November 21, 2026
ಅಭಿನಂದನೆಆಯ್ಕೆಜಿಲ್ಲಾ ಸುದ್ದಿಪೊಲೀಸ್ವರದಿಸರ್ಕಾರಿ ಇಲಾಖಾ ಸುದ್ದಿ

ಪಶ್ಚಿಮ ವಲಯ ನೂತನ ಐಜಿಪಿಯಾಗಿ ಶಶಿಕುಮಾ‌ರ್ ಅಧಿಕಾರ ಸ್ವೀಕಾರ

ಮಂಗಳೂರು: ಪಶ್ಚಿಮ ವಲಯದ ನೂತನ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್‌ (ಐಜಿಪಿ) ಆಗಿ ಹಿರಿಯ ಐಪಿಎಸ್ ಅಧಿಕಾರಿ ಎನ್. ಶಶಿಕುಮಾ‌ರ್ ಅವರು ನವೆಂಬರ್ 19 ರಂದು ಗುರುವಾರ ಮಧ್ಯಾಹ್ನ ಅಧಿಕಾರ ಸ್ವೀಕರಿಸಿದರು. ಪ್ರಭಾರ ಐಜಿಪಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರಿಂದ ಶಶಿಕುಮಾ‌ರ್ ಅಧಿಕಾರ ದಂಡ ಸ್ವೀಕರಿಸಿದರು.

ಕರ್ನಾಟಕ ಸರ್ಕಾರ ನವೆಂಬರ್ 18 ರಂದು ರಾಜ್ಯ ಪೊಲೀಸ್ ಇಲಾಖೆಯಲ್ಲಿ ಹಲವಾರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿತ್ತು. ಹೊಸ ಹುದ್ದೆಗಾಗಿ ಕಾಯುತ್ತಿದ್ದ ಶಶಿಕುಮಾ‌ರ್ ಅವರನ್ನು ಪಶ್ಚಿಮ ವಲಯದ ಮುಖ್ಯಸ್ಥರನ್ನಾಗಿ ನೇಮಿಸಲಾಗಿದೆ.

ಅವರು ಈ ಹಿಂದೆ ಮಂಗಳೂರು ನಗರ ಮತ್ತು ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಆಗಿ ಕಾರ್ಯ ನಿರ್ವಹಿಸಿದ್ದರು. ಇದೀಗ ಭಡ್ತಿ ಹೊಂದಿ ಹೊಸ ಹುದ್ದೆಯಲ್ಲಿ ಮತ್ತೆ ಅವರು ಮಂಗಳೂರಿಗೆ ಐಜಿಪಿಯಾಗಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

Related posts

ಉಜಿರೆ ಎಸ್.ಡಿ.ಎಂ. ಬಿ.ಎಡ್ ಕಾಲೇಜಿನಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ

Suddi Udaya

ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ “ಸರಿಗಮಪ ” ವಿನ್ನರ್ ಚನ್ನಪ್ಪ ಭೇಟಿ

Suddi Udaya

ಮಚ್ಚಿನ: ತಾರೆಮಾರು ಸೇತುವೆಯ ಬಳಿ ವಾಮಾಚಾರಕ್ಕೆ ಬಳಸಿದ ವಸ್ತುಗಳನ್ನು ಎಸೆಯುವ ಬಗ್ಗೆ ಸ್ಥಳೀಯರ ಅಕ್ರೋಶ

Suddi Udaya

ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ಶಿವರಾತ್ರಿ ಪ್ರಯುಕ್ತ ಸಾಮೂಹಿಕ ಯೋಗ ಶಿವ ನಮಸ್ಕಾರ

Suddi Udaya

ಕಾರುಗಳ ನಡುವೆ ಅಪಘಾತ:

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಛದ್ಮವೇಶ ಸ್ಪರ್ಧೆ

Suddi Udaya
error: Content is protected !!