25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿ

ಬೆಳಾಲು: ಕೊಯ್ಯೂರು ಅರಣ್ಯದಲ್ಲಿ ಬೆಂಕಿ

ಬೆಳಾಲು ಗ್ರಾಮದ ಕೊಯ್ಯೂರು ಅರಣ್ಯದ ಪೆರಿಯಡ್ಕ ಪ್ರದೇಶದಲ್ಲಿ ಭಾನುವಾರ ಬೆಂಕಿ ಪ್ರಕರಣ ಉಂಟಾಗಿದ್ದು ಸುಮಾರು ಎರಡು ಎಕರೆ ಪ್ರದೇಶದ ವನ್ಯ ಸಂಪತ್ತಿಗೆ ಹಾನಿ ಉಂಟಾಗಿದೆ.
ಅರಣ್ಯ ಇಲಾಖೆಯ ಉಪ್ಪಿನಂಗಡಿ ವಲಯದ ಕಣಿಯೂರು ಉಪವಲಯ ವ್ಯಾಪ್ತಿಯ ಈ ಕಾಡಿನಲ್ಲಿ ಯಾವ ಕಾರಣದಿಂದ ಬೆಂಕಿ ಉಂಟಾಗಿದೆ ಎಂದು ತಿಳಿದುಬಂದಿಲ್ಲ.


ಡಿ ಆರ್ ಎಫ್ ಒ ಲೋಕೇಶ್ ,ಗಸ್ತು ಅರಣ್ಯ ಪಾಲಕ ವಿನಯ ಚಂದ್ರ, ಶೌರ್ಯ ವಿಪತ್ತು ತಂಡಗಳ ಸದಸ್ಯರು, ಅಗ್ನಿಶಾಮಕ ದಳ ಹಾಗೂ ಸ್ಥಳೀಯರು ಬೆಂಕಿಯನ್ನು ಹತೋಟಿಗೆ ತಂದರು.
ಮುಂಡಾಜೆ-ಧರ್ಮಸ್ಥಳ ಅರಣ್ಯದ ಅಲ್ಲಲ್ಲಿ ಬೆಂಕಿ.
ಮುಂಡಾಜೆ-ಧರ್ಮಸ್ಥಳ ಮೀಸಲು ಅರಣ್ಯದ ನೇರ್ತನೆ, ಎಕ್ಕೆಲ, ಕೋಟಿ ಹಿತ್ತಿಲು ಮೊದಲಾದ ಪ್ರದೇಶಗಳಲ್ಲಿ ಅರಣ್ಯದಲ್ಲಿ ಬೆಂಕಿ ಉಂಟಾಗಿದ್ದು ಅದು ಒಂದಿಷ್ಟು ಹತೋಟಿಗೆ ಬರುತ್ತಿದ್ದಂತೆ ಮುಂಡ್ರುಪಾಡಿ, ಫಿಲತಡ್ಕ ಮೊದಲಾದ ಪ್ರದೇಶಗಳಲ್ಲಿ ಬೆಂಕಿ ಹರಡುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯ ಅನೇಕ ಮಂದಿ ಸೇರಿ ಬೆಂಕಿಯನ್ನು ಹತೋಟಿಗೆ ತರಲು ಪ್ರಯತ್ನ ನಡೆಸುತ್ತಿದ್ದಾರೆ.ಬೆಂಕಿ ಒಂದೆಡೆ ಹತೋಟಿಗೆ ಬರುತ್ತಿದ್ದಂತೆ ಇನ್ನೊಂದೆಡೆಯಿಂದ ಆವರಿಸುತ್ತಿದೆ. ಭಾರಿ ಬಿಸಿಲಿನ ವಾತಾವರಣ ಕಾರ್ಯಾಚರಣೆಗೆ ಅಡ್ಡಿ ನೀಡುತ್ತಿದೆ.
ಬೆಂಕಿಗೆ ಕಾರಣ.


ಕಾಡಿನಿಂದ ಕಟ್ಟಿಗೆ, ತರಗೆಲೆ ಇತ್ಯಾದಿ ಸಂಗ್ರಹಿಸಲು ಹೋಗುವ ಮಂದಿ ಒಣ ಹುಲ್ಲಿಗೆ ಬೆಂಕಿ ಹಚ್ಚುವುದರಿಂದ ಬೆಂಕಿ ಪ್ರಕರಣಗಳು ಉಂಟಾಗುತ್ತಿವೆ ಎಂಬ ಕೆ ವ್ಯಕ್ತವಾಗಿದೆ. ಕಾಡುಪ್ರಾಣಿಗಳನ್ನು ಓಡಿಸಲು ಅರಣ್ಯ ಪ್ರದೇಶಗಳಿಗೆ ಬೆಂಕಿ ಹಚ್ಚುವವರು ಇದ್ದಾರೆ. ಇದೀಗ ಕಾಡು ಜೇನು ಸಂಗ್ರಹದ ಸಮಯವಾಗಿದ್ದು ಜೇನು ನೊಣಗಳನ್ನು ಓಡಿಸಲು ಹೊಗೆ ಹಾಕಿ ಬಳಿಕ ಬೆಂಕಿಯನ್ನು ಆರಿಸದೆ ವಾಪಸ್ ಆಗುವವರು ಇದ್ದಾರೆ ಇವರೆಲ್ಲರ ಜತೆ ಕಿಡಿಗೇಡಿಗಳು ಕೆಲವೊಂದು ಪ್ರಕರಣಗಳಿಗೆ ಕಾರಣವಾಗುತ್ತಿದ್ದಾರೆ.

Related posts

ಮಡಂತ್ಯಾರು ಗ್ರಾ.ಪಂ. ನಲ್ಲಿ ಸಂವಿಧಾನ ಜಾಗೃತಿ ಜಾಥಾ

Suddi Udaya

ನಿಡ್ಲೆ ಗ್ರಾ.ಪಂ. ಮಾಜಿ ಸದಸ್ಯ ಚಂದ್ರಶೇಖರ್ ನಿಧನ

Suddi Udaya

ನಡ: ಮಳೆಯಿಂದ ಹಾನಿಗೊಳಗಾದ ಸ್ಥಳಕ್ಕೆ ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಭೇಟಿ

Suddi Udaya

ಉಜಿರೆ ಗ್ರಾಮ ಪಂಚಾಯತಿಯಲ್ಲಿ ನರೇಗಾ ಯೋಜನೆಯ ಮಾಹಿತಿ ಕಾರ್ಯಗಾರ

Suddi Udaya

ಉಜಿರೆ ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷರಾಗಿ ವನಿತಾ ವಿ.ಶೆಟ್ಟಿ, ಕಾರ್ಯದರ್ಶಿಯಾಗಿ ಸುದೇಶ್ ಶೆಟ್ಟಿ ಆಯ್ಕೆ

Suddi Udaya

ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಮತ್ತು ಗ್ರಾಮೀಣ ಸಮಿತಿಯ ವತಿಯಿಂದ ಖಂಡನೆ

Suddi Udaya
error: Content is protected !!