April 2, 2025
ಗ್ರಾಮಾಂತರ ಸುದ್ದಿ

ಮದ್ದಡ್ಕ ಮಠದಲ್ಲಿ ಶ್ರೀ ರಾಮೋತ್ಸವ ಆಚರಣೆ:ಆಯೋಧ್ಯೆ ಶ್ರೀರಾಮ ಮಂದಿರ ಹೊಕ್ಕರೆ ದೇಶದ ಸಂಸ್ಕೃತಿಗಳ ಅನಾವರಣ: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಬೆಳ್ತಂಗಡಿ, : ಶತಶತಮಾನಗಳ ಕನಸು ನನಸಾಗುತ್ತಿದೆ. ಇವತ್ತು ರಾಮ ಮಂದಿರದ ‘ಗುಡಿಯ ಕಂಬಗಳು ನಿಂತು, ಗೋಡೆ‌ ಗಳೆಲ್ಲವೂ ಆಗಿವೆ. ತೊಲೆಗಳನ್ನು ಜೋಡಿಸಿ ಶಿಲಾಫಲಕವನ್ನಿಟ್ಟರೆ ಮೊದಲನೇ ‘ಹಂತದ ಕೆಲಸ ಸಮಾಪ್ತವಾಗುತ್ತದೆ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳವರು ನುಡಿದರು.
‌ ಬೆಳ್ತಂಗಡಿ ಮದ್ದಡ್ಕ ಮಠದಲ್ಲಿ ಶ್ರೀ ರಾಮೋತ್ಸವ ಆಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀ ರಾಮಚಂದ್ರನ ಪ್ರತಿಮೆ ನಿರ್ಮಿಸಲು ಆಯ್ದ ಶಿಲೆಗಳನ್ನು ತಂದದ್ದಾಗಿದೆ, ಇವುಗಳಲ್ಲಿ ಶಿಲ್ಪಗಾರರು ಪ್ರತಿಮಾ ನಿರ್ಮಾಣಕ್ಕೆ ಅತ್ಯುತ್ತಮವಾದದು ಯಾವುದನ್ನು ಆಯ್ಕೆ ಮಾಡಿ ಪ್ರತಿಷ್ಠೆ ಮಾಡಲಾಗುತ್ತದೆ.


ಈಗಾಗಲೆ ರಾಮ ಮಂದಿರ ನಿರ್ಮಾಣಕ್ಕಾಗಿ ಮನೆ ಮನೆಗಳಿಂದ ಸಂಗ್ರಹಿಸಿರುವ, ಗ್ರಾಮ ಗ್ರಾಮಗಳಿಂದ ಸಂಗ್ರಹಿಸಿರುವ ಮಣ್ಣನ್ನು ರಾಮಮಂದಿರದ ತಳಪಾಯಕ್ಕೆ ಬಳಸಲಾಗಿದೆ. ಮುಂದಿನ ವರ್ಷ ಪ್ರಾಣ ಪ್ರತಿಷ್ಠಾ ಕಾಲದಲ್ಲಿ, ಬ್ರಹ್ಮಕಲಶೋತ್ಸವದಲ್ಲಿ ನಾಡಿನಾದ್ಯಂತ ‘ಭಕ್ತರು ಬರುವ ನಿರೀಕ್ಷೆಯಿದೆ. ‘ಭಕ್ತರಿಗೆ ಪ್ರಾಥಮಿಕ ಸೌಲ‘ಭ್ಯಗಳನ್ನು ನೀಡಲು 25 ಸಾವಿರ ಮಂದಿಗೆ ಅನುಕೂಲವಾಗುವಂತೆ ಅಗತ್ಯತೆ ಪೂರೈಸಲು ಟ್ರಸ್ಟ್ ಸಿದ್ಧತೆ ಕೈಗೊಂಡಿದೆ. ಒಮ್ಮೆ ಆಯೋಧ್ಯೆ‘ಗೆ ಹೊಕ್ಕರೆ ದೇಶದ ಸಂಸ್ಕೃತಿಗಳ ಅನಾವರಣವಾಗಬೇಕು ಎಂಬ ಆಶಯವಿದೆ ಎಂದರು.
ರಾಮಮಂದಿರ ಶತಶತಮಾನದ ಪೀಳಿಗೆಗೆ ಲಭಿಸುವ ಸಲುವಾಗಿ ಭವ್ಯ ಮಂದಿರ ಸ್ಥಾಪನೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲಾಗುತ್ತಿದೆ. ಮಂದಿರದ ಕನಸ್ಸು ನನಸಾಗುತ್ತಿದೆ, ಅದೇ ರೀತಿ ಪ್ರತಿ ಮನೆಯಲ್ಲಿ ಮಕ್ಕಳಿಗೆ ಸನಾತನ ‘ಧರ್ಮದ ಶಿಕ್ಷಣ ನೀಡಬೇಕು. ಎಲ್ಲರಿಗೂ ಶ್ರೀರಾಮನ ಅನುಗ್ರಹ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇವೆ ಎಂದರು.

Related posts

ಉಜಿರೆ ರುಡ್‌ಸೆಟ್ ಸಂಸ್ಥೆಯ 2023-24 ನೇ ಸಾಲಿನ ವಾರ್ಷಿಕ ವರದಿ ಬಿಡುಗಡೆ

Suddi Udaya

ಡಿ.30 : ರೆಖ್ಯ ವಿಶ್ವ ಹಿಂದೂ ಪರಿಷತ್, ಬಜರಂಗದಳ ಘಟಕದ ನೇತೃತ್ವದಲ್ಲಿ 3ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

Suddi Udaya

ಗುರಿಪಳ್ಳ ಶಾಲೆಯಲ್ಲಿ ಪೋಷಕರಿಗೆ ವಿಶೇಷ ಮಾಹಿತಿ ಶಿಬಿರ

Suddi Udaya

ನೆರಿಯ: ಗಂಡಿಬಾಗಿಲು ಸಂತ ತೋಮಸರ ಸಭಾಭವನದಲ್ಲಿ ಉಚಿತ ಫೂಟ್ ಫಲ್ಸ್ ಥೆರಪಿ

Suddi Udaya

ಮಾಣೂರು ಸಪರಿವಾರ ಶ್ರೀ ಶಾಸ್ತರ ದೇವಸ್ಥಾನ ನೂತನ ದೇವಾಲಯದ ಶಿಲಾನ್ಯಾಸ

Suddi Udaya
error: Content is protected !!