31.9 C
ಪುತ್ತೂರು, ಬೆಳ್ತಂಗಡಿ
September 30, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಉಜಿರೆ: ಶ್ರೀ ಧರ್ಮಸ್ಥಳ ಮಂ.ಅ. ಹಿ. ಪ್ರಾ. ಶಾಲೆಯಲ್ಲಿ ಆಟಿದ ಲೇಸ್ ಕಾರ್ಯಕ್ರಮ

ಉಜಿರೆ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಟಿದ ಲೇಸ್ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ ಸದಾನಂದ ಮುಂಡಾಜೆ, ನಿವೃತ್ತ ಎಸ್.ಡಿ.ಎಂ ಕಾಲೇಜಿನ ಸಿಬ್ಬಂದಿ ಕಾರ್ಯಕ್ರಮದ ಉದ್ಘಾಟನೆಯನ್ನು ಕಳಸಕ್ಕೆ ಅಕ್ಕಿಹಾಕಿ ಹಿಂಗಾರವನ್ನು ಬಿಡಿಸಿ ದೀಪ ಬೆಳಗಿಸಿ ಚೆನ್ನಮನೆ ಆಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಆಟಿ ವಿಶೇಷತೆಯ ಬಗ್ಗೆ ಮಾತನಾಡಿದರು. ಹಿರಿಯರು ಮಾಡಿಕೊಂಡು ಬಂದ ಆಚರಣೆಯ ಬಗ್ಗೆ ಮಕ್ಕಳಿಗೆ ತಿಳಿಸಿದರು.

ಹಿರಿಯರ ಕಾಲದಲ್ಲಿ ಆಟಿ ತಿಂಗಳ ಎಂದರೆ ಅದು ಕಷ್ಟದ ಸಮಯ., ರೋಗರುಜಿನಗಳನ್ನು ಹೊಡೆದೋಡಿಸಲು ಮನೆ ಮನೆಗೆ ಆಟಿಕಲೆಂಜ ಬರುತ್ತಾನೆ ಎಂದು ಹೇಳಿದರು.
ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಅಬೂಬಕ್ಕರ್ ಇವರು ಆಟಿ ವಿಶೇಷತೆ ಬಗ್ಗೆ ಮಕ್ಕಳಿಗೆ ತಿಳಿಸಿದರು.
ಶಾಲಾ ಮುಖ್ಯೋಪಾಧ್ಯಾಯರಾದ ಬಾಲಕೃಷ್ಣ ನಾಯ್ಕ್ ಆಟಿ ತಿಂಗಳ ಬಗ್ಗೆ ಮಕ್ಕಳಿಗೆ ತಿಳಿಸಿದರು. ಆಟಿ ತಿಂಗಳ ಪರಿಕರಗಳನ್ನು ಪ್ರದರ್ಶಿಸಲಾಯಿತು. ವಿದ್ಯಾರ್ಥಿಯು ಆಟಿ ಕಲೆಂಜದ ಪ್ರದರ್ಶನ ಮಾಡಿದರು.. ಸುಮಾರು 20 ಬಗೆಯ ಆಟಿ ತಿಂಗಳ ಸಾಂಪ್ರದಾಯಿಕ ತಿಂಡಿಗಳನ್ನು ಮಕ್ಕಳಿಗೆ ಮತ್ತು ಬಂದವರಿಗೆ ವಿತರಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಕೂಸಪ್ಪ , ಶಿಕ್ಷಕಿಯಾದ ಜ್ಯೋತಿವರು ಸ್ವಾಗತಿಸಿದರು. ಶಿಕ್ಷಕಿ ಸುಜಾತ ಧನ್ಯವಾದ ಮಾಡಿದರು.

Related posts

ತೆಕ್ಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ : ರೂ.111 ಕೋಟಿ ವ್ಯವಹಾರ, ರೂ.24 ಲಕ್ಷ ಲಾಭ,

Suddi Udaya

ಇತಿಹಾಸ ಪ್ರಸಿದ್ಧ ಅರಮಲೆಬೆಟ್ಟ ಶ್ರೀ ಕೊಡಮಣಿತ್ತಾಯ ದೈವಸ್ಥಾನದ ಬ್ರಹ್ಮಕುಂಭಾಭಿಷೇಕ : ಹೊರ ಕಾಣಿಕೆಯ ಆಕಷ೯ಕ ಹಾಗೂ ಭವ್ಯ ವಾದ ಶೋಭಾಯಾತ್ರೆ – ಯಕ್ಷಗಾನ ವೇಷ, ಹತ್ತು ಭಜನಾ ತಂಡಗಳಿಂದ ಕುಣಿತ ಭಜನೆ, ಕೊಂಬು,ಚೆಂಡೆ, ವಾದ್ಯ ವಿಶೇಷ ಆಕಷ೯ಣೆ

Suddi Udaya

ಬಂದಾರು: ಚಂದ್ರಹಾಸ ಕುಂಬಾರರವರಿಗೆ “ಕಲಾ ರತ್ನ” ಪ್ರಶಸ್ತಿ

Suddi Udaya

ಮಂಗಳೂರು ವಿ.ವಿ. ವಾಲಿಬಾಲ್ ಪಂದ್ಯಾಟ: ಉಜಿರೆ ಎಸ್ .ಡಿ.ಎಂ.ಕಾಲೇಜಿಗೆ ಪ್ರಶಸ್ತಿ

Suddi Udaya

ಬಳಂಜ: ಬದಿನಡೆ ದೇವಸ್ಥಾನದಲ್ಲಿ ವರಮಹಾಲಕ್ಷ್ಮೀ ಪೂಜೆ

Suddi Udaya

ಪಂಚ ಗ್ಯಾರಂಟಿ ಯೋಜನೆಯ ತಾಲೂಕು ಮಟ್ಟದ ಅನುಷ್ಟಾನ ಸಮಿತಿ ಸಭೆ

Suddi Udaya
error: Content is protected !!