ವೇಣೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಬ್ರಹ್ಮ ಕಲಶೋತ್ಸವ ವಿವಿಧ ಗ್ರಾಮಗಳ ಭಕ್ತರಿಂದ ಹೊರ ಕಾಣಿಕೆ ಸಮರ್ಪಣೆ

Suddi Udaya

ವೇಣೂರು: ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಮಹಾಲಿಂಗೇಶ್ವರ ದೇಗುಲದ ನವೀಕರಣದ ಪುನರ್ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವವು ಫೆ.19 ರಿಂದ 27 ರವರೆಗೆ ನಡೆಯಲಿದ್ದು, ಇದರ ಅಂಗವಾಗಿ ತಾಲೂಕಿನ ವಿವಿಧ ಗ್ರಾಮಗಳ ಭಕ್ತರಿಂದ ಹೊರ ಕಾಣಿಕೆ
ಸಮಪ೯ಣಾ ಕಾಯ೯ಕ್ರಮ‌ ಫೆ. 18ರಂದು ಜರುಗಿತು.


ತಾಲೂಕಿನ ಗುರುವಾಯನಕೆರೆ ಶಕ್ತಿ ನಗರದಲ್ಲಿ ಹೊರಕಾಣಿಕೆ ಮೆರವಣಿಗೆ ಗೆ ಉಜಿರೆ ಲಕ್ಷ್ಮೀ ಗ್ರೂಪ್ ನ ಮೋಹನ್ ಕುಮಾರ್ ಚಾಲನೆ ನೀಡಿದರು. ಗೋಳಿಯಂಗಡಿಯಿಂದ ವೇಣೂರು ದೇವಸ್ಥಾನದವರೆಗೆ ನಡೆದ ಮೆರವಣಿಗೆ ಶೋಭಾಯಾತ್ರೆಗೆ ಅಳದಂಗಡಿ ಅರಮನೆಯ ಅರಸರು ಹಾಗೂ ಜೀಣೋ೯ದ್ಧಾರ ಸಮಿತಿಯ ಅಧ್ಯಕ್ಷರಾದ ಡಾ. ಪದ್ಮಪ್ರಸಾದ ಅಜಿಲ ಅವರು ಚಾಲನೆ ನೀಡಿದರು.
ಈ ಸಂದಭ೯ದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಶಾಸಕ ಹರೀಶ್ ಪೂಂಜ, ಕಾಯಾ೯ಧ್ಯಕ್ಷ ಜಯಂತ ಕೋಟ್ಯಾನ್, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪುರುಷೋತ್ತಮ ರಾವ್, ಜೀರ್ಣೋದ್ಧಾರ ಸಮಿತಿ ಕಾಯಾ೯ಧ್ಯಕ್ಷರಾದ ಸುಂದರ ಹೆಗ್ಡೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಯಜ್ಞ ನಾರಾಯಣ ಭಟ್, ಪ್ರಮುಖರಾದ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಶಿವಪ್ರಸಾದ್ ಅಜಿಲ,
ಧಮ೯ಸ್ಥಳ‌ ಯೋಜನೆಯ‌ ಯೋಜನಾಧಿಕಾರಿಗಳಾದ ದಿನೇಶ್ ಶೆಟ್ಟಿ, ಯಶವಂತ್, ಪಡಂಗಡಿ ಗ್ರಾಂ.ಪಂ ಅಧ್ಯಕ್ಷೆ ಮೀನಾಕ್ಷಿ, ಕುವೆಟ್ಟು ಗ್ರಾಂ.ಪಂ ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಸಂತೋಷ್ ಕುಮಾರ್ ಜೈನ್, ಸಂತೋಷ್ ಕುಮಾರ್ ಮುಂಡೂರು, ಉದಯ ಹೆಗ್ಡೆ ನಾರಾವಿ, ಬ್ರಹ್ಮಕಲಶೋತ್ಸವ ಮತ್ತು ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು, ಭಕ್ತರು ಉಪಸ್ಥಿತರಿದ್ದರು.

Leave a Comment

error: Content is protected !!