September 6, 2026
ತಾಲೂಕು ಸುದ್ದಿ

ಮಹಿಳಾ ಸಬಲೀಕರಣ ಕಾಯ೯ಕ್ರಮ: ಡಾ. ಹೇಮಾವತಿ ವಿ.ಹೆಗ್ಗಡೆಯವರಿಗೆ ಸಾಧನಾ ರಾಜ್ಯ ಪ್ರಶಸ್ತಿ ಪ್ರದಾನ

ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಮೂಲಕ ರಾಜ್ಯವ್ಯಾಪಿ ಮಹಿಳಾ ಸಬಲೀಕರಣ ಕಾಯ೯ಕ್ರಮ ರೂಪಿಸಿ ಸಾಧನೆ ಮಾಡಿರುವ
ಮಾತೃಶ್ರೀ ಡಾ. ಹೇಮಾವತಿ ವಿ.ಹೆಗ್ಗಡೆಯವರಿಗೆ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಪ್ರತಿಷ್ಠಿತ ಕೊಡಮಾಡುವ ಪ್ರತಿಷ್ಠಿತ
ಸಾಧನಾ ರಾಜ್ಯ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಮಾ.13 ರಂದು ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಛೇರಿಯ ಸಭಾಂಗಣದಲ್ಲಿ . ಹಿರಿಯ ಸಾಹಿತಿ ಇರಾ ನೇಮು ಪೂಜಾರಿರವರು ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದರು.
ಸಂಘಟಕ, ಉದ್ಯಮಿ ಗುರುಪ್ರಸಾದ್ ಕಡಂಬಾರ್, ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹರೀಶ ಸುಲಾಯ ಒಡ್ಡಂಬೆಟ್ಟು, ತುಲು ಲಿಪಿ ಶಿಕ್ಷಕಿ, ಕವಯತ್ರಿ ಶ್ರೀಮತಿ ಗೀತಾ ಲಕ್ಷ್ಮೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ  ಹಾಗೂ ಸಾಧನಾ ರಾಜ್ಯ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷ ಕಾ.ವೀ. ಕೃಷ್ಣದಾಸ್, ಸಂಚಾಲಕಿ ಶ್ರೀಮತಿ ಲತಾ ಕೃಷ್ಣದಾಸ್, ಕಾರ್ಯದರ್ಶಿ ಶ್ರೀಮತಿ ರಾಜೇಶ್ವರಿ ಮಂಜುನಾಥ್, ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀಮತಿ ಶಕುಂತಲಾ ಬೆಳ್ಮಣ್, ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆ ಹೇಮಾವತಿ ಹೆಗ್ಗಡೆಯವರ ಪುತ್ರಿ ಶ್ರದ್ಧಾ ಅಮಿತ್, ಅಳಿಯ ಎ.ಎಸ್ ಅಮಿತ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅನಿಲ್ ಕುಮಾರ್ ಉಪಸ್ಥಿತರಿದ್ದರು. ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.

Related posts

ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಶಾಲಾ ಮಂತ್ರಿ ಮಂಡಲ ರಚನೆ

Suddi Udaya

ಸುದ್ದಿ ಉದಯ ಫಲಶ್ರುತಿ: ಸೌತಡ್ಕ ಪಾರ್ಕಿಂಗ್ ಸ್ಥಳದಲ್ಲಿ ನೆಟ್ಟ ಗಿಡಗಳ ಬೇಲಿ ತೆರವು ವರದಿ ಬೆನ್ನಲ್ಲೇ ತೆಗೆದಿದ್ದ ಬೇಲಿಗಳ ಅಳವಡಿಕೆ

Suddi Udaya

ಅಳದಂಗಡಿಯ ಡಾ| ಮಮತಾ ಎಚ್ ರವರಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ

Suddi Udaya

ಬೆಳ್ತಂಗಡಿ ಪವರ್ ಆನ್ ಸಂಸ್ಥೆಯಲ್ಲಿ 78ನೇಯ ಸಂಭ್ರಮದ ಸ್ವಾತಂತ್ರ್ಯೋತ್ಸವ: ನಿವೃತ್ತ ಸೈನಿಕರಾದ ಗಣೇಶ್ ಬಿ.ಎಲ್ ಹಾಗೂ ಶಿವ ಕುಮಾರ್ ರವರಿಗೆ ಗೌರವಾರ್ಪಣೆ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜು ಎದುರು ಸ್ಕೂಟಿ ಮತ್ತು ಗೂಡ್ಸ್ ಲಾರಿ ಡಿಕ್ಕಿ

Suddi Udaya

ಮುಂಡಾಜೆ ಕಾಯರ್ತೋಡಿ- ಕಲ್ಲಾರ್ಯ ಸಾರ್ವಜನಿಕ ನಾಗಬನದಲ್ಲಿ ಕ್ಷೀರಾಭಿಷೇಕ, ಮಹಾಪೂಜೆ

Suddi Udaya
error: Content is protected !!