November 25, 2026
Uncategorized

ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಪ್ರಯುಕ್ತ ‘ಸ್ವಚ್ಛ ಉಜಿರೆ -ಸ್ವಸ್ಥ ಉಜಿರೆ’ ಸ್ವಚ್ಛತಾ ಅಭಿಯಾನ

ಉಜಿರೆ: ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಅಂಗವಾಗಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಉಜಿರೆ ಇಲ್ಲಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ (ಎನ್ಎಸ್ಎಸ್ ) ಹಾಗೂ ವಾಣಿಜ್ಯ ಮತ್ತು ಕೈಗಾರಿಕಾ ಸಂಘ (ರಿ )ಉಜಿರೆ ಇವರ ಸಂಯುಕ್ತ ಆಶ್ರಯದಲ್ಲಿ,’ಸ್ವಚ್ಛ ಉಜಿರೆ -ಸ್ವಸ್ಥ ಉಜಿರೆ’ಸ್ವಚ್ಛತಾ ಅಭಿಯಾನ ನಡೆಯಿತು.

ಅಭಿಯಾನವನ್ನು ಉದ್ಘಾಟಿಸಿದ ಉಜಿರೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಗಳಾದ ಮಹಾವೀರ ಶೇಬಣ್ಣನವರ ಮಾತನಾಡಿ ” ಸ್ವಚ್ಛತೆಯ ಬಗ್ಗೆ ಪ್ರತಿಯೊಬ್ಬ ನಾಗರೀಕನು ಕೂಡ ಅರಿವು ಹೊಂದಿರಬೇಕು. ಗ್ರಾಮ ಪಂಚಾಯತುಗಳು ಕೂಡ ಸ್ವಚ್ಛತೆ ಬಗ್ಗೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಎಸ್ ಡಿ ಎಂ ಕಾಲೇಜು ಇಂತಹ ಸಮಾಜಮುಖಿ ಕೆಲಸ ಮಾಡುತ್ತಿರುವುದು ಶ್ಲಾಘನೀಯ “ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ ಇದರ ಅಧ್ಯಕ್ಷ ಪ್ರಸಾದ್ ಬಿ ಎಸ್ ಮಾತನಾಡಿ “ಶ್ರೀ ಕ್ಷೇತ್ರ ಧರ್ಮಸ್ಥಳವು ಸ್ವಚ್ಛತೆಗೆ ಹೆಸರುವಾಸಿ.ಸ್ವಚ್ಛತೆಗೆ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಯಾವಾಗಲೂ ಮಹತ್ವ ಕೊಡುತ್ತಾರೆ.ಆದುದರಿಂದ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಜನ್ಮ ದಿನದ ಅಂಗವಾಗಿ ಎನ್ಎಸ್ಎಸ್ ಘಟಕ ಹಮ್ಮಿಕೊಂಡಿರುವ ಈ ಸ್ವಚ್ಛತಾ ಕಾರ್ಯಕ್ರಮ ಅರ್ಥಪೂರ್ಣವಾದುದು. ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿದಾಗ ಸ್ವಚ್ಛ ಭಾರತದ ಕನಸು ನನಸಾಗುವುದು “ಎಂದು ಹೇಳಿದರು.

ಕಾಲೇಜಿನ ಪ್ರಾಂಶುಪಾಲರಾದ ಪ್ರಮೋದ್ ಕುಮಾರ್ ಅಧ್ಯಕತೆ ವಹಿಸಿದ್ದರು. ” ಸ್ವಚ್ಛ ಉಜಿರೆ ಸ್ವಸ್ಥ ಉಜಿರೆ” ಅಭಿಯಾದಲ್ಲಿ ಎನ್ ಎಸ್ ಎಸ್ ಸ್ವಯಂ ಸೇವಕರು ಉಜಿರೆ ಕಾಲೇಜಿನಿಂದ ಉಜಿರೆ ವೃತ್ತದ ವರೆಗೆ ಸ್ವಚ್ಛತೆ ನಡೆಸಿದರು. ಕಾರ್ಯಕ್ರಮದಲ್ಲಿ ಭೌತ ಶಾಸ್ತ್ರ ಉಪನ್ಯಾಸಕ ಲಕ್ಷ್ಮೀಶ್ ಭಟ್,ಎನ್ ಎಸ್ ಎಸ್ ಯೋಜನಾಧಿಕಾರಿ ವಿಶ್ವನಾಥ್ ಎಸ್, ಸಹ ಯೋಜನಾಧಿಕಾರಿ ಶೋಭಾ ಪಿ ಉಪಸ್ಥಿತರಿದ್ದರು. ಸ್ವಯಂ ಸೇವಕಿ ಹಂಸವಿ ನಿರೂಪಿಸಿ ಕೀರ್ತನಾ ಸ್ವಾಗತಿಸಿ ಜ್ಯೋತಿಕ ಧನ್ಯವಾದವಿತ್ತರು.

Related posts

ಡಾ. ಜಯಕುಮಾರ್ ಶೆಟ್ಟಿಗೆ ರೋಟರಿಯ ಪ್ರತಿಷ್ಠಿತ ಪ್ರಶಸ್ತಿ

Suddi Udaya

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಅಂಗವಾಗಿ ಕಸದಿಂದ ರಸ ಶೈಕ್ಷಣಿಕ ಕಾರ್ಯಕ್ರಮ

Suddi Udaya

ಇಂದಬೆಟ್ಟು ವಲಯದ ಭಜನಾ ಮಂಡಳಿಗಳ ಪದಾಧಿಕಾರಿಗಳ ಸಭೆ

Suddi Udaya

ಅಯೋಧ್ಯೆ ಬಾಲರಾಮನ ಮೂರ್ತಿ ಕೆತ್ತನೆ ಕಾರ್ಯ ನಿರ್ವಹಿಸಿರುವ ನಾಳದ ಶಿಲ್ಪಿ ಜಯಚಂದ್ರ ಆಚಾರ್ಯರವರಿಗೆ ಬೆಳ್ತಂಗಡಿ ಗುರು ಸೇವಾ ಪರಿಷತ್ ಘಟಕದಿಂದ ಗೌರವಾರ್ಪಣೆ

Suddi Udaya

ನಿಡ್ಲೆ: ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಪಿಲಿಕಜೆ ಬೈಲುವಾರು ಸಮಿತಿ ಸಭೆ- ನೂತನ ಅಧ್ಯಕ್ಷರಾಗಿ ಬಾಲಕೃಷ್ಣ ಗೌಡ, ಕಾರ್ಯದರ್ಶಿಯಾಗಿ ದಿವ್ಯ ಗಿರೀಶ್ ಪಿಲಿಕಜೆ

Suddi Udaya

ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಮೃತರಾದ ಭರತ್‌ ಭೂಷಣ್‌ ಅವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿದ ಶಾಸಕ ಹರೀಶ್ ಪೂಂಜ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ

Suddi Udaya
error: Content is protected !!