26 C
ಪುತ್ತೂರು, ಬೆಳ್ತಂಗಡಿ
April 3, 2025
ಅಪರಾಧ ಸುದ್ದಿ

ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ

ಬೆಳ್ತಂಗಡಿ : ಕಾರು ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಧರ್ಮಸ್ಥಳದ ಕನ್ಯಾಡಿಯಲ್ಲಿ ನಡೆದಿದೆ.

ಧರ್ಮಸ್ಥಳದಿಂದ ಉಜಿರೆ ಕಡೆ ಬರುತ್ತಿದ್ದ ಬೈಕ್ ಹಾಗೂ ಧರ್ಮಸ್ಥಳ ಕಡೆಗೆ ಹೋಗುತ್ತಿದ್ದ ಕಾರು ನಡುವೆ ಧರ್ಮಸ್ಥಳ ಗ್ರಾಮದ ಕನ್ಯಾಡಿ ರಾಮಮಂದಿರದ ಬಳಿಯ ತಿರುವಿನಲ್ಲಿ ಅಪಘಾತ ನಡೆದಿದ್ದು ಬೈಕ್ ಸವಾರ ಧರ್ಮಸ್ಥಳ ನಿವಾಸಿ ನಿತೇಶ್(28) ಗಾಯಗೊಂಡಿದ್ದು ತಕ್ಷಣ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.ಅಪಘಾತದ ರಭಸಕ್ಕೆ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಟಯರ್ ಬೈಕಿನಿಂದ ಕಳಚಿ ಬಿದ್ದಿದೆ. ಕಾರಿನ ಏರ್ ಬ್ಯಾಗ್ ಓಪನ್ ಅಗಿರುವ ಕಾರಣ ಕಾರಿನಲ್ಲಿದ್ದವರಿಗೆ ದೊಡ್ಡ ಗಾಯವಾಗಿಲ್ಲ. ಈ ಬಗ್ಗೆ ಬೆಳ್ತಂಗಡಿ ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಪಟ್ರಮೆ ಪಟ್ಟೂರಿನ ನೆರೆಕರೆಯ ಇಬ್ಬರು ಯುವತಿಯರು ಮೃತ್ಯು: ಆತ್ಮಹತ್ಯೆ ಮಾಡಿಕೊಂಡ ಶಂಕೆ : ಮುಂದುವರಿದ ಪೊಲೀಸರ ತನಿಖೆ

Suddi Udaya

ಆಟೋ ಚಾಲಕನಿಗೆ ಅಪರಿಚಿತ ತಂಡದಿಂದ ಹಲ್ಲೆ: ಠಾಣೆಗೆ ದೂರು

Suddi Udaya

ಬೆಳ್ತಂಗಡಿ : ಅಕ್ರಮವಾಗಿ ಕಬ್ಬಿಣದ ಗುಜರಿ ವಸ್ತು ಸಾಗಾಟ: ಚಾಲಕ ಪರಾರಿ; ವಾಣಿಜ್ಯ ತೆರಿಗೆ ಇಲಾಖೆಯಿಂದ ಲಾರಿ ವಶಕ್ಕೆ

Suddi Udaya

ಪಿಲ್ಯ: ನಿನ್ನಿಕಲ್ಲಿನಲ್ಲಿ ಅಡಿಕೆ ತೋಟದಲ್ಲಿ ಅಕ್ರಮ ಮಾರಾಟಕ್ಕೆ ದಾಸ್ತಾನು ಇರಿಸಲಾಗಿದ್ದಮದ್ಯ ಪತ್ತೆ, ಅಬಕಾರಿ ಇಲಾಖೆಯಿಂದ ದಾಳಿ, ಸೊತ್ತುಗಳು ವಶಕ್ಕೆ

Suddi Udaya

ನಾರಾವಿ ಅರಸು ಕಟ್ಟೆಯಲ್ಲಿ ಗೂಡ್ಸ್ ಟೆಂಪೋ ಗೆ ಬೈಕ್ ಡಿಕ್ಕಿ : ಬೈಕ್ ಸವಾರ ಜೋಕಿ ರೋಡ್ರಿಗಸ್‌ ಸ್ಥಳದಲ್ಲೇ ಸಾವು

Suddi Udaya

ಕಕ್ಕಿಂಜೆಯ ಜೆ.ಕೆ ಎಲೆಕ್ಟ್ರಿಕಲ್ಸ್‌ ಮತ್ತು ವೈಂಡಸಸ್‌೯ ಅಂಗಡಿಯಿಂದ
ರೂ.94 ಸಾವಿರ ಮೌಲ್ಯದ 20 ಕೆ.ಜಿ ಸ್ಕ್ರಾಪ್‌ ಮತ್ತು ದುರಸ್ತಿಗೆ ಬಂದ ಪಂಪುಗಳ ಕಳವು

Suddi Udaya
error: Content is protected !!