38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿ

ಸವಣಾಲು ಶ್ರೀ ಭೈರವ ಕ್ಷೇತ್ರಕ್ಕೆ ನೂತನ ಶಿಲಾಮಯ ಗಭ೯ಗುಡಿಯ ಶಿಲೆಗಳ ಮೆರವಣಿಗೆ

ಸವಣಾಲು : ಶ್ರೀ ಭೈರವ ಮೂಜಿಲ್ನಾಯ ಪುರುಷಾಯ ದೇವಸ್ಥಾನದ ನೂತನ ಶಿಲಾಮಯ ಗಭ೯ಗುಡಿಯ ಶಿಲೆಗಳು ಆಗಮನವಾಗಿದೆ.

ಸವಣಾಲು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಭೈರವ ಕಲ್ಲು ಕ್ಷೇತ್ರದಲ್ಲಿ ಜೀಣೋ೯ದ್ಧಾರಗೊಳ್ಳುತ್ತಿರುವ ಶ್ರೀ ಭೈರವ, ಮೂಜಿಲ್ನಾಯ, ಪುರುಷಾಯ ದೈವಗಳ ನೂತನ ಶಿಲಾಮಯ ದೈಸ್ಥಾನದ ಶಿಲೆಗಳನ್ನು ಕಾಕ೯ಳದಿಂದ ಮಾ.26ರಂದು ಬೆಳಿಗ್ಗೆ ಅಳದಂಗಡಿ ಮುಖ್ಯ ರಸ್ತೆ ಮೂಲಕ ‌ ಸವಣಾಲು ಗ್ರಾಮದ ಗಡಿಭಾಗದಿಂದ ಭೈರವ ಕ್ಷೇತ್ರಕ್ಕೆ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಬರಮಾಡಿ ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೈವಗಳ ಕೃಪೆಗೆ ಪಾತ್ರರಾದರು.ನಂತರ ಮೇ. 22, 23, 24 ರಂದು ಕ್ಷೇತ್ರದಲ್ಲಿ ನಡೆಯುವ ಪ್ರತಿಷ್ಠಾ ಕಲಶೋತ್ಸವದ ಸಮಾಲೋಚನಾ ಸಭೆ ನಡೆಸಲಾಯಿತು.

ಸಭೆಯಲ್ಲಿ ಪ್ರತಿಷ್ಠಾ ಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಬಾಲಕೃಷ್ಣ ವಿ. ಶೆಟ್ಟಿ ಸಾಲಿಗ್ರಾಮ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ರೂಪು ರೇಷೆಗಳನ್ನು ವಿವರಿಸಿ, ಎಲ್ಲಾ ಭಕ್ತರ ಸಹಕಾರವನ್ನು ಕೋರಿ, ಸ್ವಾಗತಿಸಿದರು.

ಸಭೆಯಲ್ಲಿ ಉಪ ಸಮಿತಿಗಳನ್ನು ರಚಿಸಲಾಯಿತು. ಸಭೆಯಲ್ಲಿ ಸಮಿತಿ ಪ್ರಮುಖರಾದ ರಾಮಣ್ಣ ಎಂ.ಕೆ‌ ಜಾಲಡೆ , ಪರಮೇಶ್ವರ್ ಎಂ.ಕೆ ಜಾಲಡೆ, ಚಿನ್ನಯ ಎಂ.ಕೆ, ಕೃಷ್ಣಪ್ಪ ಗೌಡ ‌ದೇವಸ, ಲ|‌ರಘರಾಮ‌ ಗಾಂಭಿರ್ , ವಿಷ್ಟು ಮೂತಿ೯ ಭಟ್, ಪ್ರಭಾಕರ ಆಚಾರ್ಯ, ಲೋಕನಾಥ್ ಶೆಟ್ಟಿ, ಜಾರಪ್ಪ ಎಂ.ಕೆ, ಕೃಷ್ಣಪ್ಪ ಎಂ.ಕೆ, ಬಾಡಡ್ಕ, ವಸಂತ ಪೇಲಿ , ನಾರಾಯಣ ಆಚಾರ್ಯ , ರಾಮಚಂದ್ರ ಭಟ್ ದೆಂತಾಜೆ, ಸಂತೋಷ ಗೌಡ, ಉದಯ ಕುಮಾರ್, ಗೋಪಾಲ ಗೌಡ, ವಸಂತ ಮತ್ತೀತರರು ಉಪಸ್ಥಿತರಿದ್ದರು.ಗಣೇಶ್ ಭಂಡಾರಿ ನಡ್ತಿಕಲ್ಲು ಕಾಯ೯ಕ್ರಮ ನಿರೂಪಿಸಿ, ಧನ್ಯವಾದ ವಿತ್ತರು.

Related posts

ಮೂಡುಕೋಡಿಯಲ್ಲಿ ನಿಧಾನಗತಿಯಲ್ಲಿ ಸಾಗುತ್ತಿರುವ ಮತದಾನ : ಬೆಳಿಗ್ಗೆಯಿಂದ ಸರತಿ ಸಾಲಿನಲ್ಲಿ ಜನವೋ ಜನ

Suddi Udaya

ದ.ಕ. ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಉಜಿರೆ : ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ ಪ್ರಕಟ

Suddi Udaya

ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ‘ಅನ್ವೇಷಣ್’

Suddi Udaya

ನ.14: ಮಡಂತ್ಯಾರು ಪ್ರಾ.ಕೃ.ಪ. ಸಹಕಾರ ಸಂಘ ನೇತೃತ್ವದಲ್ಲಿ ಜಿಲ್ಲಾ ಮಟ್ಟದ 72ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆ

Suddi Udaya

ಹಳೆಕೋಟೆ ವಾಣಿ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಯ ನಿರ್ದೇಶಕರುಗಳ ಅವಿರೋಧ ಆಯ್ಕೆ

Suddi Udaya
error: Content is protected !!