November 29, 2026
ಅಭಿನಂದನೆಗ್ರಾಮಾಂತರ ಸುದ್ದಿಜಿಲ್ಲಾ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಡಾ. ವಿಭಾ ರೈ ಅವರಿಗೆ ತಂತ್ರಜ್ಞಾನ ವಿಭಾಗದಲ್ಲಿ ಪಿಎಚ್.ಡಿ ಪದವಿ

ಬೆಳ್ತಂಗಡಿ: ತಾಲೂಕಿನ ಲಾಯಿಲ ಗ್ರಾಮದ ಉರಡ್ಕ ನಿವಾಸಿಗಳಾದ ಜಗದೀಶ ರೈ ಮತ್ತು ವಿಜಯಭಾರತಿ ದಂಪತಿಗಳ ಪುತ್ರಿ ಹಾಗೂ ಪೊಸಲಾಯಿ ಲಾಯಿಲ ನಿವಾಸಿ ಸಚಿನ್ ಶೆಟ್ಟಿ ಅವರ ಪತ್ನಿ ವಿಭಾ ರೈ ಅವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU), ಬೆಳಗಾವಿ ವತಿಯಿಂದ ತಂತ್ರಜ್ಞಾನ ವಿಭಾಗದಲ್ಲಿ ಪಿಎಚ್.ಡಿ ಪದವಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

ಇವರು “Process Optimization to Enhance the 2G Bioethanol Using FeO Nanoparticles from Cocoa Pod Shell” ಎಂಬ ವಿಷಯದ ಕುರಿತು ಸಂಶೋಧನೆ ನಡೆಸಿದ್ದು, ನಿಟ್ಟೆಯ NMAM Institute of Technology ಸಂಶೋಧನಾ ಕೇಂದ್ರದಲ್ಲಿ ಡಾ. ಉಜ್ವಲ್ ಪಿ. ಅವರ ಮಾರ್ಗದರ್ಶನದಲ್ಲಿ ಈ ಸಂಶೋಧನೆಯನ್ನು ಕೈಗೊಂಡಿದ್ದಾರೆ.

ವಿಶೇಷವೆಂದರೆ, ಇವರ ಸಂಶೋಧನಾ ಕಾರ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ಪೇಟೆಂಟ್ ಕಚೇರಿಯಿಂದ (Indian Patent Office) ಪೇಟೆಂಟ್ ಕೂಡ ಮಂಜೂರಾಗಿದೆ. ಕೋಕೋ ಹಣ್ಣಿನ ಸಿಪ್ಪೆಯಿಂದ ದ್ವಿತೀಯ ತಲೆಮಾರಿನ ಜೈವಿಕ ಇಂಧನ (2G Bioethanol) ಉತ್ಪಾದನೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಇವರ ಸಂಶೋಧನೆಯು ಜೈವಿಕ ಇಂಧನ ತಂತ್ರಜ್ಞಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆಯಾಗಿದೆ.

Related posts

ಆಟೋ ಚಾಲಕ- ಮಾಲಕ ಸಂಘದ ಮಾಜಿ ಅಧ್ಯಕ್ಷ ಶಿವಯ್ಯ ಪೂಜಾರಿ ನಿಧನ

Suddi Udaya

ನಾವೂರುನಲ್ಲಿ ಆಧಾರ್‌ ಕಾರ್ಡ್ ನೋಂದಾವಣೆ ಶಿಬಿರ

Suddi Udaya

ಫರಂಗಿಪೇಟೆಯಲ್ಲಿ ದ್ವಿಚಕ್ರ ವಾಹನಕ್ಕೆ ಕಂಟೈನರ್ ಡಿಕ್ಕಿ ಪುತ್ತಿಲ ಗ್ರಾಮದ ಕಳೆಂಜಿಬೈಲು ನಿವಾಸಿ ಇಬ್ರಾಹಿಮ್ ಎನ್ ಮೃತ್ಯು

Suddi Udaya

ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಗಳಿಸಿದ ಸುಜನ್ ಸಿ. ಭಂಡಾರಿ ರವರಿಗೆ ಅಳದಂಗಡಿ ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ವತಿಯಿಂದ ಸನ್ಮಾನ

Suddi Udaya

ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಶಿವಂಶಾಗೆ ಹಲವು ಪ್ರಶಸ್ತಿ: ಲಾಯಿಲದಲ್ಲಿ ಪ್ರಥಮ, ಮಹಿಳಾ ವೃಂದದಲ್ಲಿ ತೃತೀಯ, ಎಕ್ಸೆಲ್‌ನಲ್ಲಿ ಆರನೇ ಸ್ಥಾನ

Suddi Udaya

ಡಾ. ಡಿ ವೀರೇಂದ್ರ ಹೆಗ್ಗಡೆಯವರ 59ನೇ ವರ್ಧಂತ್ಯುತ್ಸವ: ಬೆಳ್ತಂಗಡಿ ವಕೀಲರ ಸಂಘದಿಂದ ಗೌರವಾರ್ಪಣೆ

Suddi Udaya
error: Content is protected !!