September 5, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಸ್ಟಾರ್ ಲೈನ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ನಡ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಡಾ | ಸರ್ವಪಳ್ಳಿ ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಯನ್ನು ಮಾಡುವುದರ ಮೂಲಕ ಗೌರವವನ್ನು ಸೂಚಿಸಲಾಯಿತು.

ಸಭಾ ವೇದಿಕೆಯಲ್ಲಿ ಶಾಲಾ ಆಡಳಿತ ಟ್ರಸ್ಟಿನ ಅಧ್ಯಕ್ಷರಾದ ಸಯ್ಯದ್ ಹಬೀಬ್ ಸಾಹೇಬ್,ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿಯಾದ ಸಯ್ಯದ್ ಇರ್ಫಾನ್, ಶಾಲಾ ಮುಖ್ಯೋಪಾಧ್ಯಾಯಿನಿ ಜಾಕಿನ್ ಬಿನ್ ಉಪಸ್ಥಿತರಿದ್ದರು.
ಶಾಲಾ ಅಧ್ಯಕ್ಷರಾದ ಸಯ್ಯದ್ ಹಬೀಬ್ ರವರು ಮಾತನಾಡಿ ಮಕ್ಕಳ ಪ್ರೀತಿ ಶಿಕ್ಷಕರ ಅತಿ ದೊಡ್ಡ ಸಂಪತ್ತು.ಶಿಕ್ಷಕರು ಭವಿಷ್ಯದ ಸದೃಢ ಪ್ರಜೆಗಳನ್ನು ರೂಪಿಸುವವರು ಆದ್ದರಿಂದ ನಮ್ಮ ಜವಾಬ್ದಾರಿಯನ್ನು ನಿಷ್ಠೆಯಿಂದ ಮಾಡೋಣ” ಎಂದರು.
ಶಾಲಾ ಮುಖ್ಯೋಪಾಧ್ಯಾಯನಿ ಜಾಕಿನ್ ಬಿನ್ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ತಿಳಿಸುತ್ತಾ, ಶಿಕ್ಷಕರ ಕಾರ್ಯಗಳನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.

7 ನೇ ತರಗತಿಯ ವಿದ್ಯಾರ್ಥಿನಿ ಅಫೀಫಾ ಸನಾ ಕಾರ್ಯಕ್ರಮ ನಿರೂಪಿಸಿ, 9 ನೇ ತರಗತಿಯ ವಿದ್ಯಾರ್ಥಿಯಾದ ಮಹಮ್ಮದ್ ಇಂಫಾಜ್ ಸ್ವಾಗತಿಸಿ, 5 ನೇ ತರಗತಿಯ ವಿದ್ಯಾರ್ಥಿನಿ ಇಫಾಝ ಧನ್ಯವಾದ ಸಮರ್ಪಿಸಿದರು.

Related posts

ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಉಜಿರೆ ಮುಂಡತ್ತೋಡಿ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಚಾವಡಿಯಲ್ಲಿ ಶ್ರಮದಾನ

Suddi Udaya

ಉಜಿರೆ: ಶ್ರೀ. ಧ. ಮಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನ ಕಾಲೇಜಿನಲ್ಲಿ ರಾಷ್ಟ್ರೀಯ ಸುಪೋಷಣಾ ಮಾಸಾಚರಣೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗೆ ಶಿಲಾನ್ಯಾಸ ಹಾಗೂ ಕಲಿಕಾ ಆಟಿಕೆಗಳ ಹಸ್ತಾಂತರ ಕಾರ್ಯಕ್ರಮ

Suddi Udaya

ಮಿತ್ತಬಾಗಿಲು: ದಿನಸಿ ಅಂಗಡಿಯಲ್ಲಿ ಅಡಗಿದ್ದ ಕಾಳಿಂಗ ಸರ್ಪ

Suddi Udaya

ಬಳಂಜ ಬಿವಿಎಲ್ ವಾಲಿವಾಲ್ ಪಂದ್ಯಾವಳಿ, ಕೋಟ್ಯಾನ್ ರಾಕರ್ಸ್ ಚಾಂಪಿಯನ್, ಇಕೋಪ್ರೇಶ್ ರನ್ನರ್

Suddi Udaya

ಬೆಳ್ತಂಗಡಿ: ಹೆದ್ದಾರಿಯ ಅಗಲೀಕರಣ ಪರಿಹಾರಧನ ಪಡೆದಮನೆ, ಕಟ್ಟಡಗಳ ತೆರಿಗೆ ರದ್ದು ಪಡಿಸಲು ಸೂಚನೆ

Suddi Udaya
error: Content is protected !!