಸ ಖರೀದಿಸಲು, ನೋಡಲು ಜನ ಮುಗಿಬಿದ್ದರು.
ಮಲ್ಪೆ ಬೋಟ್ ನಿಂದ ನೇರವಾಗಿ ಉಜಿರೆಯ ಮೀನಿನ ಅಂಗಡಿಗೆ ಮಡಲ್ ಮೀನು ಬರುತ್ತಿದೆ ಎಂಬ ಮಾಹಿತಿ ಸಿಕ್ಕಿದ ತಕ್ಷಣ ಜನ ಮೀನು ನೋಡಲು ಮುಗಿಬಿದ್ದಿದ್ದರು. ಈ ಅಪರೂಪದ ಮಡಲ್ ಮೀನು ನಾಗೇಶ್ ಅವರ ಅಂಗಡಿಗೆ 4ನೇ ಬಾರಿಗೆ ತರಲಾಗಿದ್ದು, ಸ್ಕ್ರೈನ್ ಮೂಲಕ ವಾಹನದಿಂದ ಮೀನನ್ನು ಇಳಿಸುವ ಸಂದರ್ಭದಲ್ಲಿ ಜನರು ಮೀನಿನೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡರು.













