November 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ಉಜಿರೆಯಲ್ಲಿ ಶ್ರೋತೃಗಳ ಮನಗೆದ್ದ ರಾಮ ಕಥಾ ರಸಾಯನ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ (ನೋಂ) ಕರ್ನಾಟಕ ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ಮತ್ತು ಶ್ರೀ.ಧ.ಮಂ.ವಸತಿ ಪದವಿ ಪೂರ್ವ ಕಾಲೇಜು ಉಜಿರೆಯ ಆಶ್ರಯದಲ್ಲಿ ರಾಮ ಕಥಾ ರಸಾಯನ ಮಾನವ ಜೀವನಕ್ಕೆ ಆದರ್ಶ, ಧರ್ಮ ಮತ್ತು ನೈತಿಕ ಮೌಲ್ಯಗಳನ್ನು ಕಲಿಸುವ ಮಹಾನ್ ಮಾರ್ಗದರ್ಶಿಯಾದ ರಾಮಾಯಣದ ಏಳು ಕಾಂಡಗಳನ್ನಾಧರಿಸಿದ ಸರಣಿ ಕಾರ್ಯಕ್ರಮವು ನ. 17 ರಿಂದ 21ರವರೆಗೆ ನಡೆಯಿತು.

ನ .17 ಬಾಲಕಾಂಡದ ಕುರಿತು ಡಾ. ಶ್ರೀಧರ ಭಟ್ ಇವರಿಂದ-ಉಪನ್ಯಾಸ ಮತ್ತು ಈಶಕಲಾ ಪ್ರತಿಷ್ಠಾನ ಬೆಳಾಲು ತಂಡದವರಿಂದ ರೂಪಕ – ಸೀತಾ ಸ್ವಯಂವರ ನಡೆಯಿತು. ನ.18 – ಅಯೋಧ್ಯಾಕಾಂಡ ಮತ್ತು ಅರಣ್ಯಕಾಂಡದ ಕುರಿತು ಗಮಕ ಕಲಾ ಪರಿಷತ್ತು ಬೆಳ್ತಂಗಡಿ ಘಟಕದಿಂದ ನಡೆದ ಗಮಕ ಕಾರ್ಯಕ್ರಮ. ಅತಿಥಿಗಳಾಗಿ ದಿವ ಕೊಕ್ಕಡ ಉಪಸ್ಥಿತರಿದ್ದರು. ನ.19 ರಂದು ಕಿಷ್ಕಿಂಧಾಕಾಂಡ ಮತ್ತು ಸುಂದರ ಕಾಂಡವನ್ನು ಹರಿಕಥೆಯ ಮೂಲಕ ಪ್ರೊ.ಮಧೂರು ಕಲ್ಲೂರಾಯರು ಮತ್ತು . ಕೇಶವ ಪದ್ಯಾಣರವರು ಪ್ರಸ್ತುತ ಪಡಿಸಿದರು. ಅತಿಥಿಗಳಾಗಿ ಡಾll ತಾರಕೇಶ್ವರಿ ಉಪಸ್ಥಿತರಿದ್ದರು. ನ. 20- ಯುದ್ಧಕಾಂಡದ ರಾವಣವಧೆ ಯನ್ನು ಯಕ್ಷಭಾರತಿ (ರಿ ) ಕನ್ಯಾಡಿಯ ಪ್ರಸಿದ್ಧ ಕಲಾವಿದರು ನಮ್ಮ ನೆಲದ ಗಂಡುಕಲೆ ಯಕ್ಷಗಾನದ ಮೂಲಕ ಅತ್ಯಂತ ಮನೋಜ್ಞವಾಗಿ ಅಭಿನಯಿಸಿದರು. ಅತಿಥಿಗಳಾಗಿ ಶ್ರೀಮತಿ ವಸಂತಿ ಕುಳಮರ್ವ ಉಪಸ್ಥಿತರಿದ್ದರು. ನ.21 ರಂದು ಉತ್ತರಕಾಂಡವನ್ನು ಶ್ರೀ ವಿಶ್ವೇಶ್ವರ ಭಟ್ ಉಂಡೆಮನೆ ಇವರು ಎಳೆಎಳೆಯಾಗಿ ಶ್ರೋತೃಗಳ ಮುಂದಿರಿಸಿ ಭಾವುಕ ಪಡಿಸಿದರು ಮತ್ತು ಸಮಾರೋಪ ಭಾಷಣವನ್ನು ಸುನಿಲ್ ಪಂಡಿತ್ ಪ್ರಾಂಶುಪಾಲರು ಶ್ರೀ.ಧ.ಮಂ.ವಸತಿ ಪದವಿ ಪೂರ್ವ ಕಾಲೇಜು ಉಜಿರೆ. ಇವರು ಸಂತೃಪ್ತಿ, ಕೃತಜ್ಞತೆ, ಮತ್ತು ಅಭಿಮಾನದಿಂದ ಮಾಡಿದರು. ಹೀಗೆ ವಿಭಿನ್ನ ರೀತಿಯಲ್ಲಿ ರಾಮ ಕಥಾ ರಸಾಯನ ಕಾರ್ಯಕ್ರಮವು ಎಲ್ಲರ ಸಹಕಾರದಿಂದ ಬಹಳ ಅರ್ಥಪೂರ್ಣವಾಗಿ ಶ್ರೀ.ಧ.ಮಂ.ವಸತಿ ಪದವಿ ಪೂರ್ವ ಕಾಲೇಜು ಉಜಿರೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶ್ರೀ.ಲl ನಿತ್ಯಾನಂದ ನಾವರ ಉದ್ಘಾಟಿಸಿ , ರಾಮನ ಆದರ್ಶ ನಮ್ಮೆಲ್ಲರ ಬದುಕಿನಲ್ಲಿ ಅಳವಡಿಸಿಕೊಳ್ಳುವುದರ ಅಗತ್ಯತೆಯ ಬಗ್ಗೆ ಮಾತನಾಡಿ, ಅಭಾಸಾಪದ ಸಾಹಿತ್ಯ ಸೇವೆಯನ್ನು ಶ್ಲಾಘಿಸಿದರು. ಸಮಿತಿ ಅಧ್ಯಕ್ಷರಾದ ಪ್ರೊ. ಗಣಪತಿ ಭಟ್ ಕುಳಮರ್ವ ಸ್ವಾಗತಿಸಿದರು, ಕಾರ್ಯದರ್ಶಿ ಸುಭಾಷಿಣಿ ಧನ್ಯವಾದವನ್ನಿತ್ತರು. ಸುಭಾಷಿಣಿಯವರು ಬರೆದ ಆಶಯಗೀತೆಗೆ ಅಶ್ವಿಜ ಶ್ರೀಧರ್ ಧ್ವನಿಯಾದರು.

Related posts

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ; ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಬೆಳ್ತಂಗಡಿ ಮಹಿಳಾ ಬಿಲ್ಲವ ವೇದಿಕೆ ಸದಸ್ಯರ ಭೇಟಿ

Suddi Udaya

ಬೈಲಹೊಂಗಲ ಮಂಡಲದ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya

ಆಳ್ವಾಸ್ ಪ್ರಗತಿ ಉದ್ಯೋಗ ಮೇಳ ಯಶಸ್ವಿಗೊಳಿಸಲು ಬೆಳ್ತಂಗಡಿಯಲ್ಲಿ ಶ್ರಮಿಕ ಸೇವಾ ಟ್ರಸ್ಟ್ ನಿಂದ ಪೂರ್ವಭಾವಿ ಕಾರ್ಯಾಗಾರ

Suddi Udaya

ಕಳೆಂಜದಲ್ಲಿ ರಾಜೇಶ್ ಎಂ.ಕೆ ಯವರ ಮೇಲೆ ನಡೆದ‌ ಕೊಲೆ ಯತ್ನ ಖಂಡನೀಯ: ಬಿಜೆಪಿ ಎಸ್.ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪ್ರೇಮಚಂದ್ರ ಕೆ.

Suddi Udaya

ಕುಕ್ಕವು- ಕೂಡಬೆಟ್ಟು ಸಂಪರ್ಕ ರಸ್ತೆಯ ಪಾದೆ ಕಿರು ಸೇತುವೆ ಬಳಿ ರಸ್ತೆ ಬಿರುಕು: ವಾಹನ ಸಂಚಾರ ಸ್ಥಗಿತ-ಜನರಲ್ಲಿ ಆತಂಕ

Suddi Udaya
error: Content is protected !!