24 C
ಪುತ್ತೂರು, ಬೆಳ್ತಂಗಡಿ
April 3, 2025
ಜಿಲ್ಲಾ ಸುದ್ದಿರಾಜ್ಯ ಸುದ್ದಿರಾಷ್ಟ್ರೀಯ ಸುದ್ದಿ

ಸಿದ್ದೇಶ್ವರ ಶ್ರೀ ಗಳ ಅಂತ್ಯಕ್ರಿಯೆಗೆ ಶಾಂತಿಯಿಂದ ಸಹಕರಿಸಿ: ಬೊಮ್ಮಾಯಿ ಮನವಿ


ಬೆಂಗಳೂರು: ಜನವರಿ 03: ನಿನ್ನೆ ನಿಧನರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಶ್ರೀಗಳ ಎಲ್ಲಾ ಭಕ್ತರು ಶಾಂತಿ, ಸಂಯಮ ಹಾಗೂ ಶಿಸ್ತಿನಿಂದ ದರ್ಶನ ಪಡೆದು ಅಂತ್ಯಕ್ರಿಯೆಗೆ ಸಹರಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದರು.

ವಿಜಯಪುರ ಜಿಲ್ಲಾಡಳಿತ, ಎಲ್ಲಾ ಜನಪ್ರತಿನಿಧಿಗಳು, ಮುಖಂಡರಾದ ಎಂ.ಬಿ.ಪಾಟೀಲ್, ಬಸನಗೌಡರು, ಶಾಸಕರು ಎಲ್ಲರೂ ಅಚ್ಚುಕಟ್ಟಾಗಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನ ಕ್ಕೆ ವ್ಯವಸ್ಥೆ ಕಲ್ಪಿಸಿದ್ದಾರೆ ಎಂದರು.

ಸಿದ್ದೇಶ್ವರ ಶ್ರೀಗಳು ಒಂದು ಸಂಸ್ಕೃತಿ ಯನ್ನೇ ಬಿಟ್ಟುಹೋಗಿದ್ದಾರೆ
ವಿಜಯಪುರದ ಜನ ದೊಡ್ಡ ಪ್ರಮಾಣದಲ್ಲಿ ಸಹಕಾರ ನೀಡುತ್ತಿದ್ದಾರೆ. ಸಿದ್ದೇಶ್ವರ ಗುರುಗಳು ಎಷ್ಟು ಪ್ರೀತಿ, ವಿಶ್ವಾಸ ಹಾಗೂ ಸಂಸ್ಕೃತಿಯನ್ನೇ ಬಿಟ್ಟುಹೋಗಿದ್ದಾರೆ ಎನ್ನುವುದು ಅಲ್ಲಿನ ಜನತೆ ನಡೆದುಕೊಂಡ ರೀತಿಯನ್ನು ನೋಡಿದಾಗ ನಿಜವಾಗಿಯೂ ಸಿದ್ದೇಶ್ವರರ ಮಾತಿನಂತೆ ನಡೆದುಕೊಳ್ಳುವ ಜನ ಎಂದೆನಿಸಿದೆ. ಸಹಾಯ, ಸಹಕಾರ, ಊಟ, ತಿಂಡಿ, ನೀರು ನೀಡುತ್ತಿದ್ದಾರೆ. ಇದಕ್ಕಾಗಿ ವಿಜಯಪುರದ ಸಮಸ್ತ ಜನತೆಗೆ ಧನ್ಯವಾದಗಳನ್ನು ಮುಖ್ಯ ಮಂತ್ರಿಗಳು ತಿಳಿಸಿದರು.

Related posts

ಪ್ರತಿಷ್ಠಿತ ಗಾಂಧಿಗ್ರಾಮ ಪ್ರಶಸ್ತಿಗೆ ಕಾಶಿಪಟ್ಣ ಗ್ರಾಮ ಪಂಚಾಯತ್ ಆಯ್ಕೆ

Suddi Udaya

ಉಡುಪಿ:ಐದನೇ ರಾಷ್ಟ್ರೀಯ ಮಟ್ಟದ ಆಹ್ವಾನಿತ ಕರಾಟೆ ಚಾಂಪಿಯನ್ ಶಿಪ್

Suddi Udaya

ನೇತ್ರಾವತಿ ನದಿ ತಟದಿಂದ ಧರ್ಮಸ್ಥಳ ಅಣ್ಣಪ್ಪ ಸನ್ನಿಧಾನದವರೆಗೆ ಪಾದಯಾತ್ರೆ ಕು.ಸೌಜನ್ಯ ತಾಯಿ ಕುಸುಮಾವತಿ ಭಾಗಿ

Suddi Udaya

ಕಲಬುರಗಿ ಬಿಜೆಪಿ ಬೃಹತ್‌ ಸಮಾವೇಶದಲ್ಲಿ ಶಾಸಕ ಹರೀಶ್ ಪೂಂಜರಿಂದ ಮತಯಾಚನೆ

Suddi Udaya

ಪುಣ್ಯಕೋಟಿ ನಾಡಿನಲ್ಲಿ ಮಾತು ಉಳಿಸಿಕೊಳ್ಳದ ಕಾಂಗ್ರೆಸ್ ಸರಕಾರ: ಕರ್ನಾಟಕಕ್ಕೆ ಭಾರವಾದ ಮುಂಗಡ ಪತ್ರ: ಶಾಸಕ ಹರೀಶ್ ಪೂಂಜ

Suddi Udaya

ಹತ್ಯಡ್ಕ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವ: ಕಾರ್ಯಾಲಯ ಉದ್ಘಾಟನೆ

Suddi Udaya
error: Content is protected !!