ಧರ್ಮಸ್ಥಳ: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ೭೯ನೇ ಜನ್ಮದಿನಾಚರಣೆಯನ್ನು ಬುಧವಾರ ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಪೆರಿಂಜೆ ಪಡ್ಯಾರಬೆಟ್ಟ ಕೊಡಮಣಿತ್ತಾಯ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಎ. ಜೀವಂಧರ ಕುಮಾರ್, ಎಸ್.ಡಿ. ಸಂಪತ್ ಸಾಮ್ರಾಜ್ಯ ಶಿರ್ತಾಡಿ, ಡಾ. ಪ್ರಭಾಚಂದ್ರ, ವಿಧಾನ ಪರಿಷತ್ ಮಾಜಿ ಸದಸ್ಯ ಕೆ. ಪ್ರತಾಪಸಿಂಹ ನಾಯಕ್, ಕೆ. ಅಭಯಚಂದ್ರ ಜೈನ್ ಮೂಡಬಿದಿರೆ, ಸುದರ್ಶನ ಜೈನ್ ಬಂಟ್ವಾಳ,ನೋಟರಿ ಶ್ವೇತಾ ಜೈನ್, ಉದ್ಯಮಿ ಪ್ರಭಾತ್ ಮೂಡುಬಿದಿರೆ, ಮಾಳ ಹರ್ಷೇಂದ್ರ ಜೈನ್, ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ನಾರಾವಿ, ಕಾರ್ಯದರ್ಶಿ ರಶ್ಮಿತಾ ಜೈನ್, ಆಡಳಿತಾಧಿಕಾರಿ ಬಿ.ಪಿ. ಸಂಪತ್ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಪಿ. ಶ್ರೀನಾಥ್ ಮೊದಲಾದವರು ಹೆಗ್ಗಡೆಯವರಿಗೆ ಗೌರವಪೂರ್ವಕವಾಗಿ ಜನ್ಮದಿನದ ಶುಭಾಶಯಗಳನ್ನು ಅರ್ಪಿಸಿದರು.

ಟಾಟಾ ನಾನೋ ಕಾರು ಮತ್ತು ಪೆನ್ನು ಕೊಡುಗೆ: ರಾಮೇಶ್ವರಂನಲ್ಲಿರುವ ಡಾ. ಎ.ಪಿ.ಜೆ. ಅಬ್ದುಲ್ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಧರ್ಮಸ್ಥಳದ ಮಂಜೂಷಾ ವಾಹನಗಳ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕೆ ಇಡಲು ಅಬ್ದುಲ್ ಕಲಾಂ ಬಳಸಿದ ಟಾಟಾನಾನೋ ಕಾರು ಮತ್ತು ಅದರ ದಾಖಲೆ ಪತ್ರಗಳನ್ನು ಹೆಗ್ಗಡೆಯವರಿಗೆ ಹಸ್ತಾಂತರಿಸಲಾಯಿತು. ಮಾಜಿ ರಾಷ್ಟ್ರಪತಿಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭ ಸ್ಮರಿಸಿದ ಹೆಗ್ಗಡೆಯವರು, ಅವರ ಸರಳ ವ್ಯಕ್ತಿತ್ವ, ಸರ್ವಧರ್ಮಸಮನ್ವಯ ನೀತಿ, ದೇವರ ಮೇಲಿನ ದೃಢಭಕ್ತಿ ಮತ್ತು ವಿಶ್ವಾಸವನ್ನು ನೆನೆಪಿಸಿಕೊಂಡರು.ಮಕ್ಕಳೊಂದಿಗೆ ಮಕ್ಕಳಾಗಿ ಮುಕ್ತವಾಗಿ ಬೆರೆತ ಸಂದಭ೯ ಮತ್ತು ಸರಳ ವ್ಯಕ್ತಿತ್ವವನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಹೆಗ್ಗಡೆಯವರು ಹೇಳಿದರು.

ಅವರ ಸ್ಮರಣಾರ್ಥ ತನಗೆ ನೀಡಿದ ಎರಡು ಅಮೂಲ್ಯ ವಸ್ತುಗಳಾದ ಟಾಟಾ ನಾನೋ ಕಾರು ಮತ್ತು ಅಪೂರ್ವ ಪೆನ್ನು ಕೊಡುಗೆ ಬಗ್ಗೆ ಹೆಗ್ಗಡೆಯವರು ಕೃತಜ್ಞತೆ ವ್ಯಕ್ತಪಡಿಸಿದರು. ಡಾ. ಎ.ಪಿ.ಜೆ., ಅಬ್ದುಲ್ ಕಲಾಂ ಅಂತಾರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎ.ಪಿ.ಜೆ.ಎಂ. ನಝೀಮಾ ಮರೈಕಾಯಲ್, ಕಾರ್ಯದರ್ಶಿ ಎ.ಪಿ.ಜೆ.ಎಂ. ಜೈನೀಲಾಭಿ ಡೀಮ್ ಮತ್ತು ಸಹಸಂಸ್ಥಾಪಕ ಎ.ಪಿ.ಜೆ.ಎಂ. ಶೇಖ್ ಸಲೀಂ ಉಪಸ್ಥಿತರಿದ್ದರು.ಗ್ರಾಮಾಭಿವೃದ್ಧಿ ಯೋಜನೆಯ ಸಿಇಒ ಅನಿಲ್ ಕುಮಾರ್ ಸ್ವಾಗತಿಸಿದರು.

ಅಂಚೆ ಚೀಟಿ ಬಿಡುಗಡೆ: ಹೆಗ್ಗಡೆಯವರ ೭೯ನನೇ ಜನ್ಮದಿನದ ಸವಿನೆನಪಿಗಾಗಿ ವಂದೇ ಭಾರತಂ ಪರಿಕಲ್ಪನೆಯಲ್ಲಿ, ಮೂಡಬಿದರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ನೇತೃತ್ವದಲ್ಲಿ ಭಾರತೀಯ ಅಂಚೆ ಇಲಾಖೆಯ ಪುತ್ತೂರು ವಿಭಾಗದ ಸಹಯೋಗದಲ್ಲಿ ವೀರವನಿತೆಯರ ಸಂಕ್ಷಿಪ್ತ ಮಾಹಿತಿಯನ್ನೊಳಗೊಂಡ ಸಚಿತ್ರ ಅಂಚೆ ಚೀಟಿಗಳನ್ನು ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಸರಳ ಸಮಾರಂಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.

ದಾನಚಿಂತಾಮಣಿ ಅತ್ತಿಮಬ್ಬೆ, ರಣಭೈರವಿ ಅಕ್ಕಾದೇವಿ, ಕಾಳಲಾದೇವಿ, ಕಂತಿ, ಚೌಟರರಾಣಿ ಅಬ್ಬಕ್ಕ ದೇವಿ, ನಾಟ್ಯರಾಣಿ ಶಾಂತಲಾದೇವಿ, ಚಂದನಬಾಲೆ.ವಂದೇ ಮಾತರಂ ಗೀತೆಯ ೧೫೦ ವಷ೯ಗಳ ಸ್ಮರಣಾಥ೯ ಹಾಗೂ ೨೦೨೬ ರ ಜಿನಸಮ್ಮಿಲನ ನಡೆಯುವ ಸಮ್ಮೇದ ಶಿಖರ್ಜಿ ವಿಷಯಗಳನ್ನೊಳಗೊಂಡ ಅಂಚೆಪತ್ರಗಳೂ ಸೇರಿದಂತೆ ಒಟ್ಟು ಹತ್ತು ಅಂಚೆಪತ್ರಗಳನ್ನು ಲೋಕಾರ್ಪಣೆಗೊಳಿಸಲಾಯಿತು.

ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಅಂಚೆಚೀಟಿಗಳನ್ನು ಬಿಡುಗಡೆಗೊಳಿಸಿ ಈ ದಿಸೆಯಲ್ಲಿ ಅಂಚೆ ಇಲಾಖೆ ಮತ್ತು ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗೆ ಅಭಿನಂದನೆ ಸಲ್ಲಿಸಿದರು.ಅಂಚೆ ಇಲಾಖೆಯ ನಿರ್ದೇಶಕ ಶ್ರೀಹರ್ಷ ಎನ್. ಮತ್ತು ಪುತ್ತೂರು ಅಂಚೆ ವಿಭಾಗದ ಅಧೀಕ್ಷಕ ರವೀಂದ್ರ ನಾಯ್ಕ ಉಪಸ್ಥಿತರಿದ್ದರು.

ಹುಬ್ಬಳ್ಳಿಯ ಮಹಾವೀರ ಕುಂದೂರ, ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್, ನಾರಾವಿ, ಕಾಯ೯ದಶಿ೯ ರಶ್ಮಿತಾ ಜೈನ್ ಮತ್ತು ಆಡಳಿತ ನಿರ್ದೇಶಕ ಬಿ.ಪಿ. ಸಂಪತ್ ಕುಮಾರ್ ಸಹಕರಿಸಿದರು.ಬಗ್ಗಿ ಕಾರು ಕೊಡುಗೆ :ಶ್ರೀ ಕ್ಷೇತ್ರದ ಅಪಾರ ಅಭಿಮಾನಿ, ಭಕ್ತ, ಹಿರಿಯ ಉದ್ಯಮಿ ಬಸವರಾಜ್ ಆರ್. ಹತ್ತು ಸೀಟುಗಳನ್ನು ಹೊಂದಿರುವ ಬಗ್ಗಿ (ಇ.ವಿ.) ಕಾರನ್ನು ಧರ್ಮಸ್ಥಳಕ್ಕೆ ಕೊಡುಗೆಯಾಗಿ ಅರ್ಪಿಸಿದರು. ಇದನ್ನು ವಿಶೇಷಚೇತನರಿಗೆ ವಸತಿಗೃಹಕ್ಕೆ ಹೋಗಲು ಉಚಿತ ಸೇವೆಗಾಗಿ ಬಳಸಲಾಗುವುದು ಎಂದು ಹೆಗ್ಗಡೆಯವರು ತಿಳಿಸಿದರು.
ರಾಷ್ಟ್ರಪತಿ, ಪ್ರಧಾನಮಂತ್ರಿಗಳಿಂದ ಶುಭಾಶಯ:ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ೭೯ನೇ ಜನ್ಮದಿನದ ಹಿನ್ನೆಲೆಯಲ್ಲಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತ್ಯೇಕ ಶುಭಾಶಯ ಪತ್ರಗಳ ಮೂಲಕ ಹೆಗ್ಗಡೆಯವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ತಿಳಿಸಿದ್ದಾರೆ.













