25.7 C
ಪುತ್ತೂರು, ಬೆಳ್ತಂಗಡಿ
March 7, 2026
ಅಪರಾಧ ಸುದ್ದಿ

ಕಾಡು ಪ್ರಾಣಿಗಳನ್ನು ಹೆದರಿಸಲು ಕೋವಿಯಿಂದ ಹಾರಿಸಿದ ಗುಂಡು ತಾಗಿ ಗಂಭೀರ ಗಾಯ

ನಿಡ್ಲೆ : ಕಾಡು ಪ್ರಾಣಿಗಳನ್ನು ಹೆದರಿಸಲು ತೋಟದ ಕಡೆ ಗುರಿ ಇಟ್ಟು ಕೋವಿಯನ್ನು ಸಿಡಿಸಿದ ಪರಿಣಾಮ ಆಕಸ್ಮಿಕ ವಾಗಿ ಗುಂಡು ತಾಗಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ನಿಡ್ಲೆ ಗ್ರಾಮದ ನೂಜಿಲ ಎಂಬಲ್ಲಿ ಮಾ.2ರಂದು ನಡೆಯಿತು.

ನಿಡ್ಲೆ ಗ್ರಾಮದ ನೂಜಿಲ ಮನೆ ದಿ. ರಾಮಣ್ಣ ಗೌಡರ ಪುತ್ರ ಡೀಕಯ್ಯ ( 41 ವರ್ಷ) ಗಾಯಗೊಂಡು ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಇವರ ಸಹೋದರ ಲಕ್ಷ್ಮಣ ಗೌಡ ಕೋವಿಯಿಂದ ಗುಂಡು ಹಾರಿಸಿದವರಾಗಿದ್ದು, ಇವರ ಮೇಲೆ ಧಮ೯ಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ವಿವರ: ಮಾ. 02ರಂದು ರಾತ್ರಿ ಡೀಕಯ್ಯ ಗೌಡ ಅವರು ಅಣ್ಣನಾದ ಲಕ್ಷ್ಮಣ ಗೌಡರವರ ಮನೆಗೆ ಬಂದಿದ್ದರು., ರಾತ್ರಿ 8.30 ಗಂಟೆಯ ವೇಳೆಗೆ ನಾಯಿಗಳು ಎಡಬಿಡದೇ ಬೊಗಳುತ್ತಿರುವುದನ್ನು ಗಮನಿಸಿದ ಲಕ್ಷ್ಮಣ ಗೌಡರವರು ತನ್ನ ಜಮೀನಿಗೆ ಬರುತ್ತಿರುವ ಕಾಡು ಪ್ರಾಣಿಗಳನ್ನು ಹೆದರಿಸಲು ಪರಾವನಣಿಗೆ ಹೊಂದಿರುವ ತೋಟೆ ಕೋವಿಯನ್ನು ತೆಗೆದುಕೊಂಡು ಬಂದು ಅದಕ್ಕೆ ಮದ್ದುಗುಂಡನ್ನು ತುಂಬಿಸಿ,
ಡೀಕಯ್ಯ ಗೌಡರು ಅಂಗಳದಲ್ಲಿ ನಿಂತಿರುವುದನ್ನು ಗಮನಿಸದೇ ಮನೆಯ ಮುಂದುಗಡೆ ಇರುವ ತೋಟದ ಕಡೆ ಗುರಿ ಇಟ್ಟು ಕೋವಿಯನ್ನು ಸಿಡಿಸಿದ್ದರು.
ಈ ವೇಳೆ ಆಕಸ್ಮಿಕ ವಾಗಿ ಸಿಡಿಸಿದ ಚಿಕ್ಕ 2 ಗುಂಡುಗಳು ಡೀಕಯ್ಯರ ಬಲಕೈಗೆ ಮತ್ತು ಎಡಕಾಲಿಗೆ ತಾಗಿ ಗಾಯವಾಗಿದ್ದು, ಅವರನ್ನು ಕೂಡಲೇ ಉಜಿರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಧಮ೯ಸ್ಥಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ತನಿಖೆ ಮುಂದುವರಿಸಿದ್ದಾರೆ.

Related posts

ಮಾಲಾಡಿ ನಿವಾಸಿ ಅನಿಲ್ ಪ್ರವೀಣ ಪಿರೇರಾ ನಾಪತ್ತೆ: ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya

ನೆರಿಯ: ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ: ಆರೋಪಿ ಜೋನ್ಸಾನ್ ಗೆ ನ್ಯಾಯಾಂಗ ಬಂಧನ

Suddi Udaya

ಕಾನೂನು ಬಾಹಿರವಾಗಿ ಅಕ್ರಮ ಕೂಟ ಸೇರಿ ಶಾಂತಿ ಭಂಗ ಆರೋಪ : ಮಹೇಶ್ ಶೆಟ್ಟಿ ತಿಮರೋಡಿ ಬೆಂಬಲಿಗರ ವಿರುದ್ಧ ಪ್ರಕರಣ ದಾಖಲು

Suddi Udaya

ಗ್ರಾಮಕರಣಿಕ ಮಹೇಶ್ ಗೆ ಜೈಲು ಶಿಕ್ಷೆ

Suddi Udaya

ಬುರುಡೆ ಪ್ರಕರಣ; ನ್ಯಾಯಾಧೀಶರ ಮುಂದೆ ಹೇಳಿಕೆ ಕೊಟ್ಟು ವಾಪಸ್ ತೆರಳಿದ ಪ್ರದೀಪ್

Suddi Udaya

ಮಾಟ, ಮಂತ್ರ ನಿವಾರಣೆ ಚಿಕಿತ್ಸಾ ನೆಪದಲ್ಲಿ ಮಹಿಳೆಗೆ ವಂಚನೆ ಆರೋಪ: ಗುರುವಾಯನಕೆರೆ ನಿವಾಸಿ ಕೂಳೂರಿನ ಉಸ್ತಾದ್ ಅಬ್ದುಲ್ ಕರೀಮ್ ಬಂಧನ

Suddi Udaya
error: Content is protected !!