26 C
ಪುತ್ತೂರು, ಬೆಳ್ತಂಗಡಿ
April 3, 2025
ಅಪರಾಧ ಸುದ್ದಿಪ್ರಮುಖ ಸುದ್ದಿ

ಪುಂಜಾಲಕಟ್ಟೆ : ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಆರೋಪಿಗೆ ಜೀವಾವಧಿ ಶಿಕ್ಷೆ

ಪುಂಜಾಲಕಟ್ಟೆ :ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗೆ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಸ್ಟಿ , ಎಸ್ಸಿ – 1, (ಪೋಕ್ಸೋ) ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಬಂಟ್ವಾಳ ತಾಲೂಕು ಉಳಿ ಗ್ರಾಮದ  ಪುಲ್ಲೇರಿ ಮನೆ, ಸತೀಶ್ ಪೂಜಾರಿ 35 ವರ್ಷ ) ಜೀವಾವಧಿ ಶಿಕ್ಷೆಗೆ ಒಳಗಾದ ಆರೋಪಿಯಾಗಿದ್ದಾರೆ.

ಘಟನೆ ಹಿನ್ನೆಲೆ: 2019 ಫೆ.11ರಂದು ಬಂಟ್ವಾಳ ತಾಲೂಕಿನ ಗ್ರಾಮವೊಂದರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಅಪ್ರಾಪ್ತ ವಯಸ್ಸಿನ ಬಾಲಕಿಯ ಇಚ್ಚೆಗೆ ವಿರುದ್ದವಾಗಿ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದಲ್ಲಿ 2019 ಮಾ.22ರಂದು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಅ.ಕ್ರ 28/2019 ಕಲಂ: 448,376, ಐಪಿಸಿ ಮತ್ತು ಕಲಂ:4 ಪೋಕ್ಸೋ ಕಾಯ್ದೆ 2012, ಕಲಂ:3(1)W(1), 3(2)(Va) SC/ST Act ರಂತೆ ಪ್ರಕರಣ ದಾಖಲಾಗಿತ್ತು.
ಪ್ರಕರಣದ ತನಿಖಾಧಿಕಾರಿ ಸೈದುಲ್ ಅಡಾವತ್
ಸಹಾಯಕ ಪೊಲೀಸ್ ಅಧೀಕ್ಷಕರು ಬಂಟ್ವಾಳ ಉಪವಿಭಾಗ ರವರು ಆರೋಪಿ ಸತೀಶ್ ಪೂಜಾರಿ
ಎಂಬಾತನನ್ನು ಬಂಧಿಸಿ, ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ, ತನಿಖೆ ನಡೆಸಿ, ಆರೋಪಿತನ ವಿರುದ್ದ ನ್ಯಾಯಾಲಯಕ್ಕೆದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.
‌ಸದ್ರಿ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಎಸ್ಟಿ, ಎಸ್ಸಿ – 1, (ಪೋಕ್ಸೋ) ನ್ಯಾಯಾಲಯದ ನ್ಯಾಯಾಧೀಶರು ಆರೋಪ ಸಾಬೀತಾಗಿದೆ ಎಂದು ತೀರ್ಮಾನಿಸಿ ಆರೋಪಿಗೆ
10 ವರ್ಷ ಜೈಲುವಾಸ ಹಾಗೂ ರೂ.10, ಸಾವಿರ ದಂಡ, ಜೀವಾವದಿ ಶಿಕ್ಷೆ ಹಾಗೂ ರೂ.10, ಸಾವಿರ ದಂಡ ಮತ್ತು 6 ತಿಂಗಳ ಜೈಲುವಾಸ ಹಾಗೂ 1ಸಾವಿರ ದಂಡ ವಿಧಿಸಿ ಫೆ.23ರಂದು ಆದೇಶ ನೀಡಿದ್ದಾರೆ.
ಈ ಪ್ರಕರಣದಲ್ಲಿ ಬಂಟ್ವಾಳ ಉಪವಿಭಾಗದ ಅಂದಿನ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ಸೈದುಲ್ ಅಡಾವತ್ ರವರು ಸಂಪೂರ್ಣ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ಪೊಲೀಸ್ ಉಪವಿಭಾಗಧಿಕಾರಿ ಕಛೇರಿಯ ಹೆಡ್ ಕಾನ್ಸ್ಟೇಬಲ್ ಸೀತರಾಮ್ ರವರು ತನಿಖಾ ಸಹಾಯಕರಾಗಿ ಕಾರ್ಯನಿರ್ವರ್ಹಿಸಿದ್ದರು ಹಾಗೂ Court Monitoring Cell ಕರ್ತವ್ಯ ವನ್ನು ಮಹಿಳಾ ಕಾನ್ಸ್ಟೇಬಲ್ ಸಫಿನಾ ರವರು ನಿರ್ವಹಿಸಿದ್ದು, ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶ್ರೀಮತಿ ಸಹನಾ ದೇವಿ ನ್ಯಾಯಾಲಯದಲ್ಲಿ ವಾದಿಸಿದ್ದರು.

Related posts

ಉಜಿರೆಯ ಲಾಡ್ಜ್ ಗೆ ಪೊಲೀಸ್ ದಾಳಿ: ವೇಶ್ಯಾವಾಟಿಕೆ‌ ನಿರತರಾಗಿದ್ದ‌ಮೂವರ ಬಂಧನ

Suddi Udaya

ಸೆ.14: ಗುರುವಂದನ ಕಾರ್ಯಕ್ರಮಕ್ಕೆ ಬಹರೈನ್ ಹಾಗೂ ದುಬೈಗೆ ಶ್ರೀರಾಮ ಕ್ಷೇತ್ರದ ಸದ್ಗುರು ಶ್ರೀ ಬ್ರಹ್ಮಾನಂದ ಶ್ರೀಗಳ ಯಾತ್ರೆ

Suddi Udaya

ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ನಿಡ್ಲೆ
ಪಿಲಿಕಜೆ ನಿವಾಸಿ ದಿನೇಶ ನೇಣು ಬಿಗಿದು ಆತ್ಮಹತ್ಯೆ

Suddi Udaya

ಧರ್ಮಸ್ಥಳ: ಜೋಡುಸ್ಥಾನದಲ್ಲಿ ಮಹಿಳೆ ನೇಣುಬಿಗಿದು ಆತ್ಮಹತ್ಯೆ

Suddi Udaya

ಪಡ್ಯಾರಬೆಟ್ಟದ ಕೊಡಮಣಿತ್ತಾಯ ಮೂಲ ದೈವಸ್ಥಾನದಲ್ಲಿ ಆಟಿ ಕೋಲ

Suddi Udaya

ತೆಲಂಗಾಣ ಚುನಾವಣಾ ವಾರ್ ರೂಮ್ ಸಂಯೋಜಕರಾಗಿ ರಕ್ಷಿತ್ ಶಿವರಾಂ ನೇಮಕ

Suddi Udaya
error: Content is protected !!