ಸುಯ೯ : ಮಣ್ಣಿನ ಹರಕೆ ಖ್ಯಾತಿಯ ನಡ ಗ್ರಾಮದ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಜಾತ್ರೋತ್ಸವದ ಧ್ವಜಾರೋಹಣ ಮಾ.31 ರಂದು ನೆರವೇರುವುದು
ರೊಂದಿಗೆ ಕಾಯ೯ಕ್ರಮಗಳು ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಂಡಿತು.
ಮಾ.30ರಂದು ಪುಣ್ಯಾಹ,ಗಣಪತಿ ಹೋಮ,ಕಲಶ ಪೂಜೆ ಕಲಶಾಭಿಷೇಕ,ಮಹಾಪೂಜೆ,ಪ್ರಸಾದ ವಿತರಣೆ,ರಾತ್ರಿ ರಂಗ ಪೂಜೆ,ಉತ್ಸವ ಇತ್ಯಾದಿ ಕಾರ್ಯಕ್ರಮಗಳು ನಡೆಯಿತು. ಮಾ.31 ರಂದು ಗಣಪತಿ ಹೋಮ ನವಕ ಪ್ರಧಾನ ಕಲಶಾಭಿಷೇಕ, ಧ್ವಜಾರೋಹಣ, ನಿತ್ಯ ಬಲಿ ಜರುಗಿತು.
ಏ.1ರಂದು ಮಹಾಪೂಜೆ ನಿತ್ಯ ಬಲಿ ಸಂಜೆ 6 ಗಂಟೆಯಿಂದ ಸುರ್ಯಗುತ್ತು ಮನೆಯಿಂದ ದೈವಗಳ ಭಂಡಾರ ಆಗಮನ, ರಾತ್ರಿ ವಸಂತ ಕಟ್ಟೆ ಪೂಜೆ, ಏ.2ರಂದು ಸೋಡರಬಲಿ, ಮಹಾಪೂಜೆ, ರಾತ್ರಿ ಕೆರೆಕಟ್ಟೆ ಪೂಜೆ, ಮಾ.3ರಂದು ಬೆಳಿಗ್ಗೆ 8.45 ಕ್ಕೆ ದರ್ಶನ ಬಲಿ ಉತ್ಸವ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ರಾತ್ರಿ ಗಂಟೆ 8 ರಿಂದ ಉತ್ಸವ, ಪುಷ್ಪ ರಥೋತ್ಸವ,ನೃತ್ಯ ಬಲಿ, ಉತ್ಸವ,ಮಹಾಪೂಜೆ, ಭೂತಬಲಿ, ಶಯನೋತ್ಸವ, ಮಾ.4ರಂದು ಬೆಳಿಗ್ಗೆ ಕವಾಟೋದ್ಘಾಟನೆ, ಕಲಶಾಭಿಷೇಕ, ಮಹಾಪೂಜೆ,ಪ್ರಸಾದ ವಿತರಣೆ,ಸಂಜೆ 6 ಗಂಟೆಯಿಂದ ಯಾತ್ರಾ ಹೋಮ,ಅವಭೃತ ಸ್ನಾನಕ್ಕೆ ಹೊರಡುವುದು, ರಾತ್ರಿ 10.30 ಕ್ಕೆ ಧ್ವಜಾವರೋಹಣ, ಬಳಿಕ ದೈವಗಳಿಗೆ ನೇಮ ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಏ.1ರಂದು ರಾತ್ರಿ 9ಗಂಟೆಯಿಂದ ಎಸ್ ಡಿ ಎಂ ಶಿಕ್ಷಣ ಸಂಸ್ಥೆ ಉಜಿರೆ ಇಲ್ಲಿಯ ವಿದ್ಯಾರ್ಥಿಗಳಿಂದ ಎಸ್ ಡಿ ಎಂ ಕಲಾವೈಭವ,ಏ.2ರಂದು ರಾತ್ರಿ 9:30 ರಿಂದ ದೇವದಾಸ್ ಕಾಪಿಕಾಡ್ ತಂಡದ ತುಳು ಹಾಸ್ಯ ನಾಟಕ ನಾಯಿದಬೀಲ, ಏ.3 ರಂದು ರಾತ್ರಿ 9ಗಂಟೆಯಿಂದ ಸುರ್ಯ ಅಂಗನವಾಡಿ ಕೇಂದ್ರ ಹಾಗೂ ಸಕಿಪ್ರಾ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 10 ಗಂಟೆಗೆ ಉಜಿರೆಯ ಸಂಗಮ ಕಲಾವಿದರಿಂದ ಗಿರೀಶ್ ಸುಳ್ಯ ನಿರ್ದೇಶನದ ಕಂಡನಿ ಬುಡೆದಿ ಹಾಸ್ಯಮಯ ಸಾಂಸಾರಿಕ ನಾಟಕ ನಡೆಯಲಿದೆ ಎಂದು ಧಮ೯ದಶಿ೯ ಸುಭಾಶ್ಚಂದ್ರ ಸುಯ೯ಗುತ್ತು ತಿಳಿಸಿದ್ದಾರೆ.