November 21, 2026
ತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬೆಳ್ತಂಗಡಿ: ವಾಣಿ ಪದವಿ-ಪೂರ್ವ ಕಾಲೇಜಿನಲ್ಲಿ ವಾರ್ಷಿಕೋತ್ಸವ ಸಂಭ್ರಮ

ಬೆಳ್ತಂಗಡಿ: ಇಲ್ಲಿನ ಹಳೆಕೋಟೆ ವಾಣಿ ಪದವಿ-ಪೂರ್ವ ಕಾಲೇಜಿನ ವಾರ್ಷಿಕ ದಿನದ ಸಮಾರಂಭ ಕಾರ್ಯಕ್ರಮವು ನ.20ರಂದು ಕಾಲೇಜಿನ ವಠಾರದಲ್ಲಿ ವಾಣಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಕುಶಾಲಪ್ಪ ಗೌಡ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯ ಅತಿಥಿ ಶಾಸಕ ಹರೀಶ್ ಪೂಂಜ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ಚಾಪು ಮೂಡಿಸಿರುವ ತಾಲೂಕಿನ ಶ್ರೇಷ್ಠ ವಿದ್ಯಾಸಂಸ್ಥೆಗಳಲ್ಲಿ ವಾಣಿ ಕಾಲೇಜು ಒಂದಾಗಿದೆ. ಜೀವನ ಅಮೂಲ್ಯ ಹಂತದ ಶಿಕ್ಷಣವನ್ನು ವಾಣಿ ಕಾಲೇಜಿನಲ್ಲಿ ಪಡೆಯುತ್ತಿರುವ ವಿದ್ಯಾರ್ಥಿಗಳು ಧನ್ಯರು. ಹಾಗಾಗಿ ಪೊಷಕರಿಗೆ, ಕಲಿತ ವಿದ್ಯಾಂಸ್ಥೆಗೆ, ಗುರುಗಳಿಗೆ ಅಭಾರಿಯಾಗಿ ಗೌರವ ನೀಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ ಅವರು ಕಾಲೇಜಿನ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳು ದೂರದೃಷ್ಟಿ, ಗುರಿ, ಏಕಾಗ್ರತೆಯಿಂದ ನಿರಂತರ ಶ್ರಮದಿಂದ ವಿದ್ಯಾಭ್ಯಾಸ ನಡೆಸಬೇಕು. ವ್ಯಕ್ತಿತ್ವ ರೂಪಿಸುವ ಗುರುಗಳಿಗೆ ಸದಾಕಾಲ ಗೌರವ ಸಲ್ಲಿಸಬೇಕು. ವಿದ್ಯಾಸಂಸ್ಥೆಯ ಬ್ರ್ಯಾಂಡ್‌ ವಿದ್ಯಾರ್ಥಿಗಳು. ಹಾಗಾಗಿ ವಾಣಿಯ ಬ್ರ್ಯಾಂಡ್‌ ವಿದ್ಯಾರ್ಥಿಗಳಾಗಿದ್ದು ಶೈಕ್ಷಣಿಕ ವರ್ಷದಲ್ಲಿ ಉತ್ತಮ ಅಂಕಗಳಿಸುವ ಮೂಲಕ ಸಂಸ್ಥೆಯನ್ನು ಮುನ್ನಡೆಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಸಂಸ್ಥೆಯ ಕಾರ್ಯದರ್ಶಿ ಗಣೇಶ್ ಗೌಡ, ಜೊತೆ ಕಾರ್ಯದರ್ಶಿ ಶ್ರೀನಾಥ್ ಎಂ., ಖಜಾಂಜಿ ಯುವರಾಜ ಅನಾರು, ನಿರ್ದೇಶರಾದ ಜಯಾನಂದ ಗೌಡ ಪ್ರಜ್ವಲ್, ಗೋಪಾಲಕೃಷ್ಣ ಗುಲ್ಲೋಡಿ, ಕೃಷ್ಣಪ್ಪ ಗೌಡ, ಪದವಿಪೂರ್ವ ವಿಭಾಗದ ಶಿಕ್ಷಕ-ರಕ್ಷಕ ಸಂಘದ ಪ್ರವೀಣ್ ವಿ.ಜಿ., ಆಡಳಿತಾಧಿಕಾರಿ ಪ್ರಸಾದ್ ಕುಮಾರ್, ಶಾಲಾ ಮುಖ್ಯೋಪಾಧ್ಯಾಯ ಲಕ್ಷ್ಮಿ ನಾರಾಯಣ, ವಿದ್ಯಾರ್ಥಿ ಸಂಘದ ಅಧ್ಯಕ್ಷ ಮೊಹಿತ್ ಹಾಗೂ ಕಾರ್ಯದರ್ಶಿ ಅನೀಶ ಮಸ್ಕರೇನಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರ‍್ಯಾಂಕ್ ಪಡೆದ ವಿದ್ಯಾರ್ಥಿಗಳ ಪಟ್ಟಿಯನ್ನು ಹೇಮಲತಾ, ವಾರ್ಷಿಕ ವರದಿ ಮೀನಾಕ್ಷಿ ವಾಚಿಸಿ, ಕಲಿಕೆಯಲ್ಲಿ ತರತಗತಿವಾರು ಸ್ಥಾನ ಪಡೆದ ವಿದ್ಯಾರ್ಥಿಗಳ ಗೌರವ ಪಟ್ಟಿಯನ್ನು ಹರ್ಷಿತ್, ದತ್ತಿನಿಧಿ ಪುರಸ್ಕಾರವನ್ನು ರಕ್ಷಾ ಎ, ಕ್ರೀಡೆ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದ ಸಾಧಕರ ಪಟ್ಟಿಯನ್ನು ಜೋಯ್ವಿನ್ ರೋಡ್ರಿಗಸ್, ರಾಧಿಕಾ, ಬೆಸ್ಟ್ ಔಟ್ ಗೋಯಿಂಗ್ ಸ್ಪೂಡೆಂಟ್ ಮತ್ತು ಓವರ್ ಆಲ್ ಚಾಂಪಿಯನ್‌ಶಿಪ್‌ನ್ನು ಅನುರಾಧ ಕೆ.ರಾವ್ ಘೋಷಿಸಿದರು. ಕ್ರೀಡಾ ತರಬೇತುದಾರರಾದ ವಾಲಿಬಾಲ್ ಹರೀಶ್, ಕಬ್ಬಡಿ ಪದ್ಮರಾಜ್, ತ್ರೋಬಾಲ್ ಸೃಜನ್ ಶೆಟ್ಟಿ, ವಾಲಿಬಾಲ್-ತ್ರೋಬಾಲ್ ಜಾನುಪ್ರಕಾಶ್ ಹಾಗೂ ಶಟಲ್ ಬ್ಯಾಡ್ಮಿಂಟನ್ ಗೌತಮ್ ಅವರನ್ನು ಗೌರವಿಸಲಾಯಿತು.

ದೀಕ್ಷಾ ಮತ್ತು ತಂಡ ಪ್ರಾರ್ಥಿಸಿ, ಪ್ರಾಶುಂಪಾಲ ವಿಷ್ಣುಪ್ರಕಾಶ್ ಎಂ. ಪ್ರಸ್ತಾವಿಸಿ ಸ್ವಾಗತಿಸಿ, ಸುರೇಂದ್ರ ವಂದಿಸಿ, ಸುಧೀರ್ ಕೆ.ಎನ್. ಮತ್ತು ಸೌಮ್ಯ ನಿರೂಪಿಸಿದರು.

Related posts

ಸಾವ್ಯ: ಕಂರ್ಬಲೆಕ್ಕಿ ನಿವಾಸಿ ಪುಷ್ಪ ಆಚಾರ್ಯ ನಿಧನ

Suddi Udaya

ಉಜಿರೆ ಕಾಶಿಬೆಟ್ಟು ಸಹನಶ್ರೀ ಕ್ರೆಡಿಟ್ ಸೌಹಾರ್ದ ಕೋ-ಆಪರೆಟಿವ್ ಸೊಸೈಟಿಯಿಂದ ಮನೆ ನಿರ್ಮಾಣಕ್ಕೆ ಆರ್ಥಿಕ ಸಹಾಯ

Suddi Udaya

ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ ಮಿತ್ತಬಾಗಿಲು ಗ್ರಾ.ಪಂ. ನಲ್ಲಿ ಪ್ರತಿಭಟನೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಗೋ ಪೂಜೆ

Suddi Udaya

ಕೊಕ್ಕಡ ಗ್ರಾ.ಪಂ. ಮಾಜಿ ಉಪಾಧ್ಯಕ್ಷ ಶಿವರಾಮ ಗೌಡ ಟಿ. ಎಂ. ನಿಧನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮ

Suddi Udaya
error: Content is protected !!