September 6, 2026
ಜಿಲ್ಲಾ ಸುದ್ದಿ

ಬಂಟ್ವಾಳ ಪ್ರಿಯಾ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ : ಅಪಾರ ನಷ್ಟ

ಬಂಟ್ವಾಳ: ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಭಾರೀ ನಷ್ಟವಾಗಿರುವ ಘಟನೆ ಬಂಟ್ವಾಳದ ಬಿಸಿರೋಡಿನ ಅನ್ನಪೂರ್ಣೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ಇರುವ ಪ್ರಿಯಾ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ನಡೆದಿದೆ.
ಎಂಬವರಿಗೆ ಸೇರಿದ ಪ್ರಿಯಾ ಎಲೆಕ್ಟ್ರಾನಿಕ್ಸ್ ಮಳಿಗೆಯ ಮೇಲಿನ ಅಂತಸ್ತಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ .ಎಲೆಕ್ಟ್ರಾನಿಕ್ಸ್ ಜೊತೆಗೆ ಕೊಮಾಕಿ ಕಂಪೆನಿಗೆ ಸೇರಿದ ದ್ವಿಚಕ್ರವಾಹನಗಳ ದಾಸ್ತಾನು ಇರಿಸಲಾಗಿರುವ ಕೊಠಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕೊಮಾಕಿ ಕಂಪೆನಿಯ ಬ್ಯಾಟರಿ ಚಾಲಿತ ಸ್ಕೂಟರ್ ಗಳು ಇಲ್ಲಿದ್ದು, ಇದರ ಬ್ಯಾಟರಿ ಸ್ಪೋಟಗೊಂಡು ಬೆಂಕಿ ಹಬ್ಬಿರುವ ಸಂಶಯ ವ್ಯಕ್ತವಾಗಿದೆ. ಸಾರ್ವಜನಿಕರು ಬೆಂಕಿಯನ್ನು ನೋಡಿ ಅಗ್ನಿಶಾಮಕ ದಳದ ವರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ.

Related posts

ಬೆಳ್ತಂಗಡಿ ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ, ಇದರ ನೂತನ ಅಧ್ಯಕ್ಷರಾಗಿ ಮಿತ್ತಬಾಗಿಲು ಕಕ್ಕೆನೇಜಿ ಶಿವಾನಂದ ರಾವ್ ಆಯ್ಕೆ

Suddi Udaya

ನಾಳೆ (ಜು.23) ದ.ಕ.ಜಿಲ್ಲಾ ಶಾಲಾ-ಕಾಲೇಜುಗಳಿಗೆ ರಜೆ

Suddi Udaya

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ವಾಸಿಸುವ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ನೀಡುವಂತೆ ಕೆಪಿಸಿಸಿ ಪ್ರ. ಕಾರ್ಯದರ್ಶಿ ರಕ್ಷಿತ್ ಶಿವರಾಂರಿಂದ ಅರಣ್ಯ ಸಚಿವರಿಗೆ ಮನವಿ

Suddi Udaya

ಉಜಿರೆಯ ಎಸ್.ಡಿ.ಎಂ ಇಂಜಿನಿಯರಿಂಗ್ ಕಾಲೇಜಿಗೆ ಕ್ರೀಡಾ ಪ್ರಶಸ್ತಿ

Suddi Udaya

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಯುವ ವೇದಿಕೆ ಅಧ್ಯಕ್ಷರಾಗಿ ಚಂದ್ರಕಾಂತ್ ನಿಡ್ಡಾಜೆ, ಕಾರ್ಯದರ್ಶಿಯಾಗಿ ಸುರೇಶ್ ಕೌಡಂಗೆ ಆಯ್ಕೆ

Suddi Udaya

ಧರ್ಮಸ್ಥಳ: ನಾರ್ಯ ತಂಗಾಯಿ ಅರಣ್ಯದಲ್ಲಿ ಬೆಂಕಿ

Suddi Udaya
error: Content is protected !!