ಧರ್ಮಸ್ಥಳ: ಎಲ್ ಐ ಸಿ ದಕ್ಷಿಣ ಮಧ್ಯ ವಲಯ ಮ್ಯಾನೇಜರ್ ಸರವಣ ರಮೇಶ್ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಜನ್ಮ ದಿನದ ಶುಭ ಹಾರೈಸಿದರು.


ಯಲ್ ಐ ಸಿ ಯ ಉನ್ನತ ಅಧಿಕಾರಿಗಳಾದ ಕರ್ನಾಟಕ ರೀಜನಲ್ ಮ್ಯಾನೇಜರ್ ಕೇಶವ ಮೂರ್ತಿ, ಉಡುಪಿ ವಿಭಾಗಾಧಿಕಾರಿಗಳಾದ ಜಿ ಯನ್ ಭಟ್, ಮಾರ್ಕೆಟಿಂಗ್ ಮ್ಯಾನೇಜರ್ ಗುರುರಾಜ್ ರಾವ್, ಮೈಕ್ರೋ ಇನ್ಸೂರೆನ್ಸ್ ಮ್ಯಾನೇಜರ್ ಸೋಮಸುಂದರ್, ಬೆಳ್ತಂಗಡಿ ಶಾಖಾಧಿಕಾರಿ ಸಂತೋಷ್ ರೆಡ್ಡಿ ಉಪಸ್ಥಿತರಿದ್ದರು. ಯಸ್ ಕೆ ಡಿ ಆರ್ ಡಿ ಪಿ ಸಿ ಇ ಓ ಅನಿಲ್ ಕುಮಾರ್, ಸಿ ಯಫ್ ಓ ಶಾಂತಾರಾಮ್ ಪೈ, ವಿಮಾ ಪ್ರಾದೇಶಿಕ ನಿರ್ದೇಶಕ ಗಣೇಶ್ ಬಿ,ಪ್ರಾಜೆಕ್ಟ್ ಆಫೀಸರ್ ಭಾಸ್ಕರ್ ವಿ ಕ್ಷೇತ್ರದ ಪರವಾಗಿ ಗಣ್ಯರನ್ನು ಸ್ವಾಗತಿಸಿದರು.













