5‌ಮತ್ತು 8ನೇ ತರಗತಿ ಪಬ್ಲಿಕ್ ಪರೀಕ್ಷೆ: ಅಂತಿಮ ವೇಳಾಪಟ್ಟಿ ಪ್ರಕಟ

Suddi Udaya


ಮಾ.13 ರಿಂದ ಮಾ.18ರ ವರೆಗೆ ಪರೀಕ್ಷೆ
ಬೆಳ್ತಂಗಡಿ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ಮಾರ್ಚ್ 2023ನೇ ಸಾಲಿನ 5 ಮತ್ತು 8ನೇ ತರಗತಿಯ ಮೌಲ್ಯಂಕನ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಇನ್ನೂ 5 ಮತ್ತು 8ನೇ ತರಗತಿಯ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಈ ವೇಳಾಪಟ್ಟಿಯ ಪ್ರಕಾರ ಮಾರ್ಚ್ ಎರಡನೇ ವಾರದಂದು , ಅಂದರೆ ದಿನಾಂಕ ಮಾ.13 ರಿಂದ ಮಾ.18ರ ವರೆಗೆ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಲಾಗಿದೆ.
ಮೌಲ್ಯಂಕನ ಪರೀಕ್ಷೆಗೂ ಮೊದಲು ದಿನಾಂಕ ಮಾ.06 ರಿಂದ ಮಾ.10 ರವರೆಗೆ ವಿದ್ಯಾರ್ಥಿಗಳಿಗೆ ಮೌಖಿಕ ಪರೀಕ್ಷೆಗಳನ್ನು ಆಯಾ ಶಾಲೆಗಳಲ್ಲಿ ನಡೆಸಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಸೂಚಿಸಿದೆ.


5ನೇ ತರಗತಿಯ ವೇಳಾಪಟ್ಟಿ:

ಮಾ.15 ಬುಧವಾರ – ಪ್ರಥಮ ಭಾಷೆ – ಕನ್ನಡ, – ಇಂಗ್ಲಿಷ್, ಹಿಂದಿ, ಉರ್ದು, ಮರಾಠಿ, ತೆಲಗು, ತಮಿಳು. ಮಾ.16 – ಗುರವಾರ- ಕೋರ್ ವಿಷಯ- ಗಣಿತ. ಮಾ.17 – ಶುಕ್ರವಾರ – ಕೋರ್ ವಿಷಯ – ಪರಿಸರ ಅಧ್ಯಯನ. ಮಾ. 18 – ಶನಿವಾರ – ದ್ವಿತೀಯ ಭಾಷೆ – ಇಂಗ್ಲಿಷ್, ಕನ್ನಡ
8 ನೇ ತರಗತಿಯ ವೇಳಾಪಟ್ಟಿ :
ಮಾ.13- ಸೋಮವಾರ- ಕನ್ನಡ, ಇಂಗ್ಲಿಷ್, ಇಂಗ್ಲಿಷ್ (NCERT), ಹಿಂದಿ, ಉರ್ದು, ಮರಾಠಿ, ತೆಲಗು, ತಮಿಳು, ತೆಲುಗು, 303. ಮಾ.14 – ಮಂಗಳವಾರ – ದ್ವಿತೀಯ ಭಾಷೆ- ಇಂಗ್ಲಿಷ್, ಕನ್ನಡ, ಮಾ.15 – ಬುಧವಾರ- ಹಿಂದಿ, ಹಿಂದಿ (NCERT), ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸತ, ಕೊಂಕಣಿ, ತುಳು ಮಾ.16 ಕೋರ್ವಿಷಯ- ಗಣಿತ. ಮಾ.17 – ಕೋರ್ ವಿಷಯ – – ವಿಜ್ಞಾನ. ಮಾ.18– ಕೋರ್ ವಿಷಯ ಸಮಾಜ – ವಿಜ್ಞಾನ. 8ನೇ ತರಗತಿಯಲ್ಲಿ ಪ್ರಥಮ ಭಾಷೆ ಇಂಗ್ಲಿಷ್ (NCERT), 3 (NCERT), ವಿಷಯಗಳು ಆದರ್ಶ ವಿದ್ಯಾಲಯಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನ್ವಯವಾಗುತ್ತವೆ. ವಿಶೇಷ ಶಾಲೆಗಳ ವಿದ್ಯಾರ್ಥಿಗಳಿಗೆ ಮಂಡಲಿಯಿಂದ ಸರಬರಾಜು ಮಾಡುವ ಪ್ರಶೋತ್ತರ ಪತ್ರಿಕೆಗಳನ್ನೇ ಬಳಸಿ ಶಾಲಾ ಹಂತದಲ್ಲಿ ಹಿಂದಿನ ಸಾಲುಗಳಲ್ಲಿ ನಡೆಸದಂತೆ ಮೌಲ್ಯಂಕನನಡೆಸುವುದು.ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ವತಿಯಿಂದ ಮೌಲ್ಯಂಕನ ನಡೆಸುವ ವಿಷಯಗಳನ್ನು ಹೊರತುಪಡಿಸಿ ಉಳಿದೆಲ್ಲಾ ವಿಷಯಗಳಿಗೂ ಮಂಡಲಿಯಿಂದ ನಿಗದಿಪಡಿಸಿರುವ ದಿನಾಂಕಕ್ಕಿಂತ ಮೊದಲೇ ತಮ್ಮಶಾಲಾ ಹಂತದಲ್ಲಿಯೇ ಮೌಲ್ಯಂಕ ನಡೆಸುವುದು ಎಂದು ಹೇಳಲಾಗಿದೆ. ಮಾ. 09 ರಿಂದ ಪಿಯುಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿದ್ದು, ಕೆಲವು ಪರೀಕ್ಷಾ ಕೇಂದ್ರಗಳಲ್ಲಿ ಮೌಲ್ಯಂಕನ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳು ಒಂದೇ ದಿನ ನಡೆಯಬೇಕಾಗಿರುವುದರಿಂದ 5 ಮತ್ತು 8ನೇ ತರಗತಿಗಳ ಮೌಲ್ಯಂಕನವನ್ನು ಮಧ್ಯಾಹ್ನದ ಅವಧಿಯಲ್ಲಿ ನಡೆಸಲಾಗುತ್ತದೆ.

Leave a Comment

error: Content is protected !!