ತೋಟತ್ತಾಡಿ : ತೋಟತ್ತಾಡಿ ಗ್ರಾಮದ ಮುಂಡಾಯಿಲು ಎಂಬಲ್ಲಿ ಸರಕಾರಿ ಗುಡ್ಡದಲ್ಲಿ ಜುಗಾರಿ ಆಟವಾಡುತ್ತಿದ್ದ
ಅಡ್ಡೆಗೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿ, ,ರೂ.11,870 ಮೌಲ್ಯದ ಸೋತ್ತುಗಳನ್ನು ವಶಪಡಿಸಿಕೊಂಡ ಘಟನೆ ಮಾ.12 ರಂದು ವರದಿಯಾಗಿದೆ.
ಚಾರ್ಮಾಡಿ ಗ್ರಾಮದ ಅರೆಕಲ್ ಮನೆ ನಿವಾಸಿ ರಹೀಂ ( 44ವರ್ಷ),
ಮುಂಡಾಜೆ ಗ್ರಾಮದ, ದೇವಗುಡಿ ಮನೆಯ ಫಯಾಜ್ ಪಾಷಾ ( 33 ವರ್ಷ), ಕಡಿರುದ್ಯಾವರ ಗ್ರಾಮದ,
ಕಾನಪ೯ ನಿವಾಸಿ ರಾಜೇಶ್, (46 ವರ್ಷ) ,ತೋಟತ್ತಾಡಿ ಗ್ರಾಮದ ಮುಂಡಾಯಿಲ್ ಮನೆಯ
ಅನೀಲ್ ( 45 ವರ್ಷ) ಬಂಧಿತರಾದವರು. ಸಿದ್ದಿಕ್ ಯಾನೆ ಅರೆಕಲ್ ಸಿದ್ದಿಕ್, ಕೃಷ್ಣ ಯಾನೆ ಕಿಟ್ಟ ಗಾಂಧಿನಗರ, ಸಂತೋಷ್ ಗಾಂಧಿನಗರ, ಸುಧಾಕರ ಕೊಯಿಕುರಿ ಪೊಲೀಸರ ದಾಳಿ ವೇಳೆ ತಪ್ಪಿಸಿಕೊಂಡಿದ್ದಾರೆ.
ಘಟನೆ ವಿವರ: ತೋಟತ್ತಾಡಿ ಗ್ರಾಮದ ಮುಂಡಾಯಿಲು ಎಂಬಲ್ಲಿ ಸರಕಾರಿ ಗುಡ್ಡದಲ್ಲಿ ಕೆಲವರು ಹಣವನ್ನು ಪಣವಾಗಿಟ್ಟು ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯನ್ವಯ ಮಾ.22ರಂದು ಬೆಳಗ್ಗಿನ ಜಾವ 3.30 ಗಂಟೆಗೆ ಜುಗಾರಿ ಅಡ್ಡೆಗೆ ಧಾಳಿ ನಡೆಸಿದಾಗ ಆಟ ಆಡುತ್ತಿದ್ದವರು ಅಲ್ಲಿಂದ ಓಡಿ ಹೋಗಲು ಪ್ರಯತ್ನಿಸಿದ್ದು ಓಡಿ ಹೋಗುತ್ತಿದ್ದವರನ್ನು ಪೊಲೀಸರು ಬೆನ್ನಟ್ಟಿ ನಾಲ್ಕು ಮಂದಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳದಲ್ಲಿದ್ದ ಪ್ಲಾಸ್ಟಿಕ್ ಚಾಪೆ,
ಮೇಣದ ಬತ್ತಿ , ಲೈಟರ್ ,
ವಿವಿಧ ಜಾತಿಯ ಇಸ್ಪೀಟ್ ಎಲೆಗಳು,
ಒಟ್ಟು ರೂ 7,070 ನಗದು, ಒಂದು ಟಚ್ ಸ್ಕ್ರೀನ್ ಮೊಬೈಲ್, ನಾಲ್ಕು
ಚಿಕ್ಕ ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಸೋತ್ತುಗಳ ಒಟ್ಟು ಮೌಲ್ಯ ರೂ.
11,870 ಎಂದು ಅಂದಾಜಿಸಲಾಗಿದೆ.
ಧಮ೯ಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.