November 21, 2026
ತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಉಚಿತ ದಂತ ಚಿಕಿತ್ಸಾ ಶಿಬಿರ

ಬೆಳ್ತಂಗಡಿ: ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಸಮುದಾಯ ದಳ ನೆರಿಯ, ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಹಾಲು ಉತ್ಪಾದಕರ ಸಹಕಾರಿ ಸಂಘ ನೆರಿಯ ಹಾಗೂ ಗಂಡಿಬಾಗಿಲು ಗ್ರಾಹಕರ ಸಹಕಾರಿ ಸಂಘ ನೆರಿಯ ಮತ್ತು ಭಾರತೀಯ ದಂತ ವೈದ್ಯಕೀಯ ಸಂಘ ಪುತ್ತೂರು ಹಾಗೂ ಕೆವಿಜೆ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಸುಳ್ಯ ಇದರ
ಸಂಯುಕ್ತ ಆಶ್ರಯದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನ.18ರಂದು ಅಣಿಯೂರಿನ ಸಂಪದ ಸಭಾ ಭವನದಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆಯಲ್ಲಿ ಆರ್‌ಸಿಸಿ ಅಧ್ಯಕ್ಷ ಆನಂದ ವಹಿಸಿದ್ದರು. ಸಭೆಯಲ್ಲಿ ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಮೇ.ಜಿ ಜನರಲ್ ಯಂ,ವಿ, ಭಟ್, ರೋಟರಿ ಕ್ಲಬ್ ಬೆಳ್ತಂಗಡಿ ಕಾರ್ಯದರ್ಶಿ & ಪ್ರೊಫೆಸರ್ ಕೆವಿಜಿ ದಂತ ಮಹಾವಿದ್ಯಾಲಯ ಸುಳ್ಯ ರೋ ಡಾ ರಾಘವೇಂದ್ರ ಪಿದಮಲೆ, ಆರ್‌ಸಿಸಿ ಚೇರ್ಮನ್ ವೆಂಕಟೇಶ್ವರ ಭಟ್ ಕಜೆ ,ಆರ್‌ಸಿಸಿ ಕಾರ್ಯದರ್ಶಿ ಬಾಲಕೃಷ್ಣ, ಹಾಲು ಉತ್ಪಾದಕರ ಸಹಕಾರಿ ಸಂಘ ನೆರಿಯ ಅಧ್ಯಕ್ಷೆ ಸರಸ್ವತಿ, ಗಂಡಿಬಾಗಿಲು ಹಾಲು ಉತ್ಪಾದಕರ ಸಹಕಾರಿ ಸಂಘ ಅಧ್ಯಕ್ಷೆ ಭವಾನಿ, ಗ್ರಾಹಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀ ರಾಮ ಕುಮಾರ್ ಬಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ಶೈಲಾ ಕಾರ್ಯಕ್ರಮ ನಿರೂಪಿಸಿ, ವೆಂಕಟೇಶ್ವರ ಭಟ್ ಸ್ವಾಗತಿಸಿ, ಯೋಗರಾಜ್ ವಂದಿಸಿದರು.

ಷರೀಫ್ ಹಾಗೂ ಪ್ಯಾಕ್ಸ್‌ ನೆರಿಯ ವ್ಯವಸ್ಥಾಪಕ ಸದಾನಂದ ಕಾರ್ಯಕ್ರಮ ಸಂಯೋಜಿಸಿದರು.

ಈ ಶಿಬಿರದ ಪ್ರಯೋಜನವನ್ನು 60 ಕ್ಕು ಹೆಚ್ಚು ಜನರು ಪಡೆದುಕೊಂಡರು.

Related posts

ಎಲ್.ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ಗುರುವಾಯನಕೆರೆ ಸ.ಹಿ.ಪ್ರಾ. ಶಾಲಾ ಮುಖ್ಯಶಿಕ್ಷಕಿ ಉಮಾ ಡಿ ಗೌಡ ಹಟ್ಟತ್ತೋಡಿ ರವರಿಗೆ “ಜಿಲ್ಲಾ ಮಟ್ಟದ ವಿದ್ಯಾರತ್ನ ಪ್ರಶಸ್ತಿ”

Suddi Udaya

ಶಿರ್ಲಾಲು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಗೌರವಾರ್ಪಣೆ

Suddi Udaya

ನಿಡ್ಲೆ : ಪೊಂರ್ದಿಲ ಎಂಬಲ್ಲಿ ತೋಟಕ್ಕೆ ನುಗ್ಗಿದ ಕಾಡಾನೆ

Suddi Udaya

ಬಾಲಕ ಸುಮಂತ್ ಸಾವು ಪ್ರಕರಣ: ಬ್ರೈನ್ ಮ್ಯಾಪಿಂಗ್ ಪ್ರಕ್ರಿಯೆ ಆರಂಭ

Suddi Udaya

ಎಸ್ ಕೆ ಎಸ್ ಎಸ್ ಎಫ್ ಕಕ್ಕಿಂಜೆ ಶಾಖೆಯಿಂದ ಕನ್ನಡ ರಾಜ್ಯೋತ್ಸವ ಆಚರಣೆ: ಮಾದಕ ವ್ಯಸನ ಮುಕ್ತ ಪ್ರತಿಜ್ಞಾ ವಿಧಿ ಸ್ವೀಕಾರ

Suddi Udaya
error: Content is protected !!