July 23, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಬೆಳ್ತಂಗಡಿ: ರಾಷ್ಟ್ರೀಯ ಮಟ್ಟದ ಸಾಫ್ಟ್‌ಸ್ಕಿಲ್ ಟ್ರೈನರ್ ಡಾ. ಟಿ. ಕೃಷ್ಣಮೂರ್ತಿ ಅವರ ಮಾರ್ಗದರ್ಶನದಲ್ಲಿ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಟಿಒಟಿ ತರಬೇತಿ

ಬೆಳ್ತಂಗಡಿ: ಅನುಗ್ರಹ ಎಜುಕೇಶನ್ ಸೋಷಲ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಶಿಕ್ಷಕರು ಮತ್ತು ಸಿಬ್ಬಂದಿಗಳ ವೃತ್ತಿ ಕೌಶಲ್ಯ ವೃದ್ಧಿಗಾಗಿ ಆಯೋಜಿಸಲಾದ Training Of Trainers (T.O.T) ವಿಶೇಷ ತರಬೇತಿ ಕಾರ್ಯಕ್ರಮವು ಜ.10ರಂದು ಬೆಳ್ತಂಗಡಿ ಅನುಗ್ರಹ ಟ್ರೈನಿಂಗ್ ಕಾಲೇಜಿನಲ್ಲಿ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದ ಕೇಂದ್ರ ಆಕರ್ಷಣೆಯಾಗಿ ಎಸ್ ಡಿ ಎಂ ರೆಸಿಡೆನ್ಷಿಯಲ್ ಪಿಯು ಕಾಲೇಜು, ಉಜಿರೆ ನಿವೃತ್ತ ಪ್ರಿನ್ಸಿಪಲ್ ಮತ್ತು ನ್ಯಾಷನಲ್ ಸಾಫ್ಟ್ ಸ್ಕಿಲ್ ಟ್ರೈನರ್ ಡಾ. ಟಿ. ಕೃಷ್ಣಮೂರ್ತಿ ಅವರು ಶಿಕ್ಷಕರಿಗೆ ಸಮಗ್ರ ಹಾಗೂ ಪ್ರೇರಣಾದಾಯಕ ತರಬೇತಿಯನ್ನು ನೀಡಿದರು. ಶಿಕ್ಷಣ ಕ್ಷೇತ್ರದ ದೀರ್ಘ ಅನುಭವ ಹೊಂದಿರುವ ಡಾ. ಟಿ. ಕೃಷ್ಣಮೂರ್ತಿ ಅವರು ಪರಿಣಾಮಕಾರಿ ಬೋಧನಾ ವಿಧಾನಗಳು, ಸೃಜನಾತ್ಮಕ ಕಲಿಕಾ ಕ್ರಮ, ತರಗತಿ ನಿರ್ವಹಣೆ, ವಿದ್ಯಾರ್ಥಿ–ಮನೋವಿಜ್ಞಾನ, ನಾಯಕತ್ವ ಮತ್ತು ಸಂವಹನ ಕೌಶಲ್ಯ ವಿಷಯಗಳಲ್ಲಿ ಆಳವಾದ practically-oriented ತರಬೇತಿ ನೀಡಿದರು. ಅವರ ಉದಾಹರಣೆಗಳು ಮತ್ತು ಜೀವಂತ ಅನುಭವಗಳು ಶಿಕ್ಷಕರಲ್ಲಿ ಹೊಸ ಚೈತನ್ಯ ಮೂಡಿಸಿದವು.

ಸಮಾರಂಭದಲ್ಲಿ ಸಂಸ್ಥೆಯ ಚೇರ್ಮನ್ ಎಂ. ಜಿ. ತಲ್ಹತ್ ಸವಣಾಲು ಅವರು ಮಾತನಾಡಿ, ಇಂತಹ ಗುಣಮಟ್ಟದ ತರಬೇತಿಗಳು ಸಂಸ್ಥೆಯ ಶೈಕ್ಷಣಿಕ ಪ್ರಮಾಣವನ್ನು ಹೆಚ್ಚಿಸುತ್ತವೆ ಮತ್ತು ಶಿಕ್ಷಕರಲ್ಲಿ ಹೊಸ ದೃಷ್ಟಿಕೋನವನ್ನು ರೂಪಿಸುತ್ತವೆ ಎಂದು ಹೇಳಿದರು.ಸಂಸ್ಥೆಯ ನಿರ್ದೇಶಕ ಅಬ್ದುಲ್ ಖಾದರ್ ನಾವೂರು ಅವರು, ಡಾ. ಟಿ. ಕೃಷ್ಣಮೂರ್ತಿ ಅವರ ತರಬೇತಿ ಶಿಕ್ಷಕರಿಗೆ ಉತ್ತಮ ಪ್ರೇರಣೆಯಾಗಿದ್ದು, ಶಿಸ್ತು ಮತ್ತು ಜವಾಬ್ದಾರಿ ಶಿಕ್ಷಕರ ವ್ಯಕ್ತಿತ್ವದ ಮುಖ್ಯ ಅಂಶಗಳೆಂದು ಒತ್ತಿಹೇಳಿದರು.ಟ್ರಸ್ಟಿನ ಸದಸ್ಯ ಮುಹಮ್ಮದ್ ತೌಸೀಫ್ ಕಕ್ಕಿಂಜೆ ಅವರು ಚಿಕ್ಕ ಸಂದೇಶದಲ್ಲಿ ತಂಡ ನಿರ್ವಹಣೆ ಮತ್ತು ಪರಿಣಾಮಕಾರಿ ಸಂವಹನ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಅನುಗ್ರಹ ಟ್ರೈನಿಂಗ್ ಕಾಲೇಜಿನ ಬೆಳ್ತಂಗಡಿ ಮತ್ತು ಮುಡಿಪು ಸಂಸ್ಥೆಯ ಸಿಬ್ಬಂದಿಗಳು ತರಬೇತಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಫೈರ್ ಅಂಡ್ ಸೇಫ್ಟಿ ವಿಭಾಗದ ಶ್ರೀಮತಿ ಅಂಕಿತ, ಫ್ಯಾಷನ್ ಡಿಸೈನ್ ವಿಭಾಗದ ಶ್ರೀಮತಿ ಅಕ್ಷತಾ, ಶಿಕ್ಷಕಿಯರಾದ ತಸ್ರೀಫಾ ಮತ್ತು ತನ್ಸಿಯಾ, ಬೆಳ್ತಂಗಡಿ ಘಟಕದ ಶ್ರೀಮತಿ ಶ್ರೇಯಾಂಕ, AC ಮತ್ತು ರೆಫ್ರಿಜರೇಟರ್ ಮೆಕ್ಯಾನಿಕ್ ವಿಭಾಗದ ಶ್ರೀ ಉಮೇಶ್ ಮತ್ತು ಮೆಲ್ವಿನ್ ಸುದರ್ಶನ್ ಅವರು ತರಬೇತಿಯನ್ನು ಪೂರ್ಣಗೊಳಿಸಿದರು.ತರಬೇತಿ ನಂತರ Training of Trainers (TOT) ಎಂಬ ಪ್ರಮಾಣ ಪತ್ರವನ್ನು ಸಂಸ್ಥೆ ವತಿಯಿಂದ ವಿತರಿಸಲಾಯಿತು. ಕಾರ್ಯಕ್ರಮ ಯಶಸ್ವಿಯಾಗಲು ಉನೈಸಾ ಮತ್ತು ಅಪ್ನಾಜ್ ಇವರ ಸಹಕಾರ ದೊರೆಯಿತು. ಸಂಸ್ಥೆ ತರಬೇತಿಯಲ್ಲಿ ಪಾಲ್ಗೊಂಡ ಎಲ್ಲಾ ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

Related posts

ರಾಜ್ಯ ಮಟ್ಟದ ಪೊಲೀಸ್‌ ಇಲಾಖಾ ಕ್ರೀಡಾಕೂಟ: ಪೋರ್ಟ್ರೇಟ್ ಪಾರ್ಲೆ ಟೆಸ್ಟ್ ನಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯ ವಿಜಯಕುಮಾ‌ರ್ ರೈ ತೃತೀಯ ಸ್ಥಾನ

Suddi Udaya

ಉಜಿರೆ: ಶ್ರೀ ಧ. ಮಂ. ಪಾಲಿಟೆಕ್ನಿಕ್ ಎನ್ .ಎಸ್. ಎಸ್ ಘಟಕದ ವಾರ್ಷಿಕ ಚಟುವಟಿಕೆಗಳ ಉದ್ಘಾಟನಾ ಸಮಾರಂಭ

Suddi Udaya

ಮುಗೇರಡ್ಕ ಮೂವರು ದೈವಗಳ ದೈವಸ್ಥಾನದ ವಾರ್ಷಿಕ ನೇಮೋತ್ಸವ

Suddi Udaya

ಉರುವಾಲು ಪದವು ಶ್ರೀ ಮಹಮ್ಮಾಯಿ ದೇವಿಯ ವಾರ್ಷಿಕ ಗೊಂದೋಳು ಪೂಜೆ

Suddi Udaya

ಕುಂಟಿನಿ ಸ.ಕಿ.ಪ್ರಾ. ಶಾಲೆಯ ನೂತನ ಅಧ್ಯಕ್ಷರಾಗಿ ಮೊಹಮ್ಮದ್ ಇರ್ಫಾನ್ ಕುಂಟಿನಿ ಪುನರಾಯ್ಕೆ

Suddi Udaya

ಉಜಿರೆ: ಕುಂಟಿನಿ ಮದ್ರಸದಲ್ಲಿ ಸ್ಥಾಪಕ ದಿನಾಚರಣೆ

Suddi Udaya
error: Content is protected !!