38.6 C
ಪುತ್ತೂರು, ಬೆಳ್ತಂಗಡಿ
March 6, 2026
ತಾಲೂಕು ಸುದ್ದಿಪ್ರಮುಖ ಸುದ್ದಿಸಾಧಕರು

ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗರು ಶ್ರೀ ಬ್ರಹ್ಮಾನಂದ
ಸರಸ್ವತಿ ಸ್ವಾಮೀಜಿಯವರಿಂದ ಸುದ್ದಿ ಉದಯ ವಾರಪತ್ರಿಕೆ ಬಿಡುಗಡೆ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ನೂತನವಾಗಿ ಆರಂಭಗೊಂಡ ಸುದ್ದಿ ಉದಯ ವಾರ ಪತ್ರಿಕೆಯನ್ನು ಧರ್ಮಸ್ಥಳ ಗ್ರಾಮದ ನಿತ್ಯಾನಂದ ನಗರ ಶ್ರೀರಾಮ ಕ್ಷೇತ್ರದಲ್ಲಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನದ ಪೀಠಾಧೀಶರಾದ ಸದ್ಗರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರು ಮಾ. 21ರಂದು ಬಿಡುಗಡೆಗೊಳಿಸಿದರು.

ನಂತರ ಆಶೀರ್ವಾದಿಸಿದ ಸ್ವಾಮೀಜಿಯವರು ಸುದ್ದಿ “ಉದಯ ಪತ್ರಿಕೆ” ಚೆನ್ನಾಗಿ ಮೂಡಿ ಬಂದಿದೆ. ಪತ್ರಿಕೆಗೆ ತಾಲೂಕಿನ ಓದುಗರ ಪೂರ್ಣಬೆಂಬಲ ಹಾಗೂ ಪ್ರೋತ್ಸಾಹ ದೊರೆಯುತ್ತದೆ. ಪತ್ರಿಕೆಯಲ್ಲಿ ಉತ್ತಮ ವಿಚಾರಗಳು ಪ್ರಕಟಗೊಳ್ಳಬೇಕು. ಈ ಪತ್ರಿಕೆ ಉನ್ನತಿಯನ್ನು ಪಡೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪತ್ರಿಕೆಯ ಪ್ರಧಾನ ಸಂಪಾದಕ ಬಿ.ಎಸ್ ಕುಲಾಲ್, ಮಾಲಕ ತುಕರಾಮ್ ಬಿ., ಸಹ ಸಂಪಾದಕ ಸಂತೋಷ್ ಪಿ. ಕೋಟ್ಯಾನ್, ಕಚೇರಿ ವ್ಯವಸ್ಥಾಪಕ ತಿಮ್ಮಪ್ಪ ಗೌಡ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಆನಂದ ಹೊಸಪಟ್ಣ, ಯುವ ಸಾಹಿತಿ ಚಂದ್ರಹಾಸ ಬಳಂಜ, ಕಚೇರಿ ಸಿಬ್ಬಂದಿ ಭವನೀಸ್ ಉಪಸ್ಥಿತರಿದ್ದರು.

Related posts

ದ್ವಿತೀಯ ಪಿಯುಸಿ ಫಲಿತಾಂಶ: ಎಸ್‌ಡಿಎಂ ಪದವಿಪೂರ್ವ ಕಾಲೇಜಿಗೆ ಶೇ. 99.04% ಫಲಿತಾಂಶ

Suddi Udaya

ಬೆಳ್ತಂಗಡಿಯಲ್ಲಿ ವಿ.ಪ. ಶಾಸಕ ಹರೀಶ್ ಕುಮಾರ್ ರವರಿಂದ ಸರಕಾರದ “ಶಕ್ತಿ”ಯೋಜನೆಗೆ ಚಾಲನೆ

Suddi Udaya

ಬೆಳ್ತಂಗಡಿ ಪಿ. ಎಲ್. ಡಿ ಬ್ಯಾಂಕಿನ ನಿರ್ದೇಶಕ ಲೋಕಯ್ಯ ಗೌಡ ನಿಧನ

Suddi Udaya

ತಣ್ಣೀರುಪಂತ ಗ್ರಾ.ಪಂ.ನಲ್ಲಿ ಮಕ್ಕಳ ಸ್ನೇಹಿ ಅಭಿಯಾನದ ಪೂರ್ವಸಿದ್ಧತಾ ಸಭೆ

Suddi Udaya

ಮೇಲಂತಬೆಟ್ಟು ಶ್ರೀ ನಾಗಬ್ರಹ್ಮ ದೇವಸ್ಥಾನದಲ್ಲಿ ನಾಗಬ್ರಹ್ಮಮಂಡಲೋತ್ಸವ, ಕಾರ್ಯಲಯ ಉದ್ಘಾಟನೆ

Suddi Udaya

ಗ್ಲೋಬಲ್ ಕ್ಯಾಥೋಲಿಕ್ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ ಆಯ್ಕೆಯಾದ ಜೈಸನ್ ಪಟ್ಟೇರಿಲ್ ರವರಿಗೆ ಉಜಿರೆ ಕೆ.ಎಸ್.ಎಂ.ಸಿ.ಎ ಘಟಕದಿಂದ ಅಭಿನಂದನೆ

Suddi Udaya
error: Content is protected !!