November 26, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿಲೈಫ್‌ಸ್ಟೈಲ್‌ವರದಿ

ಹರೀಶ್ ಪೂಂಜರಿಂದ ಮಾನವೀಯ ನೆರವು: ಎರಡು ವರ್ಷದ ಆರಾಧ್ಯಳ ಬದುಕಿನಲ್ಲಿ ಬೆಳಕು

ಬೆಳ್ತಂಗಡಿ:ಬಡ ಕುಟುಂಬವೊಂದರ ಪಾಲಗ ಎದುರಾಗಿದ್ದ ಸಂಕಷ್ಟದ ಸಂದರ್ಭದಲ್ಲಿ ನೆರವಿನ ಹಸ್ತ ಚಾಚಿ, ಎರಡು ವರ್ಷದ ಪುಟ್ಟ ಮಗುವಿನ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪಣಕಜೆಯ ಅರುಣ್ ಮತ್ತು ಸೌಂದರ್ಯ ದಂಪತಿಯ ಎರಡು ವರ್ಷದ ಮಗು ಆರಾಧ್ಯ ತೀವ್ರ ಅನಾರೋಗ್ಯದಿಂದ ಬಳಲುತ್ತಿತ್ತು. ಮಗುವಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದರೂ, ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಚಿಕಿತ್ಸೆಯ ವೆಚ್ಚ ಭರಿಸುವುದು ದೊಡ್ಡ ಸವಾಲಾಗಿತ್ತು.ಮಗುವಿನ ಕುಟುಂಬದ ಸಂಕಷ್ಟ ಬೆಳಕಿಗೆ ಬರಲು ಕಾರಣವಾಗಿದ್ದು, ರೈಡಿಂಗ್ ಜೋಡಿಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗುರುತಿಸಿಕೊಂಡಿರುವ ಉಜಿರೆಯ ಯೂಟ್ಯೂಬ್ ಇನ್‌ಫ್ಲುಯೆನ್ಸರ್ ಅವರ ಪ್ರಯತ್ನ. ಮಗುವಿನ ಪರಿಸ್ಥಿತಿಯನ್ನು ಅರಿತುಕೊಂಡ ಅವರು, ಕುಟುಂಬದ ಸಂಕಷ್ಟದ ಕುರಿತು ಸ್ಟೋರಿ ಮಾಡಿ ಸಾರ್ವಜನಿಕರ ಗಮನ ಸೆಳೆದಿದ್ದರು.

ಈ ಸ್ಟೋರಿ ಮೂಲಕವೇ ಶಾಸಕ ಹರೀಶ್ ಪೂಂಜ ಅವರ ಗಮನಕ್ಕೂ ಮಗುವಿನ ಪರಿಸ್ಥಿತಿ ತಲುಪಿತ್ತು.ಈ ಸಂದರ್ಭದಲ್ಲಿ ಕುಟುಂಬದ ನೆರವಿಗೆ ಧಾವಿಸಿದ್ದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ. ಮಗುವಿನ ಅನಾರೋಗ್ಯದ ವಿಚಾರ ತಿಳಿದ ಶಾಸಕರು, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಕುರಿತು ಮಾಹಿತಿ ಪಡೆದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರೊಂದಿಗೆ ಮಾತುಕತೆ ನಡೆಸಿದರು.

ಮಗುವಿನ ಚಿಕಿತ್ಸೆಗೆ ತಗಲುವ ವೆಚ್ಚದಲ್ಲಿ ಶೇಕಡಾ 50ರಷ್ಟು ಮೊತ್ತವನ್ನು ಆಸ್ಪತ್ರೆಯ ವತಿಯಿಂದ ಕಡಿತಗೊಳಿಸುವಂತೆ ವ್ಯವಸ್ಥೆ ಮಾಡಿಸಿ, ಉಳಿದ ಶೇಕಡಾ 50ರಷ್ಟು ಚಿಕಿತ್ಸಾ ವೆಚ್ಚವನ್ನು ಶಾಸಕರೇ ಭರಿಸುವ ಮೂಲಕ ನೆರವಾದರು.ಸಕಾಲದಲ್ಲಿ ದೊರೆತ ಈ ನೆರವಿನಿಂದ ಆರಾಧ್ಯಳಿಗೆ ಯಶಸ್ವಿಯಾಗಿ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ನೆರವೇರಿತು.

ಇದೀಗ ಮಗು ಸಂಪೂರ್ಣ ಚೇತರಿಸಿಕೊಂಡಿದ್ದು, ಹಿಂದಿನಂತೆ ಆಟವಾಡುತ್ತಾ ನಲಿದಾಡುತ್ತಿದೆ.ಮಗುವಿನ ಮುಖದಲ್ಲಿ ಮತ್ತೆ ನಗು ಮೂಡಿದೆ. ಹೆತ್ತವರ ಕಣ್ಣಲ್ಲಿ ಆತಂಕದ ಬದಲು ನೆಮ್ಮದಿ ಮನೆಮಾಡಿದೆ.ಒಂದು ಕುಟುಂಬದ ಪಾಲಿಗೆ ಸಂಕಷ್ಟದ ಸಮಯದಲ್ಲಿ ಆಸರೆಯಾಗಿ ನಿಂತು, ಪುಟ್ಟ ಮಗುವಿನ ಬದುಕಿನಲ್ಲಿ ಭರವಸೆಯ ಬೆಳಕು ಮೂಡಿಸಿದ ಈ ಮಾನವೀಯ ಕಾರ್ಯ ಗಮನ ಸೆಳೆದಿದೆ.

Related posts

ಶಿಶಿಲ ಶಿವಕೀರ್ತಿ ನಿಲಯದಲ್ಲಿ ಹನುಮ ಜಯಂತಿ

Suddi Udaya

ನ.19: ಸುರ್ಯ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ: ಕಛೇರಿ ಉದ್ಘಾಟನೆ ಹಾಗೂ ವಿಜ್ಞಾಪನ ಪತ್ರ ಬಿಡುಗಡೆ

Suddi Udaya

ಬೆಳ್ತಂಗಡಿ: ಖಾಸಗಿ ಬಸ್ ನೌಕರರ ಸಂಘ ಜಿಲ್ಲಾ ಘಟಕದ ಉದ್ಘಾಟನೆ

Suddi Udaya

ಕರಾಟೆ ಚಾಂಪಿಯನ್ ಶಿಪ್: ಕೀರ್ತೇಶ್ ಗೌಡ ಕುಮಿಟೆ ವಿಭಾಗದಲ್ಲಿ ಚಿನ್ನ ಹಾಗೂ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ

Suddi Udaya

ಬೆಳ್ತಂಗಡಿ : ಎಸ್ ಡಿ ಪಿ ಐ ಯಿಂದ ಸಂವಿಧಾನ ದಿನಾಚರಣೆ

Suddi Udaya

ಕೊಕ್ಕಡದಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಿರ್ಮಿಸಿರುವ ನೂತನ ಪಾಲನಾ ಕೇಂದ್ರ ಕಟ್ಟಡದ ಉದ್ಘಾಟನೆ

Suddi Udaya
error: Content is protected !!