April 2, 2025
ಗ್ರಾಮಾಂತರ ಸುದ್ದಿಬೆಳ್ತಂಗಡಿ

ಲಾಯಿಲ ದೊಂಪದ ಬಲಿ ಉತ್ಸವ

ಲಾಯಿಲ: ಲಾಯಿಲಗುತ್ತು ಶ್ರೀ ಕೊಡಮಣಿತ್ತಾಯ ಮತ್ತು ಕಲ್ಕುಡ ಕಲ್ಲುರ್ಟಿ ದೈವಗಳಿಗೆ ದೊಂಪದ ಬಲಿ ಉತ್ಸವವು ಎ.2 ರಂದು ಲಾಯಿಲ ಗುತ್ತು ಅಜೆಕಾರು ಸ್ಥಾನದಲ್ಲಿ ನಡೆಯಿತು.

ಸಂಜೆ ಲಾಯಿಲಗುತ್ತಿನಿಂದ ಶ್ರೀ ಕೊಡಮಣಿತ್ತಾಯ ಕಲ್ಕುಡ, ಕಲ್ಲುರ್ಟಿ ದೈವಗಳ ಭಂಡಾರ ಹೊರಟು ರಾತ್ರಿ ಅನ್ನಸಂತರ್ಪಣೆ ನಡೆಯಿತು. ನಂತರ ಲಾಯಿಲಗುತ್ತು ಶ್ರೀ ಕೊಡಮಣಿತ್ತಾಯ ಮತ್ತು ಕಲ್ಕುಡ ಕಲ್ಲುರ್ಟಿ ದೈವಗಳಿಗೆ ದೊಂಪದ ಬಲಿ ಉತ್ಸವ ಜರುಗಿತು.
ಶಾಸಕ ಹರೀಶ್ ಪೂಂಜ ಬೇಟಿ ನೀಡಿ ದೈವಗಳ ಆರ್ಶೀವಾದ ಪಡೆದರು.

ಈ ಸಂದರ್ಭದಲ್ಲಿ ಲಾಯಿಲಗುತ್ತು ಚಿತ್ತರಂಜನ್ ಹೆಗ್ಡೆ, ಮಹಾವೀರ ಅಜ್ರಿ., ಲಾಯಿಲ ಗ್ರಾ.ಪಂ. ಉಪಾಧ್ಯಕ್ಷ ಗಣೇಶ್, ಸದಸ್ಯರಾದ ಅರವಿಂದ, ಪ್ರಸದ್ ಶೆಟ್ಟಿ ಮತ್ತು ಪಂಚಾಯತ್ ಸದಸ್ಯರು, ಉಪಾಧ್ಯಕ್ಷ ಗೀರೀಶ್ ಡೊಂಗ್ರೇ. ಯೋಗೀಶ್ ಬಿಢೆ ಹಾಗೂ ಊರ ಹಾಗೂ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Related posts

ಪೆರ್ಲ -ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವರ ಪ್ರತಿಷ್ಠಾಷ್ಟಬಂಧ ಬಹ್ಮಕಲಶೋತ್ಸವ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 25 ಕ್ವಿಂಟಾಲ್ ಅಕ್ಕಿ ಹೊರೆಕಾಣಿಕೆ ಸಮರ್ಪಣೆ

Suddi Udaya

ಕಾಜೂರು ದರ್ಗಾಕ್ಕೆ ಭೇಟಿ ನೀಡಿದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್.

Suddi Udaya

ಕಡಿರುದ್ಯಾವರ ಜೋಡು ನೆರೋಳು ಮಥಾಯಿ ಪಣಕಾಟು ಪರಂಬಿಲಿ ನಿಧನ

Suddi Udaya

ಧರ್ಮಸ್ಥಳ “ರಂಗಶಿವ”ಬಳಗದಿಂದ ಮಕ್ಕಳ ರಂಗ ಶಿಬಿರ “ನಲಿಯೋಣ ಬಾ- 2023”

Suddi Udaya

ಹಳ್ಳಿಂಗೇರಿ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ವಾರ್ಷಿಕ ಸಾಮಾನ್ಯ ಸಭೆ: ರೂ. 2. 43 ಲಕ್ಷ ನಿವ್ವಳ ಲಾಭ.

Suddi Udaya

ಸೌಜನ್ಯ ಕೊಲೆ ಪ್ರಕರಣ ಮರು ತನಿಖೆ ನಡೆಸುವಂತೆ: ಮಲವಂತಿಗೆ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘ ಗ್ರಾಮ ಸಮಿತಿಯಿಂದ ಮುಖ್ಯಮಂತ್ರಿಗೆ ಸಿದ್ಧರಾಮಯ್ಯರಿಗೆ ಮನವಿ

Suddi Udaya
error: Content is protected !!