September 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಸ್ಕೌಟ್ಸ್ ಗೈಡ್ಸ್ , ಕಬ್ಸ್ ಮತ್ತು ಬುಲ್ ಬುಲ್ಬಸ್ ಹಾಗೂ ಬನ್ನಿಸ್ ವತಿಯಿಂದ ಧ್ವಜ ದಿನಾಚರಣೆ

ಧರ್ಮಸ್ಥಳ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಸ್ಕೌಟ್ಸ್ ಗೈಡ್ಸ್ , ಕಬ್ಸ್ ಮತ್ತು ಬುಲ್ ಬುಲ್ಬಸ್ ಹಾಗೂ ಬನ್ನಿಸ್ ವತಿಯಿಂದ ಧ್ವಜ ದಿನಾಚರಣೆಯನ್ನು ಆಚರಿಸಲಾಯಿತು.

ಮೊದಲು ಧ್ವಜ ವಂದನೆಯನ್ನು ಮಾಡಿ ಬಳಿಕ ಧರ್ಮಸ್ಥಳ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಗಾಯತ್ರಿ ಇವರು ಅಂಚೆ ಮುದ್ರೆಯನ್ನು ಪ್ರಚುರಣೆಗೊಳಿಸಿದರು. ಬಳಿಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಅವರು ಮಾತನಾಡುತ್ತಾ ಸ್ಕೌಟ್ ಮತ್ತು ಗೈಡಿನ ಉದ್ದೇಶ ಅದರಲ್ಲಿರುವ ಶಿಸ್ತು ವಿದ್ಯಾರ್ಥಿಗಳಿಗೆ ಅದರ ಅಗತ್ಯತೆ, ಸಮಾಜ ಸೇವೆಯ ಅಗತ್ಯತೆ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಮಾರ್ಮಿಕವಾಗಿ ವಿವರಿಸಿದರು.

ಬಳಿಕ ಬನ್ನಿ ವಿದ್ಯಾರ್ಥಿಗಳಿಗೆ ಆಪ್ರೋನ್ ತೊಡಿಸಿ ಸಾಂಕೇತಿಕವಾಗಿ ಸ್ವಾಗತಿಸಲಾಯಿತು. ಈ ದಿನದ ವಿಶೇಷವನ್ನು ಕಬ್ ಮಾಸ್ಟರ್ ಶ್ರೀಮತಿ ಕಾದಂಬರಿ ವಿದ್ಯಾರ್ಥಿಗಳಿಗೆ ತಿಳಿಯಪಡಿಸಿದರು. ಈ ಸಂದರ್ಭದಲ್ಲಿ ಹಾಗೂ ಕಬ್ಸ್ ಬುಲ್ ಬುಲ್ಸ್ ವಿದ್ಯಾರ್ಥಿಗಳ ಪ್ರವೇಶ ಸಮಾರಂಭ ಸಹ ಏರ್ಪಡಿಸಲಾಗಿತ್ತು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ. ವಿ ಅವರ ಸಹಕಾರದೊಂದಿಗೆ ಮೂಡಿಬಂದ ಈ ಕಾರ್ಯಕ್ರಮವನ್ನು ಗೈಡ್ಸ್ ನ ವಿಧ್ಯಾರ್ಥಿನಿ ಕುಮಾರಿ ಆದ್ಯ ರೈ ನಿರ್ವಹಿಸಿ, ಗೈಡ್ಸ್ ನ ಆರುಷ್ ಪಿ ಜೋಷಿ ಸ್ವಾಗತಿಸಿ, ಬುಲ್ ಬುಲ್ ನಾ ರಕ್ಷಾ ಅತಿಥಿಗಳ ಕಿರುಪರಿಚಯವನ್ನು ನೀಡಿ, ಕಬ್ ಇದರ ವಿಧ್ಯಾರ್ಥಿ ಗೌತಮ್ ಎಮ್ ಧನ್ಯವಾದವಿತ್ತರು .

Related posts

ಆಪರೇಷನ್ ಸಿಂಧೂರ್” – ಪಹಲ್ಗಾಮ್ ದಾಳಿಗೆ ಪ್ರತೀಕಾರ

Suddi Udaya

ಉಜಿರೆ- ಪೆರಿಯಶಾಂತಿ ಸ್ಪರ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಡಾ. ಡಿ ವೀರೇಂದ್ರ ಹೆಗ್ಗಡೆ ಯವರಿಂದ ಶಿಲಾನ್ಯಾಸ

Suddi Udaya

ಸತ್ಯದ ಮುಂದೆ ತಲೆಬಾಗಿದ ಕೇಂದ್ರ ಸರ್ಕಾರ – ಧರ್ಮೇಂದ್ರ ಪ್ರಧಾನ ರಾಜೀನಾಮೆ ನೈತಿಕ ಹೊಣೆಗಾರಿಕೆಯ ಒಪ್ಪಿಗೆ- ರಕ್ಷಿತ್ ಶಿವರಾಂ

Suddi Udaya

ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ

Suddi Udaya

ಅರಸಿನಮಕ್ಕಿ ಶ್ರೀ ಕ್ಷೇ.ಧ.ಶೌ.ವಿ.ನಿ. ಘಟಕ ಮತ್ತು ಅರಣ್ಯ ಇಲಾಖೆ ಉಪ್ಪಿನಂಗಡಿ ವಲಯ ಸಹಭಾಗಿತ್ವದಲ್ಲಿ ವನ್ಯಜೀವಿ ಕಾಳಜಿ ಅಭಿಯಾನ ಮತ್ತು ಕಾಳ್ಗಿಚ್ಚು ಮುಂಜಾಗೃತಿ ಕ್ರಮಗಳ ಬಗ್ಗೆ ಜಾಗೃತಿ ಅಭಿಯಾನ

Suddi Udaya

ಹೊಸಪಟ್ಣ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ ಆಚರಣೆ

Suddi Udaya
error: Content is protected !!