ಬೆಳ್ತಂಗಡಿ: ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವದ ಪ್ರಯುಕ್ತ ದ.ಕ ಜಿಲ್ಲಾಡಳಿತ, ದ.ಕ ಜಿಲ್ಲಾ ಯುವಜನ ಒಕ್ಕೂಟ, ಜಿಲ್ಲೆಯ ಎಲ್ಲಾ ತಾಲೂಕು ಯುವಜನ ಒಕ್ಕೂಟಗಳು ಮತ್ತು ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ‘ವಿವೇಕರಥ- ಯುವ ಪಥ ಯುವಜಾಗೃತಿ ಜಾಥಾ’ ರಥಯಾತ್ರೆಯನ್ನು ಹಮ್ಮಿಕೊಂಡಿದ್ದು ಈ ಪ್ರಯುಕ್ತ ಮೂಡಬಿದ್ರಿಯಿಂದ ಬೆಳ್ತಂಗಡಿ ತಾಲೂಕಿಗೆ ಪ್ರವೇಶ ಮಾಡುವ ಸಂದರ್ಭದಲ್ಲಿ ಹೊಸಂಗಡಿ ಗ್ರಾಮದ ಗಡಿಯಲ್ಲಿ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಹೊಸಂಗಡಿ ಪ್ರೆಂಡ್ಸ್ ಕ್ಲಬ್ ನ ಆಶ್ರಯದಲ್ಲಿ ನಡೆದ ಚುಟುಕು ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಹೊಸಂಗಡಿ ಪಂಚಾಯತ್ ಅಧ್ಯಕ್ಷ ಕರುಣಾಕರ ಪೂಜಾರಿ ಅಧ್ಯಕ್ಷತೆ ವಹಿಸಿ ಶ್ರೀ ವಿವೇಕಾನಂದ ಮೂರ್ತಿಗೆ ಹೂ ಹಾರ ಹಾಕಿ ಗೌರವ
ಸೂಚಿಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ನಿರ್ರ್ವಹಿಸಿದ , ಈ ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರು ಹರಿಪ್ರಸಾದ್ ಸ್ವಾಗತಿಸಿದರು. ಮಾಜಿ ತಾಲೂಕು ಪಂಚಾಯತ್ ಸದಸ್ಯರ ವಿಜಯ ಗೌಡ ,ಶ್ರಿಪತಿ ಉಪಧ್ಯಾಯ, ಖಾಲಿದ್ ಪೂಲಬೆ, ಪದ್ಮಪೂಜಾರಿ ಪೇರಿ,ಇಸ್ಮಾಯಿಲ್ ಕೆ ಪೆರಿಂಜೆ, ಪಂಚಾಯತ್ ಉಪಾಧ್ಯಕ್ಷೆ, ಸದಸ್ಯರು, ಬೆಳ್ತಂಗಡಿ ತಾಲೂಕು ಒಕ್ಕೂಟ ಅಧ್ಯಕ್ಷರು ಮತ್ತು ಪದಾಧಿಕಾರಿಗಳು,ಜಿಲ್ಲಾ ಯುವಜನ ಒಕ್ಕೂಟ ಪದಾಧಿಕಾರಿಗಳು ಊರ ಗಣ್ಯರು ಉಪಸ್ಥಿತರಿದ್ದರು.