September 6, 2026
ಸಮಸ್ಯೆ

ಮೂಡುಕೋಡಿ: ಮನೆಯಂಗಳದಲ್ಲಿ ಕಾಣಿಸಿಕೊಂಡ ಭಾರೀ ಗಾತ್ರದ ಕಾಳಿಂಗ ಸರ್ಪ

ವೇಣೂರು: ಮೂಡುಕೋಡಿ ಗ್ರಾಮದ ಬೊಮ್ಮನಟ್ಟ ವಿಶ್ವನಾಥ ಪೂಜಾರಿ ಅವರ ಮನೆಯ ಅಂಗಳದಲ್ಲಿ ಭಾರಿ ಗಾತ್ರದ ಕಾಳಿಂಗ ಸರ್ಪ ಕಾಣಿಸಿಕೊಂಡಿದ್ದು, ಮನೆ ಮಂದಿ ಬೆಚ್ಚಿ ಬಿದ್ದಿದ್ದಾರೆ.

ಮನೆ ಮಂದಿಯನ್ನು ಕ೦ಡ ಸರ್ಪ ಗದ್ದೆಯ ಪಕ್ಕದ ಗುಹೆಯಲ್ಲಿ ಅವಿತುಕೊಂಡದನ್ನು ಗಮನಿಸಿದ ಸ್ಥಳಿಯ ನಿವಾಸಿ ಸ೦ದೇಶ್ ಪಿ.ಎನ್. ಸ್ಥಳಿಯ ಗ್ರಾ.ಪಂ. ಸದಸ್ಯ ಅನೂಪ್ ಜೆ. ಪಾಯಸ್ ಅವರಿಗೆ ಮಾಹಿತಿ ನೀಡಿದ್ದಾರೆ.
ಅನೂಪ್ ಅವರು ವೇಣೂರು ಇಲಾಖೆಗೆ ಮಾಹಿತಿ ನೀಡಿದ್ದು, ತಕ್ಷಣ ಇಲಾಖೆಯ ಸಿಬ್ಬಂದಿ ಜೊತೆ ಸ್ಥಳಕ್ಕೆ ಆಗಮಿಸಿದರು. ಕಾಳಿಂಗ ಸರ್ಪ ಎ೦ದು ಖಚಿತಗೊಂಡು ವೇಣೂರು ಉಪವಲಯ ಅರಣ್ಯಾಧಿಕಾರಿ ಸುನಿಲ್ ಕುಮಾರ್ ಮಾರ್ಗದರ್ಶನದ೦ತೆ ಕೋಬ್ರಾ ಹಿಡಿಯಲು ಕಾವಳಕಟ್ಟೆಯ ಸ್ನೇಕ್ ಪ್ರಸಾದ್ ಅವರನ್ನು ಕರೆಸಿಕೊ೦ಡು ಕಾಳಿ೦ಗನನ್ನು ಸೆರೆ ಹಿಡಿದು ರಕ್ಷಿಸಲಾಯಿತು. ಅಪಾಯಕಾರಿ ಕೋಬ್ರಾನನ್ನು ಕೆಲವೇ ಘಂಟೆಗಳಲ್ಲಿ ಸೆರೆ ಹಿಡಿಯಲು ತುರ್ತಾಗಿ ಸಹಕರಿಸಿದ ಸದಸ್ಯ ಅನೂಪ್ ಜೆ. ಪಾಯಸ್ ರವರ ಕಾಳಜಿ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅರಣ್ಯ ಇಲಾಖಾ ಸಿಬ್ಬ೦ದಿ ರೋನಾಲ್ಡ್ ಡಿಸೋಜ ಸೇರಿ ಹಲವರು ಸಹಕರಿಸಿದರು.

Related posts

ನಿನ್ನೆ ಸುರಿದ ಅನಿರೀಕ್ಷಿತ ಮಳೆಯಿಂದಾಗಿ ಪ್ರವಾಹದ ಸ್ಥಿತಿ ಕಂಡುಬಂದ ಹಲವೆಡೆ ಹಾನಿಗೊಳಗದ ಪ್ರದೇಶಕ್ಕೆ ಶಾಸಕ ಹರೀಶ್ ಪೂಂಜಾ ಬೇಟಿ

Suddi Udaya

ವ್ಯಾಪಕ ಮಳೆ: ಜು.9 ದ.ಕ. ಜಿಲ್ಲಾದ್ಯಂತ ಶಾಲೆ-ಪಿಯು ಕಾಲೇಜುಗಳಿಗೆ ರಜೆ ಘೋಷಣೆ

Suddi Udaya

ಎಸ್‌ಡಿಪಿಐ ಕುಂಟಿನಿ ಬ್ರಾಂಚ್ ಸಮಿತಿ ವತಿಯಿಂದ ಕುಂಟಿನಿ-ಕುತ್ರೊಟ್ಟು ರಸ್ತೆ ದುರಸ್ತಿ ಆಗ್ರಹಿಸಿ ಬೃಹತ್ ಪ್ರತಿಭಟನೆ

Suddi Udaya

ಗೇರುಕಟ್ಟೆ ಜನತಾ ಕಾಲೋನಿಯಲ್ಲಿ ನೀರಿನ ಸಮಸ್ಯೆಗೆ ತಕ್ಷಣ ಸ್ವಂದಿಸಿ ಕೊಳವೆ ಬಾವಿ ಕೊರೆಸಿದ ಇ.ಓ ಹಾಗೂ ಕಳಿಯ ಗ್ರಾ.ಪಂ.

Suddi Udaya

ನಿಡ್ಲೆ: ಸಿಡಿಲು ಬಡಿದು ಗಾಣಂತಿ ರಾಜೇಂದ್ರ ಗೌಡರವರ ಪಂಪು ಶೆಡ್, ಬೋರ್ ಪಂಪು ಸಹಿತ ಮನೆಗೆ ಹಾನಿ

Suddi Udaya

ಊಟಕ್ಕಿಲ್ಲದ ಉಪ್ಪಿನಕಾಯಿಯಂತಿರುವ ಬಳಂಜದ ಮೊಬೈಲ್ ಟವರ್: ಬಳಂಜ- ನಾಲ್ಕೂರಿನಲ್ಲಿ ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ಸಂಕಷ್ಟಕ್ಕೆ ಒಳಗಾದ ಗ್ರಾಹಕರು

Suddi Udaya
error: Content is protected !!