ಬೆಳ್ತಂಗಡಿ: ಕಣಚೂರು ಪಿಯು ಕಾಲೇಜಿನ ಇತಿಹಾಸ ಉಪನ್ಯಾಸಕಿ ಹಾಗೂ ಬೆಳ್ತಂಗಡಿ ತಾಲೂಕಿನ ಅಚಿನಡ್ಕದವರಾದ ಪ್ರಮಿತ ಅವರು ಮಂಡಿಸಿದ “ಸ್ವಾತಂತ್ರ್ಯ ಚಳುವಳಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪಾತ್ರ” ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ಪ್ರಕಟಿಸಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಅಧ್ಯಕ್ಷರು ಹಾಗೂ ಮಾರ್ಗದರ್ಶಕರಾದ ಡಾ. ತ್ರಿವೇಣಿ ಅರಸ್ ಅವರ ಮಾರ್ಗದರ್ಶನದಲ್ಲಿ ಪ್ರಮಿತಾ ಅವರು ಈ ಸಂಶೋಧನಾ ಪ್ರಬಂಧವನ್ನು ಪೂರ್ಣಗೊಳಿಸಿದ್ದಾರೆ.
ಇವರು ಬೆಳ್ತಂಗಡಿಯ ದಯಾನಂದ ಅಚ್ಚಿನಡ್ಕ ಮತ್ತು ಚಂದ್ರಕಲಾ ದಂಪತಿಯ ಪುತ್ರಿ ಹಾಗೂ ಚಿಕ್ಕಮಗಳೂರಿನ ಅವಿನಾಶ್ ಎಸ್.ಎಂ. ಅವರ ಧರ್ಮಪತ್ನಿ.













