ಸವಣಾಲು : ಶ್ರೀ ಭೈರವ ಮೂಜಿಲ್ನಾಯ ಪುರುಷಾಯ ದೇವಸ್ಥಾನದ ನೂತನ ಶಿಲಾಮಯ ಗಭ೯ಗುಡಿಯ ಶಿಲೆಗಳು ಆಗಮನವಾಗಿದೆ.
ಸವಣಾಲು ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಭೈರವ ಕಲ್ಲು ಕ್ಷೇತ್ರದಲ್ಲಿ ಜೀಣೋ೯ದ್ಧಾರಗೊಳ್ಳುತ್ತಿರುವ ಶ್ರೀ ಭೈರವ, ಮೂಜಿಲ್ನಾಯ, ಪುರುಷಾಯ ದೈವಗಳ ನೂತನ ಶಿಲಾಮಯ ದೈಸ್ಥಾನದ ಶಿಲೆಗಳನ್ನು ಕಾಕ೯ಳದಿಂದ ಮಾ.26ರಂದು ಬೆಳಿಗ್ಗೆ ಅಳದಂಗಡಿ ಮುಖ್ಯ ರಸ್ತೆ ಮೂಲಕ ಸವಣಾಲು ಗ್ರಾಮದ ಗಡಿಭಾಗದಿಂದ ಭೈರವ ಕ್ಷೇತ್ರಕ್ಕೆ ವಿಜೃಂಭಣೆಯಿಂದ ಮೆರವಣಿಗೆ ಮೂಲಕ ಬರಮಾಡಿ ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಎಲ್ಲಾ ಸದ್ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ದೈವಗಳ ಕೃಪೆಗೆ ಪಾತ್ರರಾದರು.ನಂತರ ಮೇ. 22, 23, 24 ರಂದು ಕ್ಷೇತ್ರದಲ್ಲಿ ನಡೆಯುವ ಪ್ರತಿಷ್ಠಾ ಕಲಶೋತ್ಸವದ ಸಮಾಲೋಚನಾ ಸಭೆ ನಡೆಸಲಾಯಿತು.
ಸಭೆಯಲ್ಲಿ ಪ್ರತಿಷ್ಠಾ ಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಬಾಲಕೃಷ್ಣ ವಿ. ಶೆಟ್ಟಿ ಸಾಲಿಗ್ರಾಮ ಇವರು ಪ್ರಾಸ್ತಾವಿಕವಾಗಿ ಮಾತನಾಡಿ, ಕ್ಷೇತ್ರದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ರೂಪು ರೇಷೆಗಳನ್ನು ವಿವರಿಸಿ, ಎಲ್ಲಾ ಭಕ್ತರ ಸಹಕಾರವನ್ನು ಕೋರಿ, ಸ್ವಾಗತಿಸಿದರು.
ಸಭೆಯಲ್ಲಿ ಉಪ ಸಮಿತಿಗಳನ್ನು ರಚಿಸಲಾಯಿತು. ಸಭೆಯಲ್ಲಿ ಸಮಿತಿ ಪ್ರಮುಖರಾದ ರಾಮಣ್ಣ ಎಂ.ಕೆ ಜಾಲಡೆ , ಪರಮೇಶ್ವರ್ ಎಂ.ಕೆ ಜಾಲಡೆ, ಚಿನ್ನಯ ಎಂ.ಕೆ, ಕೃಷ್ಣಪ್ಪ ಗೌಡ ದೇವಸ, ಲ|ರಘರಾಮ ಗಾಂಭಿರ್ , ವಿಷ್ಟು ಮೂತಿ೯ ಭಟ್, ಪ್ರಭಾಕರ ಆಚಾರ್ಯ, ಲೋಕನಾಥ್ ಶೆಟ್ಟಿ, ಜಾರಪ್ಪ ಎಂ.ಕೆ, ಕೃಷ್ಣಪ್ಪ ಎಂ.ಕೆ, ಬಾಡಡ್ಕ, ವಸಂತ ಪೇಲಿ , ನಾರಾಯಣ ಆಚಾರ್ಯ , ರಾಮಚಂದ್ರ ಭಟ್ ದೆಂತಾಜೆ, ಸಂತೋಷ ಗೌಡ, ಉದಯ ಕುಮಾರ್, ಗೋಪಾಲ ಗೌಡ, ವಸಂತ ಮತ್ತೀತರರು ಉಪಸ್ಥಿತರಿದ್ದರು.ಗಣೇಶ್ ಭಂಡಾರಿ ನಡ್ತಿಕಲ್ಲು ಕಾಯ೯ಕ್ರಮ ನಿರೂಪಿಸಿ, ಧನ್ಯವಾದ ವಿತ್ತರು.