25.7 C
ಪುತ್ತೂರು, ಬೆಳ್ತಂಗಡಿ
May 17, 2025
ತಾಲೂಕು ಸುದ್ದಿಪ್ರಮುಖ ಸುದ್ದಿ

ಕಾಕ೯ಳ ಶ್ರೀ ಬಾಹುಬಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ 5ನೇ ಹೊಸ್ಮಾರಿನ ಶಾಖೆ ಉದ್ಘಾಟನೆ

  • ಗ್ರಾಹಕರಿಗೆ ಉತ್ತಮ ಸೇವೆ
    ಸಹಕಾರಿ ಸಂಘಗಳ ಅಭಿವೃದ್ಧಿಗೆ ಪೂರಕ : ಉದ್ಯಮಿ ಪ್ರೇಮ್ ಕುಮಾರ್
  • ಕೆರ್ವಾಶೆ, ಬೈಲೂರು ಸೇರಿದಂತೆ ವಿವಿಧ ಕಡೆ ಶಾಖೆ ತೆರೆಯುವ ಯೋಜನೆ: ನೇಮಿರಾಜ

ಕಾರ್ಕಳ : ಗ್ರಾಹಕರಿಗೆ ಉತ್ತಮ ಸೇವೆ
ನೀಡಿದ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದುತ್ತದೆ. ಸಹಕಾರಿ ಸಂಘಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಹೆಚ್ಚಿನ ಬಡ್ಡಿ ದೊರೆಯುವುದರ ಜತೆಗೆ ಗ್ರಾಹಕರಿಗೆ ಕ್ಷಿಪ್ರ ಸೇವೆ ಲಭ್ಯವಾಗುತ್ತಿದೆ. ಆದುದರಿಂದ ಜನರು ವಾಣಿಜ್ಯ ಬ್ಯಾಂಕ್‌ ಗಳಿಗಿಂತ ಹೆಚ್ಚಾಗಿ ಸಹಕಾರಿ ಸಂಘಗಳನ್ನೇ ಅವಲಂಬಿಸುತ್ತಿದ್ದಾರೆ ಎಂದು ಹೊಸಾರು ಉದ್ಯಮಿ ಪ್ರೇಮ್ ಕುಮಾರ್ ಹೇಳಿದರು.

ದಾನಶಾಲೆ ಮಹಾವೀರ ಕಾಂಪ್ಲೆಕ್ಸ್‌ನಲ್ಲಿ ಕೇಂದ್ರ ಕಚೇರಿಯೊಂದಿಗೆ ಬೆಳ್ತಂಗಡಿ, ಉಜಿರೆ ಮತ್ತು ಬಳಂಜ ಸೇರಿದಂತೆ ಈಗಾಗಲೇ 4 ಶಾಖೆಗಳನ್ನು ಹೊಂದಿರುವ ಶ್ರೀ ಬಾಹುಬಲಿ ಸೌಹಾರ್ದ ಪತ್ತಿನ ಸಹಕಾರಿ ಸಂಘ ನಿಯುತ ಇದರ 5ನೇ ಶಾಖೆಯನ್ನು ಹೊಸ್ಮಾರಿನ ಜಯ ಕಾಂಪ್ಲೆಕ್ಸ್‌ನಲ್ಲಿ ಮಾ. 20ರಂದು ಉದ್ಘಾಟಿಸಿ ಅವರು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ ಸಂಘದ ಅಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಸೌಹಾರ್ದ ಸಹಕಾರಿ ಒಕ್ಕೂಟದ ನಿರ್ದೇಶಕ ನೇಮಿರಾಜ ಆರಿಗ ಅವರು ಮಾತನಾಡಿ, ಗ್ರಾಹಕರ ಸಹಕಾರ ಮತ್ತು ಪ್ರೋತ್ಸಾಹದಿಂದಾಗಿ ಸಂಘದ 5ನೇ ಶಾಖೆ ಇಂದು ಆರಂಭವಾಗಿದೆ. ಮುಂದೆ ಕೆರ್ವಾಶೆ, ಬೈಲೂರು ಸೇರಿದಂತೆ ವಿವಿಧ ಕಡೆ ಶಾಖೆ ತೆರೆಯುವ ಉದ್ದೇಶವಿದೆ. ಶಾಖೆಗಳು ಹೆಚ್ಚಿದಂತೆ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದರು. ಕಾರ್ಕಳ ಕ್ಷೇತ್ರ ಬಿ.ಜೆ.ಪಿ. ಅಧ್ಯಕ್ಷ ಮಹಾವೀರ ಹೆಗ್ಡೆ ಮಾತನಾಡಿ, ಅನಿವಾರ್ಯತೆ ಮತ್ತು ತುರ್ತು ಸಂದರ್ಭದಲ್ಲಿ ವಾಣಿಜ್ಯ ಬ್ಯಾಂಕ್‌ಗಳಿಗಿಂತ ಸಹಕಾರಿ ಬ್ಯಾಂಕ್‌ಗಳೇ ಹೆಚ್ಚಿನ ಉಪಯೋಗಕ್ಕೆ ಬರುತ್ತದೆ ಎಂದರು. ಈದು ಗ್ರಾ.ಪಂ. ಅಧ್ಯಕ್ಷೆ ಜಯಂತಿ ಪೂಜಾರಿ, ನೆಲ್ಲಿಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಜಯವರ್ಮ ಜೈನ್ ಮತ್ತು ಕಟ್ಟಡದ ಮಾಲಕ, ಹೊಸ್ಮಾರು ಜಯ ಕ್ಲಿನಿಕ್‌ನ ಡಾ| ಪ್ರಸಾದ್ ಬಿ. ಶೆಟ್ಟಿ ಅತಿಥಿಗಳಾಗಿ ಭಾಗವಸಿ ಶುಭಹಾರೈಸಿದರು.

ಸಂಘದ ಉಪಾಧ್ಯಕ್ಷ ಶಶಿಕಿರಣ್ ಜೈನ್ ಬೆಳ್ತಂಗಡಿ, ನಿರ್ದೇಶಕರಾದ ನಿರಂಜನ್ ಆದ್ರೆ ನಾರಾವಿ, ಪದ್ಮರಾಜ ಅತಿಕಾರಿ ತೆಳ್ಳಾರು, ಪ್ರವೀಣ್ ಭಟ್ ಕಾರ್ಕಳ, ನಿರಂಜನ್ ಜೈನ್ ಕಾರ್ಕಳ, ಎಸ್‌. ಪಾರ್ಶ್ವನಾಥ ವರ್ಮ ಕಾರ್ಕಳ, ಶಮಂತ್‌ ಕುಮಾರ್ ಜೈನ್‌ ಬೆಳ್ತಂಗಡಿ, ಪ್ರಶಾಂತ್ ಕುಮಾ‌ ಉಜಿರೆ, ಪದ್ಮಲತಾ ಧರ್ಮಸ್ಥಳ, ಭವ್ಯ ಜೈನ್ ಅಳದಂಗಡಿ ಮತ್ತು ಸುಜಾತಾ ಕಾರ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹೊಸ್ಮಾರು ಶಾಖೆಯ ಸಲಹಾ ಸಮಿತಿ ಅಧ್ಯಕ್ಷ ಪ್ರವೀಣ್ ಭಟ್ ಸ್ವಾಗತಿಸಿದರು. ಗಣೇಶ್ ಅಳಿಯೂರು ಕಾರ್ಯಕ್ರಮ ನಿರೂಪಿಸಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶು ಕುಮಾರ್‌ ಜೈನ್‌ ವಂದಿಸಿದರು.

Related posts

ದ್ವಿತೀಯ ಪಿಯುಸಿ ಪರೀಕ್ಷೆ 2 ರ ಫಲಿತಾಂಶ : ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿನಿ ಪ್ರತೀಕ್ಷಾ 596 ಅಂಕಗಳೊಂದಿಗೆ ರಾಜ್ಯಕ್ಕೆ 4 ನೇ ಸ್ಥಾನ, ತಾಲೂಕಿಗೆ ಪ್ರಥಮ

Suddi Udaya

ಮೇ 19: ಅಯೋಧ್ಯೆಯಲ್ಲಿ ಶ್ರೀ ಜಗದ್ಗುರು ಪೀಠದ ಪೀಠಾಧೀಶರಾದ ಮಹಾಮಂಡಲೇಶ್ವರ: 1008 ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜರವರ ಶಾಖಾ ಮಠದ ಭೂಮಿ ಪೂಜೆ

Suddi Udaya

ಗಾಳಿ ಮಳೆ: ದನದ ಕೊಟ್ಟಿಗೆಗೆ ಹಾನಿ

Suddi Udaya

ಯೂಟ್ಯೂಬ್ ಚಾನಲ್ ನ ಸಂದರ್ಶನದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಜೈನ ಧರ್ಮದ ಜನರ ನಿಂದಿಸಿದ ಆರೋಪ : ಬೆಳ್ತಂಗಡಿ ಠಾಣೆಯಲ್ಲಿ ಗಿರೀಶ್ ಮಟ್ಟಣ್ಣವನವರ್ ಮತ್ತು ಶ್ರೀಮತಿ ರಾಧಿಕಾ ಕಾಸರಗೋಡು ಇವರ ಮೇಲೆ ಕೇಸು

Suddi Udaya

ಜು.8 : ಬೆಳ್ತಂಗಡಿ ಸಾಹಿತಿ ಪ.ರಾಮಕೃಷ್ಣ ಶಾಸ್ತ್ರಿ ಅವರಿಗೆ ಅಭಿನಂದನೆ

Suddi Udaya

ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಸನ್ ರೈಸ್ ಡೇ ಹಾಗೂ ಸ್ಕಾಪ್೯ ಡೇ

Suddi Udaya
error: Content is protected !!