26.5 C
ಪುತ್ತೂರು, ಬೆಳ್ತಂಗಡಿ
April 9, 2025
ರಾಜ್ಯ ಸುದ್ದಿ

5ನೇ ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸಲು ‌‌‌‌‌‌ಹೈಕೋರ್ಟ್ ನ ವಿಭಾಗೀಯಪೀಠ ಅನುಮತಿ

  • ಪಠ್ಯಕ್ರಮ ಬಿಟ್ಟು ಬೇರೆ ಪ್ರಶ್ನೆ ಕೇಳವಂತಿಲ್ಲ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ ಕೋರ್ಟು ಸೂಚನೆ

ಬೆಂಗಳೂರು: 5-8 ನೇ ತರಗತಿ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುವುದಕ್ಕೆ ಹೈಕೋರ್ಟ್ ನ ವಿಭಾಗೀಯಪೀಠ ಅನುಮತಿ ನೀಡಿದೆ. 5 ಮತ್ತು 8ನೇ ತರಗತಿ ಬೋರ್ಡ್ ಪರೀಕ್ಷೆ ರದ್ದುಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು.
10 ದಿನಗಳ ಬಳಿಕ ಅಂದರೆ ಮಾ.27 ರಿಂದ ಪರೀಕ್ಷೆ ನಡೆಸಲು ಹೈಕೋರ್ಟ್ ಸೂಚನೆ ನೀಡಿದ್ದು, ಪಠ್ಯಕ್ರಮ ಬಿಟ್ಟು ಬೇರೆ ಪ್ರಶ್ನೆ ಕೇಳವಂತಿಲ್ಲ ಫಲಿತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ. ಶಾಲೆಗೆ ಮಾತ್ರವೇ ಕಳಿಸಬೇಕು ಎಂದು ಹೈಕೋರ್ಟ್‌ ಸೂಚನೆ ನೀಡಿದೆ.

5-8 ನೇ ತರಗತಿ ಪರೀಕ್ಷೆ ನಡೆಸಲು ಶಿಕ್ಷಣ ಕಾಯ್ದೆಯಡಿ ನಿರ್ಬಂಧವಿಲ್ಲ ಆದ್ದರಿಂದ ಪರೀಕ್ಷೆ ರದ್ದುಗೊಳಿಸಿದ್ದ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ರದ್ದುಗೊಳಿಸಿದ್ದು ಪರೀಕ್ಷೆ ನಡೆಸಬಹುದೆಂದು ಆದೇಶ ನೀಡಿದೆ.

Related posts

ಶ್ರೀಲಂಕಾದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದರಿ ಅನುಷ್ಠಾನಕ್ಕೆ ಪೂಣ೯ ಸಹಕಾರ: ಡಾ. ಹೆಗ್ಗಡೆ

Suddi Udaya

ಐಪಿಎಲ್ ಪಂದ್ಯಾಟದಲ್ಲಿ ಹರೀಶ್ ಪೂಂಜರ ಭಾವಚಿತ್ರ ಪ್ರದಶಿ೯ಸಿದ ಅಭಿಮಾನಿಗಳು: ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್

Suddi Udaya

ಸಿದ್ದೇಶ್ವರ ಶ್ರೀ ಗಳ ಅಂತ್ಯಕ್ರಿಯೆಗೆ ಶಾಂತಿಯಿಂದ ಸಹಕರಿಸಿ: ಬೊಮ್ಮಾಯಿ ಮನವಿ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ಸಾಹಿತ್ಯ ಸಮ್ಮೇಳನ: ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ 92ನೇ ಅಧಿವೇಶನ ಉದ್ಘಾಟಿಸಿದ ಶತಾವಧಾನಿ ಡಾ. ರಾ. ಗಣೇಶ್

Suddi Udaya

ಜೈನ ಧರ್ಮದ ಯುಗ ಪ್ರವರ್ತಕ : ಆಚಾರ್ಯಶ್ರೀ ೧೦೮ ಶ್ರೀ ವಿದ್ಯಾಸಾಗರ ಮುನಿ ಮಹಾರಾಜರು ಜಿನೈಕ್ಯ

Suddi Udaya

ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆದ ಕಂಬಳ: ದಿಡುಪೆ ಪರಂಬೇರಿನ ನಾರಾಯಣ ಮಲೆಕುಡಿಯರ ಕೋಣಗಳು, ನೇಗಿಲು ಹಿರಿಯ ವಿಭಾಗದಲ್ಲಿ ಪ್ರಥಮ, ಒಂದು ಲಕ್ಷ ನಗದು, 16 ಗ್ರಾಂ ಚಿನ್ನ ಮತ್ತು ಟ್ರೋಫಿ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ