28.6 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿ

ಸ್ಪಂದನಾ ಸೇವಾ ಸಂಘದಿಂದ ವೈದ್ಯಕೀಯ ನೆರವು

ನಿಡ್ಲೆ : ನಿಡ್ಲೆ ಗ್ರಾಮದ ಬರಂಗಾಯ ಮಜಲ್ ಮಾರು ನಿವಾಸಿ ಸಂಜೀವ ಗೌಡ ಇವರ ಪುತ್ರಿ ಕುಮಾರಿ ದೀಪಿಕಾ ಇವರಿಗೆ ಅಸ್ತಿಮಜ್ಜೆ ಶಸ್ತ್ರಚಿಕಿತ್ಸಾ ಸಹಾಯಾರ್ಥವಾಗಿ ಸ್ಪಂದನಾ ಸೇವಾ ಸಂಘದಿಂದ ರೂ. 25 ಸಾವಿರ ಮತ್ತು ನಿಡ್ಲೆ ಗ್ರಾಮದ ನೆಡಿಲು, ಗಾಣಂತಿ, ನೂಜಿಲ ಬೈಲುವಾರು ಸಮಿತಿ ವತಿಯಿಂದ ಸಂಗ್ರಹವಾದ ರೂ 5,000 ವನ್ನು ಒಟ್ಟು ಸೇರಿಸಿ ಒಟ್ಟು ರೂ.30 ಸಾವಿರದ ಚೆಕ್ಕನ್ನು ಸೀತಾರಾಮ ಗೌಡ ಸೌರಭ ಬೆಳಾಲು ಇವರ ಮೂಲಕ ಫಲಾನುಭವಿಗೆ ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ವಾಣಿ ಸೌಹಾರ್ದ ಕೋ-ಅಪರೇಟೀವ್ ಸೊಸೈಟಿ ನಿರ್ದೇಶಕರಾದ ಸುರೇಶ್ ಕೌಡಂಗೆ, ಸ್ಪಂದನಾ ಸೇವಾ ಸಂಘದ ಸಂಚಾಲಕರಾದ ಮೋಹನ್ ಗೌಡ ಕೊಯ್ಯೂರು, ವಾಣಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರುಗಳಾದ ಮಹಾಬಲ ಗೌಡ ಮತ್ತು ಶ್ರೀಮತಿ ಮೀನಾಕ್ಷಿ, ತಾಲೂಕು ಯುವ ವೇದಿಕೆಯ ನಿರ್ದೇಶಕರಾದ ನಿತಿನ್ ಗೌಡ ಕಲ್ಮಂಜ, ನಿಡ್ಲೆ ಗ್ರಾಮ ಸಮಿತಿಯ ಯುವ ವೇದಿಕೆಯ ಕಾರ್ಯದರ್ಶಿ ರಾಜೇಂದ್ರ ಗೌಡ ನಿಡ್ಲೆ, ಮಂಜು ನಿಡ್ಲೆ, ಲೋಕೇಶ್ ಅಣಿಯೂರು ಮೊದಲಾದವರು ಉಪಸ್ಥಿತರಿದ್ದರು.

Related posts

ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಉಜಿರೆ ಮುಂಡತ್ತೋಡಿ ಶ್ರೀ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಚಾವಡಿಯಲ್ಲಿ ಶ್ರಮದಾನ

Suddi Udaya

ಡಿ.ಕೆ.ಆರ್.ಡಿ.ಎಸ್ ಬೆಳ್ತಂಗಡಿ ನೇತೃತ್ವದಲ್ಲಿ ಕ್ಯಾನ್ಸರ್ ಜನಜಾಗೃತಿ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya

ಖೋ ಖೋ ಪಂದ್ಯಾಟ: ವೇಣೂರು ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ದಾನ

Suddi Udaya

ಮಡಂತ್ಯಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಸಹಕಾರಿ ಅಭ್ಯರ್ಥಿಗಳ ಜಯ; ಹಗಲಿರುಳು ದುಡಿದ ಕಾರ್ಯಕರ್ತರಿಗೆ ಅಭಿನಂದನಾ ಕಾರ್ಯಕ್ರಮ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಚಲನಚಿತ್ರ ನಟ ರಕ್ಷಿತ್ ಶೆಟ್ಟಿ ಭೇಟಿ

Suddi Udaya

ಶ್ರೀ ಕ್ಷೇತ್ರ ಧ.ಗ್ರಾ. ಯೋಜನೆಯಿಂದ ಇಲOತಿಲ ಕಾರ್ಯಕ್ಷೇತ್ರದ ಜ್ಞಾನವಿಕಾಸ ಕೇಂದ್ರದ ಸಭೆ

Suddi Udaya
error: Content is protected !!