ಮಡಂತ್ಯಾರು: ನವೆಂಬರ್ 20ರಂದು ಪುಂಜಾಲಕಟ್ಟೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ನಡೆದ ಪ್ರಾಥಮಿಕ ವಿಭಾಗದ ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದಿದ್ದಾರೆ.
ಕಿರಿಯ ಪ್ರಾಥಮಿಕ ವಿಭಾಗದಲ್ಲಿ ಜೈಕ್ ಪಾಲ್, ಆಯುಷಿ ಹಾಗೂ ಮೊಹಮ್ಮದ್ ಮುಫೀದ್ ಪ್ರಥಮ ಸ್ಥಾನ ಪಡೆದಿದ್ದಾರೆ. ತನಿಷ್ಮಾ ಎಸ್.ಎನ್. ದ್ವಿತೀಯ ಹಾಗೂ ಹಿರಣ್ಮಯಿ ಮತ್ತು ಹಿತೈಶ್ ತೃತೀಯ ಸ್ಥಾನ ಪಡೆದಿದ್ದಾರೆ.
ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಕೆ. ಅಕ್ಷಿತಾ ಸುವರ್ಣ, ಲೆನನ್ ಡಿಸೋಜ ಹಾಗೂ ತನುಶ್ರೀ ಪ್ರಥಮ ಸ್ಥಾನ ಪಡೆದಿದ್ದಾರೆ. ಫೈಝಾನ್ ರಝಾ, ಅಚಿಂತ್ಯ ಮಾದವು, ಸಮನ್ವಿ ಶೆಟ್ಟಿ, ಆರೂಷಿ ಪಿ. ಶೆಟ್ಟಿ ಹಾಗೂ ಆರಾಧ್ಯ ನಾಯಕ್ ದ್ವಿತೀಯ ಸ್ಥಾನ ಪಡೆದರೆ, ಮನೀಷಾ ಮತ್ತು ಕೃಪಾ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳು ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಇವರಿಗೆ ನಮ್ಮ ಶಾಲಾ ಶಿಕ್ಷಕ ವೃಂದದವರು ತರಬೇತಿಯನ್ನು ನೀಡಿರುತ್ತಾರೆ.













