24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿ

ಮುಂಡಾಜೆಯ ದುಂಬೆಟ್ಟು ಪ್ರದೇಶದಲ್ಲಿ ಚಿರತೆ ಹಾವಳಿ

ಮುಂಡಾಜೆ : ಮುಂಡಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದುಂಬೆಟ್ಟು ಪರಿಸರದಲ್ಲಿ  ಮತ್ತೆ ಚಿರತೆ ಹಾವಳಿ ಕಂಡುಬಂದಿದೆ. ಕಳೆದ ಒಂದು ವಾರದಿಂದ ಪರಿಸರದ ಸುಮಾರು ಐದು ನಾಯಿಗಳು ಚಿರತೆಗೆ ಬಲಿಯಾಗಿರುವ ಕುರಿತು ಸ್ಥಳೀಯರು ಶಂಕೆ ವ್ಯಕ್ತಪಡಿಸಿದ್ದಾರೆ. .
ಚಾರ್ಮಾಡಿ-ಕನಪಾಡಿ ರಕ್ಷಿತಾರಣ್ಯದ ಸಮೀಪ ಇರುವ ದುಂಬೆಟ್ಟಿನ ಚಾಮುಂಡಿನಗರ, ಪಣಿಕಲ್ಲು, ಕಜೆ ಮೊದಲಾದ ಪರಿಸರದಲ್ಲಿ ಸಂಚರಿಸುತ್ತಿರುವ ಚಿರತೆಗೆ ಸುಧಾಕರ ಗೌಡ, ಜಯಾನಂದ ಪಣಿಕಲ್ಲು, ಈಶ್ವರ, ವಿಶ್ವನಾಥ ಗೌಡ ಮೊದಲಾದವರ ಸಾಕುನಾಯಿಗಳು ಕಾಣೆಯಾಗಿದ್ದು ಚಿರತೆಗೆ ಬಲಿಯಾಗಿರುವ ಅನುಮಾನವಿದೆ . 
ಕಳೆದ ಎರಡು ದಿನಗಳ ಹಿಂದೆ ಸ್ಥಳೀಯ ವಿಜಯಾ ಎಂಬವರು ಬೆಳಗಿನ ಹೊತ್ತು ತರಗೆಲೆ ಸಂಗ್ರಹಿಸಲು ಕಾಡಿನತ್ತ ತೆರಳುತ್ತಿದ್ದಾಗ ಚಿರತೆಯನ್ನು ಹತ್ತಿರದಿಂದ ಕಂಡಿರುವುದಾಗಿ ತಿಳಿಸಿದ್ದಾರೆ.

ಕಳೆದ ವರ್ಷ ಹುಲಿಗಣತಿ ಅಂಗವಾಗಿ ನಡೆದ ಕ್ಯಾಮರಾ ಟ್ರಾಪಿಂಗ್ ವೇಳೆ  ಸಮೀಪದ ಚಿಬಿದ್ರೆ ಅರಣ್ಯದಲ್ಲಿ ಚಿರತೆ ಸಂಚರಿಸಿದ  ಕುರುಹು   ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಒಂದೆರಡು ಬಾರಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರಿಗೂ ಚಿರತೆ ಎದುರಾಗಿತ್ತು.

ಸ್ಥಳೀಯರಲ್ಲಿ ಆತಂಕ.
ದುಂಬೆಟ್ಟು ಹಾ ಸಮೀಪದ ಪ್ರದೇಶಗಳಲ್ಲಿ ಸಾಕಷ್ಟು ಸಂಖ್ಯೆಯ ಹೈನುಗಾರರು ಇದ್ದಾರೆ. ಇವರೆಲ್ಲರೂ ಜಾನುವಾರುಗಳನ್ನು ಕೊಟ್ಟಿಗೆಗಳಲ್ಲಿ ಕಟ್ಟಿ  ಸಾಕುತ್ತಿದ್ದಾರೆ.  ಕಾಡಿನ ದಾರಿಯ  ಮೂಲಕ ಹಾಲು ಉತ್ಪಾದಕರ ಸಂಘಗಳಿಗೆ ಹಾಲನ್ನು ನೀಡಲು  ಮಕ್ಕಳು, ಮಹಿಳೆಯರು ಸಂಚರಿಸುತ್ತಾರೆ. ಶಾಲಾ ವಿದ್ಯಾರ್ಥಿಗಳು ಇದೇ ದಾರಿಯಾಗಿ  ಸಂಚರಿಸಬೇಕಾಗಿದೆ. ಚಿರತೆ ಹಾವಳಿಯಿಂದ ಪ್ರದೇಶದ ಜನರಲ್ಲಿ ಆತಂಕ ಉಂಟಾಗಿದ್ದು ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ದೂರು ಸಲ್ಲಿಸಲು ಮುಂದಾಗಿದ್ದಾರೆ.

Related posts

ನಡ: ಗೌಡರ ಯಾನೆ ಒಕ್ಕಲಿಗರ ಸಂಘದ ಅಧ್ಯಕ್ಷರಾಗಿ ಶ್ಯಾಮಸುಂದರ ಗೌಡ ಆಯ್ಕೆ

Suddi Udaya

ಕನ್ಯಾಡಿ: ಎಸ್.ಎಸ್.ಎಲ್.ಸಿ ಯಲ್ಲಿ ಅತ್ಯುತ್ತಮ ಅಂಕ ಪಡೆದ ಯಕ್ಷಿತಾರಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಸನ್ಮಾನ

Suddi Udaya

ಶ್ರೀ ಕ್ಷೇತ್ರ ಶಾಂತಿವನ ಟ್ರಸ್ಟ್ ಮತ್ತು ಉಜಿರೆ ಶ್ರೀ ಧ.ಮಂ. ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯ ಆಶ್ರಯದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ| ಪ್ರಶಾಂತ್ ಶೆಟ್ಟಿ ರವರಿಗೆ ಅಭಿನಂದನೆ

Suddi Udaya

ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ

Suddi Udaya

ಬಾರ್ಯ: ಸರಳಿಕಟ್ಟೆ ಮೆಗಿನ ಪುಯಿಲದಲ್ಲಿ ತುಂಡಾಗಿ ಬೀಳುತ್ತಿರುವ ವಿದ್ಯುತ್ ತಂತಿಗಳು: ಅನಾಹುತ ಸಂಭವಿಸುವ ಮುನ್ನ ದುರಸ್ತಿಗೊಳಿಸುವಂತೆ ಸ್ಥಳೀಯರ ಒತ್ತಾಯ

Suddi Udaya

ಧರ್ಮಸ್ಥಳ ಗ್ರಾ.ಪಂ. ವ್ಯಾಪ್ತಿಯಲ್ಲಿ ಗಿಡ ನೆಡುವ ಕಾರ್ಯಕ್ರಮ

Suddi Udaya
error: Content is protected !!