November 24, 2026
ಕೃಷಿಗ್ರಾಮಾಂತರ ಸುದ್ದಿಚಿತ್ರ ವರದಿ

ಅಳದಂಗಡಿ: ಅಡಿಕೆ ಎಲೆ ಚುಕ್ಕಿ ರೋಗ ಮತ್ತು ಮಲ್ಲಿಗೆ ಕೃಷಿ ಮತ್ತು ಹೈನುಗಾರಿಕೆ ತರಬೇತಿ

ಬೆಳ್ತಂಗಡಿ: ಜಿಲ್ಲಾ ಕೃಷಿ ತರಬೇತಿ ಕೇಂದ್ರ ಬೆಳ್ತಂಗಡಿ, ಚಾಣಕ್ಯ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ (ರಿ) ಅಳದಂಗಡಿ ಹಾಗೂ ಗ್ರಾಮ ಪಂಚಾಯತ್ ಅಳದಂಗಡಿ ಇದರ ಸಹಯೋಗದಲ್ಲಿ 2026-27 ನೇ ಸಾಲಿನ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೈತರಿಗೆ ಒಂದು ದಿನದ ಅಡಿಕೆ ಎಲೆ ಚುಕ್ಕಿ ರೋಗ ಮತ್ತು ಮಲ್ಲಿಗೆ ಕೃಷಿ ಮತ್ತು ಹೈನುಗಾರಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿತ್ತು.

ಒಕ್ಕೂಟದ ಅಧ್ಯಕ್ಷ ರಾದ ಶಾರದಾ ಅಧ್ಯಕ್ಷತೆಯನ್ನು ವಹಿಸಿದ್ದರು. ಒಕ್ಕೂಟದ ಸದಸ್ಯರಾದ ಸುಪ್ರಿಯಾ ದೇವರ ಸ್ತುತಿಯೊಂದಿಗೆ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪೂರ್ಣಿಮಾ.ಜೆ. ಯವರು ದೀಪಾ ಬೆಳಗಿಸಿ ತರಬೇತಿಗೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಸಂಪನ್ಮೂಲ ವ್ಯಕ್ತಿ ಬೆಳ್ತಂಗಡಿ ತಾಲೂಕು ಕೃಷಿ ಅಧಿಕಾರಿ ಗಣೇಶ್ ಆಡಿಗರವರು ತರಬೇತಿ ಯ ಬಗ್ಗೆ ಪ್ರಾಸ್ತವಿಕ ನುಡಿಯನ್ನು ಆಡಿದರು. ತಾಲೂಕು ಪಂಚಾಯತ್ NRLM ಫಾರ್ಮ್ ಮ್ಯಾನೇಜರ್ ಆದ ಬಂಗಾರಪ್ಪ ರವರು ಇಂದಿನ ತರಬೇತಿ ಯ ಮತ್ತು NRLM ಬಗ್ಗೆ ಅತಿಥಿ ನುಡಿಗಳನ್ನು ಆಡಿದರು. ಅಳದಂಗಡಿಯ ಸಮಗ್ರ ಕೃಷಿಕರಾದ ಮೋನಿಕಾ ನಿಲೋಫರ್ ಡಿ ಸೋಜಾ ರವರು, ಹೈನುಗಾರಿಕೆ & ಮೊಟ್ಟೆ ಕೋಳಿಯ ಬಗ್ಗೆ ಸರಳವಾಗಿ, ಅರ್ಥವಾಗುವ ರೀತಿಯಲ್ಲಿ ತರಬೇತಿಯನ್ನು ನೀಡಿದರು.. ಸಂಪನ್ಮೂಲ ವ್ಯಕ್ತಿ ಮತ್ತು ಪ್ರಗತಿ ಪರ ಕೃಷಿಕರಾದ ಪ್ರಭಾಕರ್ ಮಯ್ಯರವರು, ಅಡಿಕೆ ಎಲೆ ಚುಕ್ಕಿ ರೋಗದ ಬಗ್ಗೆ, ಅದರ ನಿವಾರಣಾ ಬಗ್ಗೆ ಮತ್ತು ಮಲ್ಲಿಗೆ ಕೃಷಿಯ ಬಗ್ಗೆ, ಗೊಬ್ಬರ ನೀರು ಕೀಟ ನಾಶಕ, ಅದರ ನಿರ್ವಹಣೆ ಬಗ್ಗೆ ತುಂಬಾ ಚೆನ್ನಾಗಿ, ವಿವರವಾಗಿ ತರಬೇತಿಯನ್ನು ನೀಡಿದರು.

ಜಿಲ್ಲಾ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕರಾದ ಕುಮಾರಿ ಕುಸುಮ , ಒಕ್ಕೂಟದ ಪದಾಧಿಕಾರಿಗಳು, ಸಿಬ್ಬಂದಿಗಳು, ಒಕ್ಕೂಟದ ಸದಸ್ಯರು, ಪಂಚಾಯತ್ ಸಿಬ್ಬಂದಿಗಳು, ರೈತ ಬಾಂಧವರು ಉಪಸ್ಥಿತರಿದ್ದರು. ಸಮುದಾಯ ಸಂಪನ್ಮೂಲ ವ್ಯಕ್ತಿ ಆಶಾರವರು ಸ್ವಾಗತಿಸಿದರು. ಈ ಕಾರ್ಯಕ್ರಮದಲ್ಲಿ 50 ಕ್ಕೂ ಹೆಚ್ಚು ರೈತ ಸದಸ್ಯರು ಪಾಲ್ಗೊಂಡು ಸದುಪಯೋಗವನ್ನು ಪಡೆದುಕೊಂಡರು. ಮುಖ್ಯಪುಸ್ತಕ ಬರಹಗಾರರಾದ ಹರ್ಷಲಾ ಕಾರ್ಯಕ್ರಮ ನಿರೂಪಿಸಿದರು. ಕೃಷಿ ಸಖಿ ಜಾನೆಟ್ ಡಿ ಸೋಜಾರವರ ವಂದಿಸಿದರು.

Related posts

ಕೆಐಒಸಿಎಲ್ ಸಂಸ್ಥೆಯನ್ನು ಎನ್.ಎಮ್.ಡಿ.ಸಿ ಸಂಸ್ಥೆಯೊಂದಿಗೆ ವೀಲೀನ ಪ್ರಕ್ರಿಯೆ: ಡಾ.ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಬಿಎಮ್ಎಸ್

Suddi Udaya

ಫೆ.4: ನಮ್ಮೂರ ಕನ್ನಡ ಶಾಲೆ ನಮ್ಮ ಹೆಮ್ಮೆ “ಸೇವಾಯಜ್ಞ”

Suddi Udaya

ಕಡಿರುದ್ಯಾವರ: ತೋಟಗಳಿಗೆ ನುಗ್ಗಿದ ಕಾಡಾನೆಗಳ ಹಿಂಡು: ಅಪಾರ ಕೃಷಿ ನಾಶ

Suddi Udaya

ಮಂಗಳೂರಿನಲ್ಲಿ ಹೈಕೋರ್ಟ್‌ ಪೀಠ ಸ್ಥಾಪನೆ ಸಾಧ್ಯತೆ ಪರಿಶೀಲಿಸಲು ಸಮಿತಿ ರಚನೆ: ಬೆಳ್ತಂಗಡಿ ವಕೀಲರ ಸಂಘ ಸ್ವಾಗತ

Suddi Udaya

ಬೆಳ್ತಂಗಡಿ ಗೃಹರಕ್ಷಕ ದಳ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾಗಿ ಹರೀಶ್ ಸಾಲ್ಯಾನ್, ಉಪಾಧ್ಯಕ್ಷರಾಗಿ ಆನಂದ ಗೌಡ ಬಿ ಆಯ್ಕೆ

Suddi Udaya
error: Content is protected !!