July 23, 2026
ಧಾರ್ಮಿಕವರದಿ

ಭಕ್ತಿ ಪಾರಮ್ಯಕ್ಕೆ ಅಣಿಯಾದ ಮಲೆಂಗಲ್ಲು ಬ್ರಹ್ಮಕಲಶೋತ್ಸವ

ಬೆಳ್ತಂಗಡಿ: ೫೦೦ ಅಡಿ ಎತ್ತರದಲ್ಲಿರುವ ಏಕ ಶಿಲೆಯ ಮೇಲೆ ಶಿವ ಪಾರ್ವತಿ ಜೊತೆಯಾಗಿ ನೆಲೆಸಿರುವ ತಾಲೂಕಿನ ಪದ್ಮುಂಜದ ಮಲೆಂಗಲ್ಲು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಅದ್ಧೂರಿಯಿಂದ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಮಾರ್ಗದರ್ಶನ ದೊಂದಿಗೆ ವಿವಿಧ ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ವಿಜೃಂಭಣೆಯಿAದ ನಡೆದ ಬ್ರಹ್ಮಕಲಶೋತ್ಸವಕ್ಕೆ ಮಾ. ೬ ರಂದು ತೆರೆಬಿರುವುದರೊಂದಿಗೆ ಭಕ್ತಿ ಪಾರಮ್ಯಕ್ಕೆ ಮಲೆಂಗಲ್ಲು ಬ್ರಹ್ಮಕಲಶೋತ್ಸವ ಸಾಕ್ಷಿಯಾಗಿದೆ.

ಬ್ರಹ್ಮಕಲಶೋತ್ಸವ: ಮಾ.೫ರಂದು ಬ್ರಹ್ಮಕಲಶ ಪೂಜೆ, ಪರಿಕಲ ಪೂಜೆ, ಭಜನಾ ಕಾರ್ಯಕ್ರಮ, ವಿವಿಧ ಸಾಂಸ್ಕೃತಿ ಕಾರ್ಯಕ್ರಮ ಹಾಗೂ ಛತ್ರಪತಿ ಶಿವಾಜಿ ನಾಟಕ ಪ್ರರ್ದನಗೊಂಡಿತು. ಮಾ. ೬ರಂದು ಬೆಳಿಗ್ಗೆ ೫ರಿಂದ ಮಹಾಗಣಪತಿ ಹೋಮ, ಗಂಟೆ ೧೦-೪೪ ರಿಂದ ೧೧-೫೦ ವರೆಗೆ ನಡೆಯುವ ವೃಷಭ ಲಗ್ನ ಶುಭಮುಹೂರ್ತದಲ್ಲಿ *ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧಕ್ರಿಯೆ, ಬ್ರಹ್ಮಕಲಶಾಭಿಷೇಕ ಶ್ರೀ ಮಹಾಗಣಪತಿ ದೇವರ ಪುನಃ ಪ್ರತಿಷ್ಠೆ* ಮಧ್ಯಾಹ್ನ ಮಹಾಪೂಜೆ, ವೈದಿಕ ಮಂತ್ರಾಕ್ಷತೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ. ರಾತ್ರಿ ಶ್ರೀದೇವರಿಗೆ ಮಹಾರಂಗಪೂಜೆ ಹಾಗೂ ಪಿಲಿಚಾಮುಂಡಿ ದೈವದ ನರ್ತನ ಸೇವೆ ನಡೆಯಿತು.ಪುತ್ತೂರು ವಿದ್ಯಾಲಕ್ಷಿö್ಮà ಬಳಗದಿಂದ, ಕರ್ನಾಟಕ ಶಾಸ್ತಿçÃಯ ಸಂಗೀತ, ಕೊಡಿಕಲ್ ಮಕ್ಕಳ ಮೇಳದಿಂದ ಶಿವಲೀಲಾರ್ಣವ ಯಕ್ಷಗಾನ, ಉಪ್ಪಿನಂಗಡಿ ಸುಸ್ವರ ಮೆಲೋಡಿಸ್‌ನಿಂದ ಭಕ್ತಿ ಭಾವ ಗಾನಸಂಗಮ, ಅಡೆಂಜ ಅಂಗನವಾಡಿ ಪುಟಾಣಿಗಳಿಂದ ಚಿಣ್ಣರಚಿಲಿಪಿಲಿ, ಕಲ್ಲಡ್ಕ ವಿಠಲ್ ನಾಯಕ್ ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ಹಾಗೂ ಬೈಂದೂರು ಚೈತನ್ಯ ಕಲಾವಿದರಿಂದ ರಾಘು ಮಾಸ್ತುç ನಾಟಕ ಮೈಮನ ಸೆಳೆಯಿತು.

ಸಂಭ್ರಮ ಮನೆ ಮಾಡಿತ್ತು: ಕಳೆದ ಮಾ.೧ ರಿಂದ ೬ ರವರೆಗೆ ಪದ್ಮುಂಜದಲ್ಲಿ ಬ್ರಹ್ಮಕಲಶೋತ್ಸವದ ಕಳೆ ತುಂಬಿತ್ತು. ನಾಡಿನ ಏಕೈಕ ಏಕಶಿಲಾ ಶಿವ-ಪಾರ್ವತಿಯರನ್ನು ದರ್ಶನಕ್ಕಾಗಿ ಸಾವಿರಾರೂ ಭಕ್ತರು ಕ್ಷೇತ್ರಕ್ಕೆ ದಿನಂಪ್ರತಿ ಆಗಮಿಸಿದರು. ವಿವಿಧ ಸಾಂಸ್ಕೃತಿ ಕಾರ್ಯಕ್ರಮಗಳು, ದೀಪಾಲಂಕರ, ನಗರದಲಂಕಾರದಿAದ ಭಕ್ತರನ್ನು ಕ್ಷೇತ್ರ ಬರಸೆಳೆಯುತ್ತಿತ್ತು. ಅನ್ನಛತ್ರದಲ್ಲಿ ಉತ್ತಮ ವ್ಯವಸ್ಥೆ ಮಾಡಲಾಗಿತ್ತು ಸಾವಿರಾರೂ ಮಂದಿ ಅನ್ನಪ್ರಾಸದ ಸ್ವೀಕರಿಸಿದರು. ಕ್ಷೇತ್ರದ ಪ್ರತಿಯೊಂದು ಕಾರ್ಯದಲ್ಲಿ ಸ್ವಯಂ ಸೇವಕರು ಅಚ್ಚಕಟ್ಟಾದ ವ್ಯವಸ್ಥೆಯಿಂದ ಆರು ದಿನಗಳ ಉತ್ಸವ ವಿಜ್ರಭೃಣೆಯಿಂದ ನಡೆದಿದೆ.

ಆಕರ್ಷಿಸಣೀಯ ಸ್ಥಳ:”ಮಲೆ” ಎಂದರೆ ಕಾಡು, ಈ ಕಾನನದ ನಡುವೆವಿರುವ ನಂದಿ ಆಕಾರದ ಕಲ್ಲಿನ ಮೇಲೆ ಉಮಾಮಹೇಶ್ವರ ದೇಗುಲವಿದೆ. ಹೀಗಾಗಿ ಇಲ್ಲಿಗೆ ಮಲೆಂಗಲ್ಲು ಹೆಸರು ಬಂದಿದೆ. ೫೦೦ ಅಡಿ ಎತ್ತರದಲ್ಲಿರುವ ಈ ಪುಣ್ಯಕ್ಷೇತ್ರಕ್ಕೆ ಬಂದು ಸುತ್ತಲು ಕಣ್ಣು ಹಾಯಿಸಿದರೆ ಸುತ್ತಲು ಹಚ್ಚಹಸಿರಿನಿಂದ ಕೂಡಿರುವ ಪ್ರಕೃತಿಯ ಸಿರಿ ಕಣ್ಣಿಗೆ ಮೊದ, ಮನಸ್ಸಿಗೆ ಹಿತ ನೀಡುತ್ತದೆ. ಈ ಪುಣ್ಯ ಕ್ಷೇತ್ರವು ತನ್ನ ಮಹಿಮೆಯೊಂದಿಗೆ ಭಕ್ತರನ್ನು ಸಲಹುವುದರೊಂದಿಗೆ ಪ್ರವಾಸಿತಾಣವಾಗಿ ಆಕರ್ಷಿಸುತ್ತಿದ್ದು ಸರಕಾರ ಹಾಗೂ ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಮತಷ್ಟು ಅಭಿವೃದ್ಧಿ ಕಾರ್ಯ ನಡೆಸಿದಲ್ಲಿ ನಾಡಿನ ಅತೀ ಸುಂದರ ದೇಗುಲವಾಗುವ ಎಲ್ಲ ಲಕ್ಷಣಗಳನ್ನು ಈ ಕ್ಷೇತ್ರವು ಹೊಂದಿದೆ.

ಸಂಸದ ಕ್ಯಾ. ಬ್ರಿಜೇಶ್ ಚೌಟ ಕ್ಷೇತ್ರಕ್ಕೆ ಭೇಟಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು.

ಅನುವಂಶೀಯ ಮೊಕ್ತೇಸರ ಚಿದಾನಂದ ರಾವ್ ಕೊಲ್ಲಾಜೆ, ಆಡಳಿತ ಮಂಡಳಿ ಅಧ್ಯಕ್ಷ ಸದಾನಂದ ಮೇಲಾಂಟ ಮೊಗರೋಡಿ, ಜಿರ್ಣೋದ್ದಾರ ಸಮಿತಿ ಅಧ್ಯಕ್ಷ ಶಿವಶಂಕರ್ ನಾಯಕ್ ಮಾರುತಿಪುರ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಠಲ ಶೆಟ್ಟಿ ಕೊಲ್ಲೊಟ್ಟು, ಸಂಚಾಲಕ ಹರ್ಷ ಮೇಲಾಂಟ, ಆಡಳಿತ ಮಂಡಳಿ ಕಾರ್ಯದರ್ಶಿ ಜಿತೇಶ್ ಜೈನ್ ಅಡೆಂಜ, ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ಪ್ರಫುಲ್ಲಚಂದ್ರ ಅಡ್ಯಂತಾಯ ಮೊಗರೋಡಿ, ಆಡಳಿತ ಮಂಡಳಿ ಕೋಶಾಧಿಕಾರಿ ರಕ್ಷಿತ್ ಪಣೆಕರ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಾರಾಯಣ ಗೌಡ ಮುಚ್ಚೂರು, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಮಲೆಂಗಲ್ಲು, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿಗಳಾದ ರಘುಪತಿ ಭಟ್ ಮತ್ತು ಧನ್ಯ ಕುಮಾರ್ ಪದ್ಮುಂಜ, ಕೋಶಾಧಿಕಾರಿ ಉದಯ ಕುಮಾರ್ ಮೇಲಾಂಟ, ಪ್ರಧಾನ ಅರ್ಚಕ ವಿಜಯ ಕುಮಾರ್ ಭಟ್ ಸಹಿತ ಮತ್ತಿತರರು ಉಪಸ್ಥಿತರಿದ್ದರು.

Related posts

ಹೊಸ್ಮಾರು ಉದ್ಯಮಿ ಪ್ರೇಮ್ ಕುಮಾರ್ ಅನಾರೋಗ್ಯದಿಂದ ನಿಧನ

Suddi Udaya

ಕುಪ್ಪೆಟ್ಟಿ ಸ.ಉ.ಪ್ರಾ.ಶಾಲೆಯಲ್ಲಿ ಬೀಳ್ಕೊಡುಗೆ ಸಮಾರಂಭ

Suddi Udaya

ಕಾಶಿಪಟ್ಣ ಸರಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya

ಇಂದು(ಮಾ.20): ಈದುಲ್ ಫಿತರ್ ಹಬ್ಬದ ಆಚರಣೆ: ದ.ಕ ಜಿಲ್ಲೆಗೆ ಸಾರ್ವತ್ರಿಕ ರಜೆ ಘೋಷಣೆ

Suddi Udaya

ಕು| ಅದಿತಿ ಮುಗೆರೋಡಿ “ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್” ನಲ್ಲಿ ದಾಖಲೆ”

Suddi Udaya

ಉರುವಾಲು ಶ್ರೀ ವೀಘ್ನೇಶ್ವರ ಭಜನಾ ಮಂದಿರದಲ್ಲಿ 17 ನೇ‌ ವರ್ಷದ ನಗರ ಭಜನೆಯ ಮಂಗಳೋತ್ಸವ

Suddi Udaya
error: Content is protected !!