37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿ

ಎಸ್. ಎಮ್ .ಎ. ಉಜಿರೆ ರೀಜಿನಲ್ ವತಿಯಿಂದ ರಂಝನ್ ಕಿಟ್ ವಿತರಣೆ

ಬೆಳ್ತಂಗಡಿ; ಸುನ್ನೀ ಮೆನೇಜ್‌ಮೆಂಟ್ ಅಸೋಸಿಯೇಷನ್ (ಎಸ್‌ಎಮ್‌ಎ) ಉಜಿರೆ ರೀಜಿನಲ್ ಸಮಿತಿಯ ವತಿಯಿಂದ19 ಮೊಹಲ್ಲಾಗಳ ಧರ್ಮಗುರುಗಳಿಗೆ ರಂಝಾನ್ ಸ್ಪೆಷಲ್ ಕಿಟ್ ವಿತರಣೆ ಹಾಗೂ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ (ಎಸ್‌ಜೆ‌ಎಮ್) ಉಜಿರೆ ರೇಂಜ್ ಜಲ್ಸತುಲ್ ವಿದಾಅ್ ಕಾರ್ಯಕ್ರಮ ಉಜಿರೆಯಲ್ಲಿ ಜರುಗಿತು.

ಅಧ್ಯಕ್ಷತೆಯನ್ನು ಎಸ್‌ಎಮ್‌ಎ ಉಜಿರೆ ರೀಜಿನಲ್ ಅಧ್ಯಕ್ಷ ಮುಹ್ಯುದ್ದೀನ್ ವಹಿಸಿದ್ದರು. ರೇಂಜ್ ಕೋಶಾಧಿಕಾರಿ ಖಾಲಿದ್‌ ಮುಸ್ಲಿಯಾರ್ ಕುಂಟಿನಿ ಉದ್ಘಾಟಿಸಿದರು. ಎಸ್‌ಎಮ್‌ಎ ಕೋಶಾಧಿಕಾರಿ ಹನೀಫ್ ಮುಸ್ಲಿಯಾರ್ ಶುಭಾಶಯ ಕೋರಿದರು.
ಝೋನ್ ಅಧ್ಯಕ್ಷ ಹಮೀದ್ ನೆಕ್ಕರೆ ಮುಂಡಾಜೆ, ಎಸ್‌ಜೆಎಮ್ ರೇಂಜ್ ಅಧ್ಯಕ್ಷ ಇಬ್ರಾಹಿಂ ಸಖಾಫಿ ಕಬಕ, ಹೈದರ್ ಮದನಿ, ಇಬ್ರಾಹಿಂ ಅತ್ತಾಜೆ‌, ಯೂಸುಫ್ ಕುಂಟಿನಿ ಇವರು ವೇದಿಕೆಯಲ್ಲಿದ್ದರು.

ಉಜಿರೆ ರೀಜಿನಲ್ ವ್ಯಾಪ್ತಿಯ 19 ಮೊಹಲ್ಲಾಗಳ 42 ಮಂದಿಗೆ ಕಿಟ್ ಹಸ್ತಾಂತರಿಸಲಾಯಿತು.
ಎಸ್‌ಎಮ್‌ಎ ರೀಜನಲ್ ಪ್ರಧಾನ ಕಾರ್ಯದರ್ಶಿ
ಅಬ್ದುಲ್ ಜಲೀಲ್ ಸಖಾಫಿ ಸ್ವಾಗತಿಸಿ ಕಾರ್ಯಕ್ರಮ‌ ನಿರೂಪಿಸಿದರು.
ಅಶ್ರಫ್ ಹಿಮಮಿ ಧನ್ಯವಾದವಿತ್ತರು.

Related posts

ನ್ಯಾಯವಾದಿಯಾಗಿ 25 ವರ್ಷ ಪೂರೈಸಿದ ಬಿ.ಕೆ. ಧನಂಜಯ ರಾವ್ ರವರಿಗೆ ಶಿಷ್ಯ ವೃಂದದಿಂದ ಸನ್ಮಾನ

Suddi Udaya

ರೂ. 3ಕೋಟಿ ವೆಚ್ಚದಲ್ಲಿ ನಡ ಗ್ರಾಮದ ಪಡ್ಪು- ಕನ್ಯಾಡಿ- ಭೀಮಂಡೆ ಕಾಂಕ್ರೀಟಿಕರಣಗೊಳಿಸಿದ ರಸ್ತೆಯ ಉದ್ಘಾಟನೆ

Suddi Udaya

ಅಸಂಘಟಿತ ಕಾರ್ಮಿಕ ಘಟಕ ಬೆಳ್ತಂಗಡಿ ನಗರ ಬ್ಲಾಕ್ ಸಮಿತಿಗೆ ನೂತನ ಅಧ್ಯಕ್ಷರಾಗಿ ಅಬ್ದುಲ್ ರಝಾಕ್ ತೆಕ್ಕಾರು ನೇಮಕ

Suddi Udaya

ನಿಡ್ಲೆ , ಬೂಡುಜಾಲು ಗ್ರಾಮಸ್ಥರಿಂದ ರಸ್ತೆ ದುರಸ್ತಿ

Suddi Udaya

ಬೆಳ್ತಂಗಡಿ: ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದಿಂದ ಅಪಘಾತದಲ್ಲಿ ನಿಧನರಾದ ದಿ. ಶೇಖರ ಬಂಗೇರರಿಗೆ ನುಡಿನಮನ

Suddi Udaya

ಕನ್ಯಾಡಿ-1: ನಿವೃತ್ತ ಶಿಕ್ಷಕ ದಿ| ವೆಂಕಪ್ಪ ಗೌಡ ರವರಿಗೆ ನುಡಿನಮನ ಕಾರ್ಯಕ್ರಮ

Suddi Udaya
error: Content is protected !!