37.9 C
ಪುತ್ತೂರು, ಬೆಳ್ತಂಗಡಿ
March 6, 2026
ಶಾಲಾ ಕಾಲೇಜು

ಜೇಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ರೆಡ್ ಕ್ರಾಸ್ ಘಟಕ ಸ.ಪ.ಪೂ ಕಾಲೇಜಿನ ಸಹಯೋಗದೊಂದಿಗೆ ರಾಷ್ಟ್ರೀಯ ಯುವ ದಿನಾಚರಣೆ

ಜೇಸಿಐ ಬೆಳ್ತಂಗಡಿ ಮಂಜುಶ್ರೀ ಮತ್ತು ರೆಡ್ ಕ್ರಾಸ್ ಘಟಕ ಸ.ಪ.ಪೂ ಕಾಲೇಜು ನಡ ಸಹಯೋಗದಿಂದ
ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನರೇಂದ್ರ ನಮನ ಕಾರ್ಯಕ್ರಮ ಜ.12ರಂದು‌ನಡ ಸ.ಪ.ಪೂ.ಕಾಲೇಜು ನಡ ಇಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ಜೇಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಜೆಸಿ ಶಂಕರ್ ರಾವ್ ವಹಿಸಿದರು.ಈ ಸಂದರ್ಭದಲ್ಲಿ ನಡ.ಸ.ಪ.ಪೂ ಕಾಲೇಜು ಪ್ರಾಂಶುಪಾಲರಾದ ಚಂದ್ರಶೇಖರ್..ಜೇಸಿಐ ಬೆಳ್ತಂಗಡಿ ಮಂಜುಶ್ರೀ ನಿಕಟಪೂರ್ವ ಅಧ್ಯಕ್ಷ ಪ್ರಸಾದ್.ಪೂರ್ವಧ್ಯಕ್ಷ ಚಿದಾನoದ ಇಡ್ಯಾ ಕಾರ್ಯಕ್ರಮ ಸಂಯೋಜಕಿ ಆಶಾಲತಾ.
ಕಾರ್ಯದರ್ಶಿ ಸುಧೀರ್ ಕೆ.ಎನ್ ಉಪಸ್ಥಿತಿದಿದ್ದರು. ಯುವ ಪೀಳಿಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕು, ಆದರ್ಶ ಪ್ರಯಾರಾಗಿ ಬದುಕು ಕಟ್ಟಿಕೊಳ್ಳ ಬೇಕು, ವಿವೇಕಯುಕ್ತ ಮಾತುಗಳನ್ನು ಜೀವನದಲ್ಲಿ ಆಡಬೇಕು ಎಂದು ದಿಕ್ಸೂಚಿ ಭಾಷಣದಲ್ಲಿ ಪ್ರಥ್ವಿಶ್ ಧರ್ಮಸ್ಥಳ ವಿದ್ಯಾರ್ಥಿಗಳನ್ನು ಪ್ರೆರೇಪಿಸಿದರು.

ನರೇಂದ್ರ ನಮನ ಕಾರ್ಯಕ್ರಮದ ವೇದಿಕೆಯಲ್ಲಿ ಆದರ್ಶ ಯುವ ನಾಯಕ ಪ್ರಶಸ್ತಿಯನ್ನು ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಜಯಾನಂದ ಗೌಡರಿಗೆ ನೀಡಿ ಸನ್ಮಾನಿಸಲಾಯಿತು.

ಇದೆ ಸಂದರ್ಭದಲ್ಲಿ ರಸಪ್ರಶ್ನೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿಜೇತರ ಪಟ್ಟಿಯನ್ನು ಕ್ವಿಜ್ ಮಾಸ್ಟರ್ ಜೆಸಿ ಹೇಮಾವತಿ ವಾಚಿಸಿದರು.

ಜೆಸಿ ಚಂದ್ರಹಾಸ ಬಳಂಜ ವೇದಿಕೆಗೆ ಅತಿಥಿಗಳನ್ನು ಬರಮಾಡಿಕೊಂಡರು . ಜೆಸಿ ರಜತ್ ಜೆಸಿ ವಾಣಿ ವಾಚಿಸಿದರು, ಸ.ಪ.ಪೂ ಕಾಲೇಜು ರೆಡ್ ಕ್ರಾಸ್ ಘಟಕದ ನಿರ್ದೇಶಕರಾದ ಮೋಹನ್ ಗೌಡ ಧನ್ಯವಾದವಿತ್ತರು. ಈ ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ ವರ್ಗ ವಿದ್ಯಾರ್ಥಿಗಳು, ಜೆಸಿ ಪೂರ್ವಧ್ಯಕ್ಷರಾದ ಜೆಸಿ ಶ್ರೀನಾಥ್ ಕೆ. ಎಮ್, ಜೆಸಿ ತುಕಾರಾಮ್, ಜೆಸಿ ಸ್ವರೂಪ್ ಶೇಖರ್, ಮಹಿಳಾ ಜೆಸಿ ಪೂರ್ವಧ್ಯಕ್ಷೆ ಜೆಸಿ ಮಮತಾ ಶ್ರೀನಾಥ್, ಸದಸ್ಯರಾದ ಶೈಲೇಶ್ ಉಪಸ್ಥಿತರಿದ್ದರು.

Related posts

ನಡ ಸ.ಪ.ಪೂ. ಕಾಲೇಜಿನಲ್ಲಿ ಆಟಿಡೊಂಜಿ ದಿನ ಕಾರ್ಯಕ್ರಮ

Suddi Udaya

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಬರೆಂಗಾಯದಲ್ಲಿ ಉಜಿರೆ ಎಸ್ ಡಿ ಎಮ್ ಪಿಯು ಕಾಲೇಜಿನ ಎನ್ ಎಸ್ ಎಸ್ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

Suddi Udaya

ವಾಣಿ ಕಾಲೇಜು: ಪ್ರಥಮ ಪಿಯುಸಿ ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ‘ಪ್ರಭೋಧ’ ಓರಿಯಂಟೇಶನ್ ಕಾರ್ಯಕ್ರಮ

Suddi Udaya

ವಿದ್ವತ್‌ ಪದವಿ ಪೂರ್ವ ಕಾಲೇಜು: ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನ ಬಾಲಕರ ಮತ್ತು ಬಾಲಕಿಯರ ತಂಡವು ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆ

Suddi Udaya
error: Content is protected !!