ಬೆಳ್ತಂಗಡಿ: ಮಚ್ಚಿನ ಮಕ್ಕಳ ಶಿಕ್ಷಣ ಮಾನದಂಡವಾಗಿ ಪರಿಗಣಿಸಿ ಕರ್ನಾಟಕ ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯಿಂದ ಮಚ್ಚಿನ ಸರ್ಕಾರಿ ಉನ್ನತಿಕರಿಸಿದ ಪ್ರಾಥಮಿಕ ಶಾಲಾ ಶಿಕ್ಷಕಿ ಸುನಿತಾ ಇವರಿಗೆ ಜಿಲ್ಲಾ ಮಟ್ಟದ ಮಕ್ಕಳ ಸ್ನೇಹಿ ಶಿಕ್ಷಕಿ ಪ್ರಶಸ್ತಿ ನೀಡಿ ಗೌರವಿಸಿದೆ.
ಜಿಲ್ಲಾ ಕಾನೂನು ಸೇವೆಯ ಪ್ರಾಧಿಕಾರದ ನ್ಯಾಯಾಧೀಶ ಜೈ ಬುನ್ನಿಸಾ ಬೆಂಗಳೂರು ಮಕ್ಕಳ ಹಕ್ಕುಗಳ ಆಯೋಗದ ಸದಸ್ಯ ವೆಂಕಟೇಶ್ ಕರ್ನಾಟಕ ರಾಜ್ಯ ಎಸ್.ಡಿ.ಎಮ್.ಸಿ ಸಮನ್ವಯ ಕೇಂದ್ರ ವೇದಿಕೆಯ ರಾಜ್ಯದ್ಯಕ್ಷ ಮೋಯ್ದಿನ್ ಕುಟ್ಟಿ ಇವರು ಪ್ರಶಸ್ತಿ ಪ್ರದಾನ ಮಾಡಿದರು. ವರದಿ:- ಹರ್ಷ ಬಳ್ಳಮಂಜ













